ಖಿನ್ನತೆಯಿಂದ ಪಾರಾಗಲು ಬೆಂಗಳೂರಿನ ಜನರಿಗೆ ಸಿಕ್ಕ ಬೆಸ್ಟ್​ ಫ್ರೆಂಡ್​ ಯಾರು ಗೊತ್ತೇ?

ಒಂಟಿತನ ಹೋಗಲಾಡಿಸೋಕೆ ಅನೇಕರು ಸಾಕುಪ್ರಾಣಿಗಳ ಮೊರೆ ಹೋಗಿದ್ದಾರೆ. ಕೆಲವರು ನಾಯಿಮರಿಗಳನ್ನು ದತ್ತು ಪಡೆದರೆ, ಮತ್ತೆ ಕೆಲವರು ಹಣ ಕೊಟ್ಟು ಕೊಂಡುಕೊಳ್ತಿದ್ದಾರೆ. ಇದೆಲ್ಲದ್ರಿಂದ ನಾಯಿಮರಿಗಳ ಬೆಲೆಯೂ ದುಪ್ಪಟ್ಟಾಗಿದೆ ಎನ್ನುತ್ತಾರೆ ಶ್ವಾನ ನಡವಳಿಕೆ ತಜ್ಞ ಅಮೃತ್ ಹಿರಣ್ಯ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು(ಸೆ.02): ಕೋವಿಡ್ ಬಂದ ನಂತರ ಜನ ಸಾಕು ಪ್ರಾಣಿಗಳನ್ನು ಮನೆಗೆ ತರೋದು ಜಾಸ್ತಿ ಆಗಿದೆಯಂತೆ, ಅದ್ರಲ್ಲೂ ಹೆಚ್ಚಾಗಿ ಮನುಷ್ಯನ ಬೆಸ್ಟ್ ಫ್ರೆಂಡ್ ನಾಯಿ ಈಗ ಮತ್ತಷ್ಟು ಹತ್ತಿರವಾಗಿದೆ. ಇದ್ರಿಂದಾಗಿ ನಾಯಿ ಮರಿಗಳಿಗೆ ಡಿಮ್ಯಾಂಡ್ ಜಾಸ್ತಿ ಆಗಿರೋದು ಮಾತ್ರವಲ್ಲ, ಜನರ ಒಂಟಿತನದ ಖಾಯಿಲೆಗೂ ಒಳ್ಳೆ ಚಿಕಿತ್ಸೆ ಸಿಕ್ಕಂತಾಗಿದೆ. ಕೊರೋನಾದ ಬೇಸರದಿಂದ ಪಾರಾಗಲು ನಾಯಿಗಳ ಸಹಕಾರ ಹೇಗಿದೆ. ಇಲ್ಲಿದೆ ಫುಲ್ ಡೀಟೆಲ್ಸ್.

ಕೋವಿಡ್...ಅದ್ರಿಂದ ಬಂದ ಲಾಕ್ ಡೌನ್.. ತಿಂಗಳುಗಟ್ಟಲೆ ಮನೆಯಿಂದ ಹೊರಗೇ ಹೋಗದ ಪರಿಸ್ಥಿತಿ.. ಇದೆಲ್ಲಾ ಇಡೀ ಜಗತ್ತಿಗೆ ಹೊಸ ವಿಚಾರಗಳು. ಈ ಸಂದರ್ಭದಲ್ಲಿ ಜನರನ್ನು ಅತಿ ಹೆಚ್ಚು ಕಾಡಿದ್ದು ಕೋವಿಡ್ ಅಲ್ಲ, ಖಿನ್ನತೆ. ಜನಸಂಪರ್ಕವಿಲ್ಲದೆ, ಮನೆಯೊಳಗೇ ಬಂಧಿಯಾದ ಜನ ಹೆಚ್ಚು ಖಿನ್ನತೆಗೆ ಒಳಗಾದರು. ಆಗ ಬಂದಿದ್ದೇ ಮಾನವನ ಬೆಸ್ಟ್ ಫ್ರೆಂಡ್ ಅಂದ್ರೆ ನಾಯಿ.ನನ್ನ ಕ್ಷೇತ್ರದಲ್ಲಿ ವಸೂಲಿ ರಾಜಕಾರಣಕ್ಕೆ ಅವಕಾಶವಿಲ್ಲ; ಚನ್ನಪಟ್ಟಣದಲ್ಲಿ ಗುಡುಗಿದ ಎಚ್​.ಡಿ.ಕುಮಾರಸ್ವಾಮಿ

ಒಂಟಿತನ ಹೋಗಲಾಡಿಸೋಕೆ ಅನೇಕರು ಸಾಕುಪ್ರಾಣಿಗಳ ಮೊರೆ ಹೋಗಿದ್ದಾರೆ. ಕೆಲವರು ನಾಯಿಮರಿಗಳನ್ನು ದತ್ತು ಪಡೆದರೆ, ಮತ್ತೆ ಕೆಲವರು ಹಣ ಕೊಟ್ಟು ಕೊಂಡುಕೊಳ್ತಿದ್ದಾರೆ. ಇದೆಲ್ಲದ್ರಿಂದ ನಾಯಿಮರಿಗಳ ಬೆಲೆಯೂ ದುಪ್ಪಟ್ಟಾಗಿದೆ ಎನ್ನುತ್ತಾರೆ ಶ್ವಾನ ನಡವಳಿಕೆ ತಜ್ಞ ಅಮೃತ್ ಹಿರಣ್ಯ.ಮನೆಯಲ್ಲೇ ಕೇವಲ ಹಿರಿಯರೇ ಇದ್ದಾಗ ಅವರ ಒಂಟಿತನ ನೀಗಿಸೋಕೆ ನಾಯಿಗಳು ಬಹು ಸಹಕಾರಿ. ಶಾಲೆಗಳೂ ಇರದೇ ಇರುವ ಹಿನ್ನೆಲೆಯಲ್ಲಿ ಇಡೀ ದಿನ ಮಕ್ಕಳನ್ನು ಬ್ಯುಸಿಯಾಗಿಡಲು ಸಾಕು ಪ್ರಾಣಿಗಳು ಬೇಕು ಎಂದು ನಾಯಿಯನ್ನು ಮನೆಗೆ ತಂದವರಿದ್ದಾರೆ.‌ ಪೆಟ್ ಥೆರಪಿ ಎನ್ನುವ ಚಿಕಿತ್ಸಾ ವಿಧಾನವನ್ನು ಮನಶಾಸ್ತ್ರಜ್ಞರು ಕೂಡಾ ಚಿಕಿತ್ಸೆಯಲ್ಲಿ ಬಳಸ್ತಾರೆ. ಪುಟ್ಟ ಮಕ್ಕಳು ಮನೆಯಲ್ಲಿ ಇದ್ದಾಗ ಪ್ರಾಣಿಗಳ ಜೊತೆ ಬೆಳೆದರೆ ಅವರ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುವುದೂ ಅನೇಕರ ಅನಿಸಿಕೆ.

ಪ್ರಾಣಿಗಳು ತೋರಿಸೋ ನಿಶ್ಕಲ್ಮಶ ಪ್ರೀತಿಯಿಂದ ದೇಹದಲ್ಲಿ ಕೆಲವು ಸಂತಸದ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ.‌ ಇದರಿಂದ  ಮನಸ್ಸಿಗೆ ನೆಮ್ಮದಿ, ಖುಷಿ ಕೊಡುತ್ತದೆ ಎನ್ನುತ್ತಾರೆ ಮನಶಾಸ್ತ್ರಜ್ಞ ಡಾ ಅಲೋಕ್ ಕುಲಕರ್ಣಿ. ಇಷ್ಟು ಆಸೆಯಿಂದ ಮನೆಗೆ ತಂದ ಪ್ರಾಣಿಗಳನ್ನು ಜನ ಚೆನ್ನಾಗಿ ನೋಡಿಕೊಳ್ಳೋದು ಕೂಡಾ ಅಷ್ಟೇ ಮುಖ್ಯ. ಕೋವಿಡ್ ಮುಗಿದ ಮೇಲೆ ಅವುಗಳನ್ನು ಬೀದಿಗೆ ತಳ್ಳದಿದ್ದರೆ ಅಷ್ಟೇ ಸಾಕು ಎನ್ನುವುದಷ್ಟೇ ನಮ್ಮ ಆಶಯ.
Published by:Latha CG
First published: