Bengaluru: ರಸ್ತೆ ನಿರ್ಮಾಣಕ್ಕಾಗಿ 800 ಮರ ಕಟಾವು: ಅನುಮತಿ ನೀಡಿದ ಬಿಬಿಎಂಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೈಋತ್ಯ ರೈಲ್ವೆ ಇಲಾಖೆಯು ಸಲ್ಲಿಸಿದ್ದ ಯಶವಂತಪುರ ರೈಲು ನಿಲ್ದಾಣದ ನವೀಕರಣ ಯೋಜನೆಯ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಮರ ಕಡಿಯುವುದರ ವಿರುದ್ಧ ಕೇವಲ ಒಂದು ಆಕ್ಷೇಪಣೆ ಮಾತ್ರ ಸಲ್ಲಿಕೆಯಾಗಿತ್ತು. ಅದರಲ್ಲಿ ಈಗಾಗ್ಲೇ ಬೆಂಗಳೂರಿನಲ್ಲಿ ಸಾಕಷ್ಟು ಮರಗಳನ್ನು ಅಭಿವೃದ್ಧಿಗಾಗಿ ನಾಶ ಪಡಿಸಲಾಗಿದೆ ಹೀಗಾಗಿ ಬೆಳೆದು ನಿಂತ ಮರ ಕಡಿಯದಂತೆ ಹಾಗೂ ಪರ್ಯಾಯ ಮಾರ್ಗ ಹುಡುಕುವಂತೆ ಆಗ್ರಹಿಸಲಾಗಿತ್ತು.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ನಗರದ ಮೂರು ಮಹತ್ವದ ಯೋಜನೆಗಳಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಲ್ಲಿ 800ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಅನುಮತಿ ನೀಡಿದೆ. ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿಬಿಎಂಪಿ ಮರ ಕಡಿಯಲು ಅನುಮತಿ ನೀಡಿದೆ ಎಂದು ವಿಷಯವನ್ನು(Subject) ದೃಢಪಡಿಸಿದ್ದಾರೆ. ಯಶವಂತಪುರ ರೈಲು ನಿಲ್ದಾಣದ ಪುನರಾಭಿವೃದ್ಧಿ, ಕರ್ನಾಟಕ ರಸ್ತೆ (Road) ಅಭಿವೃದ್ಧಿ (Development) ನಿಗಮದ (ಕೆಆರ್‌ಡಿಸಿಎಲ್) ರಸ್ತೆ ವಿಸ್ತರಣೆ ಮತ್ತು ಕೆಂಪಾಪುರ ಪ್ರದೇಶದಲ್ಲಿ ಮೆಟ್ರೋ ಯೋಜನೆಗಾಗಿ ಬಿಬಿಎಂಪಿ (BBMP) ಬರೋಬ್ಬರಿ 800ಕ್ಕೂಹೆಚ್ಚು ಮರಗಳನ್ನು ಕಡಿಯಲು ನಿರ್ಧರಿಸಿದೆ.


ಯೋಜನೆ ಸಮರ್ಥಿಸಿಕೊಂಡ ರೈಲ್ವೆ ಇಲಾಖೆ


ನೈಋತ್ಯ ರೈಲ್ವೆ ಇಲಾಖೆಯು ಸಲ್ಲಿಸಿದ್ದ ಯಶವಂತಪುರ ರೈಲು ನಿಲ್ದಾಣದ ನವೀಕರಣ ಯೋಜನೆಯ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಮರ ಕಡಿಯುವುದರ ವಿರುದ್ಧ ಕೇವಲ ಒಂದು ಆಕ್ಷೇಪಣೆ ಮಾತ್ರ ಸಲ್ಲಿಕೆಯಾಗಿತ್ತು. ಅದರಲ್ಲಿ ಈಗಾಗ್ಲೇ ಬೆಂಗಳೂರಿನಲ್ಲಿ ಸಾಕಷ್ಟು ಮರಗಳನ್ನು ಅಭಿವೃದ್ಧಿಗಾಗಿ ನಾಶ ಪಡಿಸಲಾಗಿದೆ ಹೀಗಾಗಿ ಬೆಳೆದು ನಿಂತ ಮರ ಕಡಿಯದಂತೆ ಹಾಗೂ ಪರ್ಯಾಯ ಮಾರ್ಗ ಹುಡುಕುವಂತೆ ಆಗ್ರಹಿಸಲಾಗಿತ್ತು.


ಆದರೆ ಈ ಹೇಳಿಕೆಯ ಬಗ್ಗೆ ವಿವರಣೆ ನೀಡಿದ ರೈಲ್ವೆ ಇಲಾಖೆ ಬೆಂಗಳೂರಿನ ಭವಿಷ್ಯದ ಅಗತ್ಯತೆ ಪೂರೈಕೆಗೆ ನಿಲ್ದಾಣದಲ್ಲಿರುವ ಪ್ರಸ್ತುತ ಸೌಕರ್ಯಗಳು ಅಸಮರ್ಪಕವಾಗಿದೆ ಎಂದು ಯೋಜನೆಯನ್ನು ಸಮರ್ಥಿಸಿಕೊಂಡಿತ್ತು. ಇದಾದ ಬಳಿಕ ಇಲಾಖೆಗೆ ಉದ್ದೇಶಿತ ಯೋಜನೆಯಲ್ಲಿ 79 ಮರಗಳ ಸಂರಕ್ಷಣೆ, 33 ಮರಗಳ ಬೇರೆ ಸ್ಥಳಾಂತರ ಹಾಗೂ 141 ಮರ ತೆರವಿಗೆ ಸೂಚಿಸಲಾಗಿತ್ತು.


ಗುಂಜೂರು-ಬೆಳತ್ತೂರು ರಸ್ತೆ ವಿಸ್ತರಣೆ


ಗುಂಜೂರು-ಬೆಳತ್ತೂರು ನಡುವಿನ 5 ಕಿ.ಮೀ ಉದ್ದದ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಉದ್ದೇಶ ಹೊಂದಿರುವ ಕೆಆರ್‌ಡಿಸಿಎಲ್‌ನ ಯೋಜನೆಗೂ ಆಕ್ಷೇಪ ವ್ಯಕ್ತವಾಗಿದೆ. ಪ್ರಸ್ತುತ ಈ ರಸ್ತೆಯು ವಾಹನ ದಟ್ಟಣೆಯಿಂದ ಕೂಡಿದೆ. ಸಮರ್ಪಕ ಹಾಗೂ ಸುಗಮ ವಾಹನ ಸಂಚಾರಕ್ಕೆ, ಟ್ರಾಫಿಕ್ ನಿವಾರಣೆಗೆ ಮರ ರಸ್ತೆ ಅಭಿವೃದ್ಧಿ ಎಂದು ತಿಳಿಸಲಾಗಿತ್ತು.ಈ ಯೋಜನೆಗಾಗಿ ಇಲ್ಲಿನ 163 ಮರ ಬಿಟ್ಟು 82 ಮರಗಳ ಸ್ಥಳಾಂತರಿಸಲು ಆದೇಶಿಸಲಾಗಿದ್ದರೂ ಸಹ ಸುಮಾರು 480 ಮರಗಳನ್ನು ಕಡಿಯಲೇಬೇಕು ಎನ್ನಲಾಗಿದೆ.


ಇದನ್ನೂ ಓದಿ: Crime news: ಮುಂಬೈನಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ: ಬೀದಿಜಗಳದಿಂದ ದಂಧೆಯ ಅಸಲಿ ಕಹಾನಿ ಬಹಿರಂಗ!


ಕೆಂಪಾಪುರ ಕ್ರಾಸ್ ಮತ್ತು ಟೆಲಿಕಾಂ ಲೇಔಟ್​ ಮಧ್ಯೆ ಮೆಟ್ರೊ


ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ಕೆಂಪಾಪುರ ಕ್ರಾಸ್ ಮತ್ತು ದೂರವಾಣಿ ನಗರ ಮಧ್ಯೆ ಮೆಟ್ರೊ ಮಾರ್ಗ ಮತ್ತು ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದೆ. ORR ಏರ್‌ಪೋರ್ಟ್ ಲೈನ್ ಯೋಜನೆಗೆ ಒಟ್ಟು 97 ಆಕ್ಷೇಪಣೆ ಸಲ್ಲಿಕೆ ಆಗಿದ್ದವು. 14 ಮರ ಉಳಿಸಿ, 43 ಮರ ಬೇರೆಡೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಇನ್ನೂ ಯೋಜನೆಗಾಗಿ 203 ಮರಗಳನ್ನು ಕಡಿಯಲು ನಿರ್ಧರಿಸಲಾಗಿದೆ.


ಅಭಿವೃದ್ಧಿಗಾಗಿ ವಿನಾಶ


ಬೆಂಗಳೂರಲ್ಲಿ ಇಂತಹ ಪ್ರಕರಣಗಳು ಸರ್ವೇ ಸಾಮಾನ್ಯವಾಗಿವೆ. ಅಭಿವೃದ್ಧಿಗಾಗಿ ವಿನಾಶ ಎಂಬಂತೆ ಬಿಬಿಎಂಪಿ ಈಗಾಗ್ಲೇ ಸಾವಿರಾರು ಮರಗಳ ಮಾರಣ ಹೋಮ ಮಾಡಿದೆ. ಬಿಬಿಎಂಪಿಯ ನಡೆಗೆ ಪ್ರತಿ ಸಾರಿ ಕೂಡ ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ ಅಭಿವೃದ್ಧಿಗೆ ಮರಗಳನ್ನು ಕಡಿಯುವುದು ಅನಿವಾರ್ಯ ಎನ್ನುತ್ತದೆ ಬಿಬಿಎಂಪಿ. ಆದರೆ ಮರಗಳನ್ನು ಕಡಿಯುವ ಬದಲು ಅವುಗಳನ್ನು ಬೇರೆಡೆಗೆ ಕಡಿಯದೇ ಸ್ಥಳಾಂತರಿಸಿ ಎನ್ನುವುದು ಪರಿಸರವಾದಿಗಳ ವಾದ.




ಕಳೆದ ವರ್ಷ ಡಿಸೆಂಬರ್‌ನಲ್ಲೂ ಕೂಡ ಅರಮನೆ ಮೈದಾನದಲ್ಲಿನ (ಗೇಟ್ ಸಂಖ್ಯೆ 4 ರಿಂದ 9) ದಶಕಗಳಷ್ಟು ಹಳೆಯದಾದ ಸುಮಾರು 54 ಮರಗಳನ್ನು ಕಡಿಯಲು ಬಿಬಿಎಂಪಿಯ ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಈಗ ಬಿಬಿಎಂಪಿ ಮರಗಳನ್ನು ಕಡಿಯಲು ಅನುಮತಿ ನೀಡಿದ್ದು ನೂರಲ್ಲ, ಇನ್ನೂರಲ್ಲ ಬರೋಬ್ಬರಿ 800ಕ್ಕೂ ಹೆಚ್ಚು ಮರಗಳಿಗಾಗಿ. ಹೀಗಾಗಿ ಪರಿಸರವಾದಿಗಳು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಬೇಕಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು