ಕಾರುಗಳಿಗೂ ಬಂತು ಸ್ಯಾನಿಟೈಸರ್; ಬೆಂಗಳೂರಲ್ಲಿ ಫಾಗ್ ಸ್ಯಾನಿಟೈಸರ್​ಗೆ ಭಾರೀ ಬೇಡಿಕೆ

Bangalore News: ಲಾಕ್ ಡೌನ್ ಸಡಿಲಿಕೆ ಬಳಿಕ ಕಾರುಗಳ ಸ್ಯಾನಿಟೈಸರ್‌ಗೆ ಬೇಡಿಕೆ ಆರಂಭವಾಗಿದೆ. ಲಾಕ್ ಡೌನ್ ನಲ್ಲಿ ಸಂಕಷ್ಟದಲ್ಲಿದ್ದ ಸರ್ವಿಸ್ ಸೆಂಟರ್ ಗೆ  ಇದೀಗ ಇದೇ ಬ್ಯುಸಿನೆಸ್ ಆಗಿ ಪರಿಣಮಿಸುತ್ತಿದೆ.

news18-kannada
Updated:June 3, 2020, 9:36 PM IST
ಕಾರುಗಳಿಗೂ ಬಂತು ಸ್ಯಾನಿಟೈಸರ್; ಬೆಂಗಳೂರಲ್ಲಿ ಫಾಗ್ ಸ್ಯಾನಿಟೈಸರ್​ಗೆ ಭಾರೀ ಬೇಡಿಕೆ
ಬೆಂಗಳೂರಿನ ಸರ್ವಿಸ್​ ಸೆಂಟರ್​ಗಳಲ್ಲಿ ಕಾರುಗಳಿಗೆ ಸ್ಯಾನಿಟೈಸೇಷನ್
  • Share this:
ಬೆಂಗಳೂರು (ಜೂ. 3): ಎರಡು ತಿಂಗಳ ಲಾಕ್​ಡೌನ್ ಸಡಿಲಿಕೆ‌ ಬಳಿಕ ಸ್ಥಗಿತಗೊಂಡಿದ್ದ ವೆಹಿಕಲ್ ಸರ್ವಿಸ್ ಸೆಂಟರ್ ಇದೀಗ ಮತ್ತೆ ಚೇತರಿಸಿಕೊಳ್ಳುತ್ತಿದೆ. ಈ ಚೇತರಿಕೆಗೆ ವೆಹಿಕಲ್ ಗೂ ಸ್ಯಾನಿಟೈಸ್ ಮಾಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ‌! ಮನುಷ್ಯರಿಗೆ ಮಾತ್ರವಲ್ಲ ನಮ್ಮ ವಾಹನಗಳು ಸ್ಯಾನಿಟೈಸ್ ಆಗಬೇಕಿದೆ. ಬೆಂಗಳೂರಿನಲ್ಲಂತೂ ವೆಹಿಕಲ್ ಫಾಗ್ ಸ್ಯಾನಿಟೈಸರ್ ಗೆ ಡಿಮ್ಯಾಂಡ್ ಹೆಚ್ಚಾಗಿದೆ.

ಕೊರೋನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆ ಸರ್ಕಾರ ಜನತಾ ಕರ್ಫ್ಯೂ ಬಳಿಕ ನಿರಂತರವಾಗಿ ಎರಡು ತಿಂಗಳಿ ಲಾಕ್​ಡೌನ್ ಘೋಷಣೆ ಮಾಡಿತ್ತು. ಇದರಿಂದ ಇಡೀ ದೇಶವೇ ಆರ್ಥಿಕ ಚಟುವಟಿಕೆ ಸ್ಥಬ್ಧಗೊಂಡಿತ್ತು. ತಿಂಗಳುಗಟ್ಟಲೆ ವಾಹನಗಳು ರಸ್ತೆಗಿಳಿಯಲೇ ಇಲ್ಲ. ಆದರೀಗ ಲಾಕ್ ಡೌನ್ ಸಡಲಿಕೆಯಾಗಿದ್ದು, ಕೊರೋನಾ ವೈರಸ್ ಜೊತೆಗೆ ಜೀವನ ಮಾಡಬೇಕಾಗಿರುವ ಅನಿವಾರ್ಯತೆಗೆ ಬಂದಿದ್ದೇವೆ.

ಇಂಥ ಸಂದರ್ಭದಲ್ಲಿ ಜನರೆಲ್ಲ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಕೈಗೆ ಸ್ಯಾನಿಟೈಸ್ ಬಳಸಿ ಕೈ ತೊಳೆದು ಕೊರೋನಾ ತಡೆಯುತ್ತಿದ್ದೇವೆ. ಆದರೆ, ನಾವು ಬಳಸುವ ವಾಹನಗಳು, ಅದರಲ್ಲೂ ಎಲ್ಲೋ ಬೋರ್ಡ್ ವಾಹನಗಳು ಸ್ಯಾನಿಟೈಸ್ ಆಗಬೇಕಲ್ಲವೇ? ಇದೇ ಕಾರಣಕ್ಕೆ ವಾಹನಗಳು ಸ್ಯಾನಿಟೈಸ್ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಕಾರಣಕ್ಕೆ ಬೆಂಗಳೂರಿನ ಜಯನಗರದ ವೆಹಿಕಲ್ ಸರ್ವಿಸ್ ಸೆಂಟರ್ ಗಣೇಶ್ ರಾವ್ ಎನ್ನುವವರು ವಾಹನಗಳಿಗೆ ಸರ್ವಿಸ್ ಜೊತೆ ಸ್ಯಾನಿಟೈಸ್ ಮಾಡುತ್ತಿದ್ದಾರೆ. ವಾಹನದ ಹೊರಭಾಗ ಅದರಲ್ಲಿ ಮುಖ್ಯವಾಗಿ ಒಳಭಾಗದಲ್ಲಿ ಫಾಗ್ ಸ್ಯಾನಿಟೈಸ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ರಾಮ ರಾಮ..! ಸೀತೆಗೆ ಎಷ್ಟು ಮಕ್ಕಳು?; ತಿರುಪತಿ ತಿಮ್ಮಪ್ಪ ದೇವಾಲಯದಿಂದ ಹೊರಬಿತ್ತು ವಿವಾದಾತ್ಮಕ ರಾಮಾಯಣ

ಸ್ಯಾನಿಟೈಸರ್ ಬಳಕೆ ಮಾಡುವ ರಾಸಾಯನಿಕಗಳಿಂದ ವಾಹನಗಳಿಗೂ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಆಲ್ಕೋಹಾಲ್, ಗ್ಲಿಸರಿನ್, ಎಲೆಯ ಎಣ್ಣೆ, ನಿಂಬೆಹಣ್ಣು, ಟೀ ಟ್ರಿ ಆಯಿಲ್ ಮಿಶ್ರಿತ ರಾಸಾಯನಿಕ ಮಿಶ್ರಿತವಾದ ಸ್ಯಾನಿಟೈಸರ್ ಇದು. ಈ ರಾಸಾಯನಿಕವನ್ನು ಮೆಷಿನ್ ಮೂಲಕ ಬಿಸಿ ಮಾಡಿ ಸ್ಯಾನಿಟೈಸರ್ ಮಾಡಲಾಗುತ್ತಿದೆ. ವಾಹನದೊಳಗೆ 5ರಿಂದ 10 ನಿಮಿಷದವರೆಗೆ ಫಾಗ್ ಸ್ಯಾನಿಟೈಸರ್ ಮಾಡಲಾಗುತ್ತದೆ. ಕಾರು ಕ್ಲೀನ್ ಮಾಡುವ ಜೊತೆಗೆ ಸ್ಯಾನಿಟೈಸ್ ಗೆ ಹೆಚ್ಚು ಬೇಡಿಕೆ ಬರುತ್ತಿದೆ. ಈ ಫಾಗ್ ಸ್ಯಾನಿಟೈಸರ್‌ ಸಿಂಪಡಣೆಯಿಂದ ಕೊರೋನಾ ವೈರಸ್ ಮಾತ್ರವಲ್ಲ ಬ್ಯಾಕ್ಟೀರಿಯಾ ನಾಶವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಜಯನಗರದ ವೆಹಿಕಲ್ ಸರ್ವಿಸಿಂಗ್ ಸರ್ವಿಸ್ ಸೆಂಟರ್ ಮಾಲಿಕ ಗಣೇಶ್ ರಾವ್.

Bangalore People Demanding for fog Sanitizer in Their Cars due to Coronavirus Scare.
ಕಾರು ಸ್ಯಾನಿಟೈಸೇಷನ್


ಲಾಕ್ ಡೌನ್ ಸಡಿಲಿಕೆ ಬಳಿಕ ಕಾರುಗಳ ಸ್ಯಾನಿಟೈಸರ್‌ಗೆ ಬೇಡಿಕೆ ಆರಂಭವಾಗಿದೆ. ಲಾಕ್ ಡೌನ್ ನಲ್ಲಿ ಸಂಕಷ್ಟದಲ್ಲಿದ್ದ ಸರ್ವಿಸ್ ಸೆಂಟರ್ ಗೆ  ಇದೀಗ ಇದೇ ಬ್ಯುಸಿನೆಸ್ ಆಗಿ ಪರಿಣಮಿಸುತ್ತಿದೆ. ಯೆಲ್ಲೋ ಬೋರ್ಡ್ ಹಾಗೂ ವೈಯಕ್ತಿಕ ಬಳಕೆಯ ವಾಹನಗಳು ಸ್ಯಾನಿಟೈಸರ್ ಮಾಡಿಸಲು ವಾಹನ ಮಾಲಿಕರು ಬರುತ್ತಿದ್ದಾರೆ. ಅಪಾರ್ಟ್ಮೆಂಟ್ ನಲ್ಲಿ ನಿಂತಿರುವ ವಾಹನಗಳಿಗೆ ಸ್ಯಾನಿಟೈಸ್ ಮಾಡುವ ಬಗ್ಗೆ ಸರ್ವಿಸ್ ಸೆಂಟರ್ ಮಾಲಿಕರಿಗೆ ಕರೆ ಬರುತ್ತಿವೆ. ಬೆಂಗಳೂರು ಜೆ.ಪಿ. ನಗರ, ಜಯನಗರ, ರಾಜಾಜಿನಗರ ಸೇರಿದಂತೆ ಹಲವೆಡೆ ಸ್ಯಾನಿಟೈಸರ್ ಮಾಡಲಾಗುತ್ತಿದೆ.ಇದನ್ನೂ ಓದಿ: ಗುಜರಾತ್​ನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ; 5 ಸಾವು, 40ಕ್ಕೂ ಹೆಚ್ಚು ಕಾರ್ಮಿಕರ ಸ್ಥಿತಿ ಗಂಭೀರ

ಲಾಕ್ ಡೌನ್ ಸಡಿಲಿಕೆ ನಂತರ ಕೊರೋನಾಗೆ ಮುಂಜಾಗ್ರತೆ ತೆಗೆದುಕೊಳ್ಳಲು ಕಾರು‌ ಮಾಲಿಕರು ಸ್ಯಾನಿಟೈಸರ್‌ ಮಾಡಿಸಲು ಮುಂದು ಬರುತ್ತಿದ್ದಾರೆ. ಅನ್ ಲಾಕ್ ಸಂದರ್ಭದಲ್ಲಿ ವಾಹನಗಳ ಸ್ಯಾನಿಟೈಸ್ ಮಾಡಿಸುವುದು ಅನಿವಾರ್ಯ. ಕಚೇರಿ, ಮನೆಗೆ ಓಡಾಡುತ್ತಿರುತ್ತೇವೆ. ಕೆಲವೊಮ್ಮೆ ಬೇರೆ ಊರುಗಳಿಗೆ ಹೋಗಿಬಂದಿರುತ್ತೇವೆ. ಇಂಥ ಸಂದರ್ಭದಲ್ಲಿ ನಮ್ಮ ಕುಟುಂಬದವರ ಸಂಬಂಧಿಕರ ಜೊತೆ ಕಾರಿನಲ್ಲಿ ಪ್ರಯಾಣ ಮಾಡಿರುತ್ತೇವೆ. ಇಂಥ ಸಂದರ್ಭದಲ್ಲಿ ಕಾರು ಸ್ಯಾನಿಟೈಸ್ ಮಾಡಿಸುವ ಮೂಲಕ ಸಾಧ್ಯವಾದಷ್ಟು ಕೊರೋನಾ ಬಾರದಂತೆ ತಡೆಯಬಹುದು ಎನ್ನುತ್ತಾರೆ ಕಾರಿನ ಮಾಲಿಕ ಕುಮಾರ್‌.First published: June 3, 2020, 9:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading