ನಂದಿ ಬೆಟ್ಟಕ್ಕೆ ಮಹಾತ್ಮ ಗಾಂಧಿ ಆಗಾಗ ಭೇಟಿ ಕೊಡಲು ಕಾರಣವೇನಿತ್ತು?

ನಂದಿಬೆಟ್ಟಕ್ಕೂ ಗಾಂಧೀಜಿಗೂ ಎಲ್ಲಿಲ್ಲದ ನಂಟು. ಮಹಾತ್ಮ ಗಾಂಧಿಯವರ ಆರೋಗ್ಯದಲ್ಲಿ ಕೊಂಚ ಎರುಪೇರಾದ್ರು ಅವರ ನೆನಪಿಗೆ ಬರುತ್ತಿದದ್ದು ನಂದಿಬೆಟ್ಟ. ಆ ತಕ್ಷಣವೇ ಅವರು ನಂದಿಬೆಟ್ಟಕ್ಕೆ ಬಂದು ಬೀಡುತ್ತಿದ್ರು. ತಮ್ಮ ಜೀವಿತಾವಧಿಯಲ್ಲಿ ಸಬರಮತಿ ಅಶ್ರಮ ಬಿಟ್ಟರೆ ಅತಿ ಹೆಚ್ಚು ದಿನ ತಂಗಿದ್ದು ನಂದಿಗಿರಿಧಾಮದಲ್ಲಿ. 1927 ಮತ್ತು 1931ರಲ್ಲಿ 3 ಬಾರಿ ನಂದಿಬೆಟ್ಟಕ್ಕೆ ಬಂದಿದ್ದ ಗಾಂಧೀಜಿಯವರು ಒಟ್ಟು 66 ದಿನ ಇಲ್ಲಿಯೇ ಇದ್ದು ವಿಶ್ರಾಂತಿ ತೆಗೆದು ಕೊಂಡಿದ್ರು.

news18-kannada
Updated:November 11, 2019, 9:53 AM IST
ನಂದಿ ಬೆಟ್ಟಕ್ಕೆ ಮಹಾತ್ಮ ಗಾಂಧಿ ಆಗಾಗ ಭೇಟಿ ಕೊಡಲು ಕಾರಣವೇನಿತ್ತು?
ಮಹಾತ್ಮ ಗಾಂಧಿ
  • Share this:
ಚಿಕ್ಕಬಳ್ಳಾಪುರ: 1936 ರ ಮೇ 10 ರಂದು ಮದ್ರಾಸಿಗೆ ಬಂದಿದ್ದ ಗಾಂಧೀಜಿಗೆ ರಕ್ತದೊತ್ತಡ ಹೆಚ್ಚಿ ವೈದ್ಯರು ವಿಶ್ರಾಂತಿಗೆ ಸೂಚನೆ ನೀಡುತ್ತಾರೆ. ಆಗ ಗಾಂಧೀಜಿಯವರಿಗೆ ನೆನಪಿಗೆ ಬಂದಿದ್ದು ನಂದಿಗಿರಿಧಾಮ. 1927 ರಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ನಂದಿಬೆಟ್ಟದಲ್ಲಿ 45 ದಿನ ವಿಶ್ರಾಂತಿ ತೆಗೆದುಕೊಂಡಿದ್ರು.  ಆ ಸಮಯದಲ್ಲಿ ನಂದಿಬೆಟ್ಟದ ಸೌಂದರ್ಯವನ್ನು ಸವಿದಿದ್ದ ಗಾಂಧೀಜಿ  ಮತ್ತೆ ನಂದಿಗಿರಿಧಾಮದಲ್ಲಿಯೇ ವಿಶ್ರಾಂತಿ ತೆಗೆದು ಕೊಳ್ಳುವ ಆಸೆಯನ್ನ ವ್ಯಕ್ತಪಡಿಸಿದ್ರು. ಆ ದಿನಗಳಲ್ಲಿ ನಂದಿಬೆಟ್ಟಕ್ಕೆ ರಸ್ತೆಯ ಸಂಪರ್ಕ ಇರಲಿಲ್ಲ. 1775 ಮೆಟ್ಟಿಲುಗಳನ್ನು ಹತ್ತಿಯೇ ಗಿರಿಧಾಮದ ತುದಿಯನ್ನ ತಲುಪಬೇಕಿತ್ತು.  ವಯಸ್ಸಾದವರು ಮತ್ತು ಉಳ್ಳವರು ಡೋಲಿಯ ಮೊರೆ ಹೋಗ್ತಾ ಇದ್ರು. ಗಾಂಧೀಜಿಯವರಿಗೆ ಡೋಲಿಯಲ್ಲೂ ಹೋಗಲು ಇಷ್ಟ ಇರಲಿಲ್ಲ. ಡೋಲಿಯನ್ನ ಹೊತ್ತು ಸಾಗುತ್ತಿದ್ದ ಜನರ ಕಷ್ಟವನ್ನ ನೋಡಿದ್ದ ಗಾಂಧಿ ಡೋಲಿಯನ್ನ ನಿರಾಕಾರಿಸಿದ್ರು. ಅದರೆ 1927ರಲ್ಲಿ ತೀವ್ರವಾಗಿ ಆರೋಗ್ಯ ಹದಗೆಟ್ಟಿದರಿಂದ ಡೋಲಿಯ ಮೂಲಕವೇ ನಂದಿಗಿರಿಧಾಮ ತಲುಪಬೇಕಾಯಿತು.  45 ದಿನ ನಂದಿಬೆಟ್ಟದಲ್ಲಿ ತಂಗಿದ್ದ ಗಾಂಧಿ ನಂದಿಗಿರಿಧಾಮದ ಸೌಂದರ್ಯಕ್ಕೆ ಸೋತು ಹೋಗಿದ್ರು. ಇಲ್ಲಿನ ವಾತಾವರಣ ಗಾಂಧೀಜಿಯವರು ಆರೋಗ್ಯವನ್ನ ಸುಧಾರಿಸುವಂತೆ ಮಾಡಿತ್ತು.

ಸ್ವಾತಂತ್ರ್ಯ ಹೋರಾಟದ ಮುಂದಾಳತ್ವ ವಹಿಸಿದ್ದ ಗಾಂಧೀಜಿಯವರು ದೇಶದೆಲ್ಲಡೆ ಸಂಚಾರಿಸಿ ಜನರಲ್ಲಿ ಜಾಗೃತಿ ಮೂಡಿಸಿಬೇಕಿತ್ತು. 1937ರಲ್ಲಿ ರೈಲಿನಲ್ಲಿ ಮದ್ರಾಸಿಗೆ ಬಂದಾಗ ತೀವ್ರ ರಕ್ತದೊತ್ತಡ ಗಾಂಧೀಜಿಯವರನ್ನ ಕಾಡಿತ್ತು. ವೈದ್ಯರು ಗಾಂಧೀಜಿಯವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ರು. ವಿಶ್ರಾಂತಿಗೆ ನಂದಿಗಿರಿಧಾಮ ಸೂಕ್ತ ಎಂದು ಆಪ್ತರು ಕೊಟ್ಟ ಸಲಹೆ ಮೇರೆಗೆ ಗಾಂಧೀಜಿ ಇಲ್ಲಿಗೆ ಬರಲ ನಿರ್ಧರಿಸಿದರು. ಮದ್ರಾಸ್​ನಿಂದ ಬೆಂಗಳೂರಿನ ಕುಮಾರಕೃಪಗೆ ಬಂದ ಗಾಂಧೀಜಿ, ಅಲ್ಲಿಂದ ನಂದಿಬೆಟ್ಟಕ್ಕೆ ಪ್ರಯಾಣ ಬೆಳೆಸಿದ್ರು. ನಂದಿಬೆಟ್ಟದ ಬುಡದಲ್ಲಿರುವ ಸುಲ್ತಾನ್ ಪೇಟೆಯ ಮೂಲಕ ಮೆಟ್ಟಿಲು ದಾರಿಯಲ್ಲಿ ನಂದಿಬೆಟ್ಟಕ್ಕೆ ಹೋಗಬೇಕಿದ್ದ. ಗಾಂಧೀಜಿಯವರನ್ನು ಹೊತ್ತೊಯ್ಯಲು ಡೋಲಿಯನ್ನು ಸಿದ್ದತೆ ಮಾಡಲಾಯಿತು. ಅದರೆ ಈ ಬಾರಿ ಗಾಂಧಿ ಡೋಲಿಯಲ್ಲಿ ಹೋಗುವುದಕ್ಕೆ ನಿರಕಾರಿಸಿದ ಗಾಂಧಿ, ಸ್ವತಹ 1,775 ಮೆಟ್ಟಿಲು ಹತ್ತಿ ನಂದಿಗಿರಿಧಾಮ ತಲುಪಿದ್ರು.

ಗಾಂಧಿಯವರು ನಂದಿಬೆಟ್ಟಕ್ಕೆ ಬಂದಿದ್ರು ಅನ್ನೋದೇ ನಮಗೆ ಖುಷಿಯ ವಿಚಾರ ಎಂದು  ಚಿಕ್ಕಬಳ್ಳಾಪುರ ಜಿಲ್ಲೆಯವರೇ ಆದ ಸಿನಿಮಾ ನಿರ್ದೇಶಕ ಆರ್. ಚಂದ್ರು ಗಾಂಧಿ ಹೇಳಿಕೊಳ್ಳುತ್ತಾರೆ.

“ಗಾಂಧೀಜಿ ಅವರು ತಂಗಿದ್ದ ಜಾಗದಲ್ಲಿ ಕೂತುಕೊಂಡು ‘ಐ ಲವ್ ಯೂ’ ಸಿನಿಮಾಕ್ಕೆ ಸ್ಕ್ರಿಪ್ಟ್ ಬರೆಯುತ್ತಿದ್ದೇವೆ. 1927ರಿಂದ 1931ರವರೆಗೂ ಗಾಂಧೀಜಿಯವರು ನಂದಿಬೆಟ್ಟಕ್ಕೆ 3 ಬಾರಿ ಭೇಟಿ ಕೊಟ್ಟಿದ್ದಾರೆ. ಬೆಂಗಳೂರಿಗೆ ಈ ಅವಧಿಯಲ್ಲಿ 5 ಬಾರಿ ಬಂದಿರುತ್ತಾರೆ. ಅದರಲ್ಲಿ ನಂದಿಬೆಟ್ಟಕ್ಕೆ 3 ಬಾರಿ ತಪ್ಪದೇ ಬಂದು ಹೋಗ್ತಾರೆ… ಬೆಂಗಳೂರಿಗೆ ಬಹಳ ಹತ್ತಿರದಲ್ಲಿರುವ ನಂದಿಬೆಟ್ಟವನ್ನ ಕರ್ನಾಟಕದ ಊಟಿ ಎಂದೂ ಕರೆಯುತ್ತಾರೆ. ವಿಶ್ವೇಶ್ವರಯ್ಯನವರ ಊರೂ ಕೂಡ ಇಲ್ಲೇ ಸಮೀಪ ಇದೆ. ಗಾಂಧೀಜಿಯವರು ಇಲ್ಲಿ 3 ಭೇಟಿಯಲ್ಲಿ ಒಟ್ಟು 66 ದಿನಗಳ ಇರುತ್ತಾರೆ. ಇಂಥ ನಂದಿಬೆಟ್ಟದ ಸಮೀಪ ನಾವು ವಾಸಿಸುತ್ತಿರುವುದು ನಮ್ಮ ಪುಣ್ಯ,” ಎಂದು ತಾಜ್ ಮಹಲ್ ಸಿನಿಮಾ ಖ್ಯಾತಿಯ ನಿರ್ದೇಶಕ ಆರ್. ಚಂದ್ರು ತಿಳಿಸುತ್ತಾರೆ.

ನಂದಿ ಬೆಟ್ಟದಲ್ಲಿ ಗಾಂಧೀಜಿ ಭೇಟಿಯ ಕ್ಷಣಗಳನ್ನು ನೆನಪಿಸುವ ಚರಕ ಇಲ್ಲಿದೆ. ಹಾಗೆಯೇ ಬಟ್ಟೆ ನೇತುಹಾಕಲು ಗಾಂಧೀಜಿ ಬಳಸುತ್ತಿದ್ದರೆನ್ನಲಾದ ಒಂದು ಸ್ಟ್ಯಾಂಡ್ ಕೂಡ ಇದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಗಾಂಧೀಜಿ ಭೇಟಿ ಬಗ್ಗೆ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಪ್ರಕಾಶ್ ಹೇಳುತ್ತಾರೆ.

ರಾಣಿ ಎಲಿಜಬೆತ್, ರಾಜೀವ್ ಗಾಂಧಿ ಮೊದಲಾದವರಿಂದಲೂ ಭೇಟಿ:
ನಂದಿಗಿರಿಧಾಮಕ್ಕೆ ಭೇಟಿ ನೀಡಿದ ಪ್ರಖ್ಯಾತರ ದೊಡ್ಡ ಪಟ್ಟಿಯೇ ಇದೆ.  ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಬೆಂಗಳೂರಿನಲ್ಲಿ ಸಾರ್ಕ್ ಶೃಂಗ ಸಭೆ ನಡೆದಿತ್ತು. ಆಗ ಸಾರ್ಕ್ ರಾಷ್ಟ್ರಗಳ ಪ್ರಮುಖರೆಲ್ಲರೂ ನಂದಿಬೆಟ್ಟಕ್ಕೆ ಬಂದು, ಇಲ್ಲಿನ ಆಹ್ಲಾದಕರ ವಾತಾವರಣಕ್ಕೆ ಮನಸೋತಿದ್ದರು. ಎಲಿಜಬೆತ್ ರಾಣಿ ತನ್ನ ಪತಿಯೊಂದಿಗೆ ನಂದಿಬೆಟ್ಟಕ್ಕೆ ಭೇಟಿ ನೀಡಿದ ಹೆಗ್ಗಳಿಕೆ ಸಹ ಇದೆ.  ನಂದಿಬೆಟ್ಟದ ಬುಡದಲ್ಲಿರುವ ಮುದ್ದೇನಹಳ್ಳಿಯವರಾದ ಸರ್.ಎಂ.ವಿಶ್ವೇಶ್ವರಯ್ಯನವರು ನಡೆದೇ ಬೆಟ್ಟಕ್ಕೆ ಹೋಗುತ್ತಿದ್ದರಂತೆ. ಇನ್ನು, ನೆಹರೂ, ವಿಜಯಲಕ್ಷ್ಮಿ ಪಂಡಿತ್, ಇಂದಿರಾಗಾಂಧಿ, ರಾಧಾಕೃಷ್ಣನ್, ವಲ್ಲಭ ಬಾಯಿ ಪಟೇಲ್, ಸರ್ ಸಿ.ವಿ.ರಾಮನ್, ರಾಜಗೋಪಾಲಾಚಾರಿ ಮುಂತಾದ ಅನೇಕ ಗಣ್ಯರು ನಂದಿಬೆಟ್ಟಕ್ಕೆ ಭೇಟಿ ನೀಡಿ ಇಲ್ಲಿನ ಸೌಂದರ್ಯಕ್ಕೆ ಮನ ಸೋತ್ತಿದ್ರು.ಕ್ಯಾಪ್ಟನ್ ಕನ್ನಿಂಗ್ ಹ್ಯಾಂ ಕಟ್ಟಿಸಿದ್ದ ಬಂಗಲೆ ಓಕ್ ಲ್ಯಾಂಡ್ಸ್​ನಲ್ಲಿಯೇ ಗಾಂಧಿ ತಂಗುತ್ತಿದ್ದರು. ಇದೀಗ ಈ ಓಕ್ ಲ್ಯಾಂಡ್ಸ್ ಕಟ್ಟಡವನ್ನು ಗಾಂಧಿ ನಿಲಯವೆಂದು ಸರಕಾರ ಮರುನಾಮಕರಣ ಮಾಡಿದೆ. ಸದ್ಯ ಗಾಂಧಿನಿಲಯವು ಸಚಿವರು, ಶಾಸಕರು ಮತ್ತು ಉನ್ನತಾಧಿಕಾರಿಗಳ ಪಾಲಿಗೆ ವಿಶ್ರಾಂತಿ ಗೃಹವಾಗಿದೆ. ಪ್ರವಾಸೋದ್ಯಮ ಇಲಾಖೆಯ ಉಸ್ತುವಾರಿಯಲ್ಲಿರುವ ಗಾಂಧಿನಿಲಯವು ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಆಕರ್ಷಣೆಯ ಕೇಂದ್ರ ಸಹ ಆಗಿದೆ.
First published:October 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ