HOME » NEWS » State » BANGALORE NEWS TODAY BBMP IS FAILED IN WASTE MANAGEMENT SYSTEM IN BENGALURU HIGH COURT ANGRY ON IT RMD

ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲ; ಬಿಬಿಎಂಪಿಗೆ ಮತ್ತೆ ಛೀಮಾರಿ ಹಾಕಿದ ಹೈಕೋರ್ಟ್

ನಿತ್ಯ 2,700 ಮೆಟ್ರಿಕ್ ಟನ್ ಕಸ ಅಕ್ರಮವಾಗಿ ಬೇರೆಡೆ ಸುರಿಯಲಾಗುತ್ತಿದೆ. ಹೀಗಾಗಿ ಕಸದ ಸಮಸ್ಯೆ ಬಗೆಹರಿದಿಲ್ಲ. ಕಳೆದ ವಿಚಾರಣೆ ವೇಳೆಯೂ ಬಿಬಿಎಂಪಿಗೆ ಹೈಕೋರ್ಟ್ ಎಚ್ಚರಿಕೆ ನೀಡಿತ್ತು. ಆದಾಗ್ಯೂ ಇದುವರೆಗೂ ಬಿಬಿಎಂಪಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

news18-kannada
Updated:January 31, 2020, 8:00 AM IST
ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲ; ಬಿಬಿಎಂಪಿಗೆ ಮತ್ತೆ ಛೀಮಾರಿ ಹಾಕಿದ ಹೈಕೋರ್ಟ್
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜ.31): ‘ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ’ ಹೀಗೆಂದು ಛೀಮಾರಿ ಹಾಕಿದ್ದು, ಸಾಮಾನ್ಯರಲ್ಲ ಬದಲಿಗೆ ಕರ್ನಾಟಕ ಹೈಕೋರ್ಟ್​. ತ್ಯಾಜ್ಯ ವಿಲೇವಾರಿ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ ಎಂದು ಬಿಬಿಎಂಪಿ ವಿರುದ್ಧ ಹೈಕೋರ್ಟ್​ ಗರಂ ಆಗಿದೆ.

ಕಸ ವಿಲೇವಾರಿ ವಿಚಾರದಲ್ಲಿ 2012ರಲ್ಲಿ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆ ಆಗಿದ್ದವು. ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಅರ್ಜಿಗಳ ವಿಚಾರಣೆ ನಡೆಸಿದ್ದು, ಬಿಬಿಎಂಪಿ ಕಾರ್ಯ ವೈಖರಿ ವಿರುದ್ಧ ಕೆಂಡ ಕಾರಿದೆ. “ಈ ವಿಚಾರದಲ್ಲಿ ರಾಜ್ಯ ಸರ್ಕಾರ ಸುಮ್ಮನಿದ್ದಂತೆ ಕಾಣುತ್ತಿದೆ. ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಪಾಲಿಕೆಯನ್ನು ವಜಾ ಮಾಡುತ್ತೇವೆ ಎಂದು,” ಹೈಕೋರ್ಟ್ ಎಚ್ಚರಿಕೆ ನಿಡಿದೆ.

ಪ್ರತಿನಿತ್ಯ ನಗರದಲ್ಲಿ 4,200 ಮೆಟ್ರಿಕ್ ಟನ್ ಕಸ ಸಂಗ್ರಹ ಆಗುತ್ತಿದೆ. ಅದರಲ್ಲಿ ಕೇವಲ 1,500 ಮೆಟ್ರಿಕ್ ಟನ್ ಕಸ ಸಂಸ್ಕರಣಾ ಘಟಕಕ್ಕೆ ಸೇರುತ್ತಿದೆ. ಉಳಿದ 2,700 ಮೆಟ್ರಿಕ್ ಟನ್ ಕಸ ಅಕ್ರಮವಾಗಿ ಬೇರೆಡೆ ಸುರಿಯಲಾಗುತ್ತಿದೆ. ಹೀಗಾಗಿ ಕಸದ ಸಮಸ್ಯೆ ಬಗೆಹರಿದಿಲ್ಲ. ಕಳೆದ ವಿಚಾರಣೆ ವೇಳೆಯೂ ಬಿಬಿಎಂಪಿಗೆ ಹೈಕೋರ್ಟ್ ಎಚ್ಚರಿಕೆ ನೀಡಿತ್ತು. ಆದಾಗ್ಯೂ ಇದುವರೆಗೂ ಬಿಬಿಎಂಪಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಇದನ್ನೂ ಓದಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರವ್ಯಾಪಿ ಮುಷ್ಕರ: ಇಂದಿನಿಂದ ಇನ್ನೆರಡು ದಿನ ಬ್ಯಾಂಕ್​​ ಬಂದ್​​

ಸದ್ಯ, ಸಮಸ್ಯೆ ಪರಿಹಾರಕ್ಕೆ ಸರ್ಕಾರ ಪರ ವಕೀಲ 2 ವಾರ ಗಡುವು ಕೇಳಿದ್ದಾರೆ. ಎರಡು ವಾರ ಗಡುವು ನೀಡಿ ವಿಚಾರಣೆಯನ್ನು ಫೆ.17 ರ ಒಳಗಾಗಿ ಸಮಗ್ರ ವರದಿ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.
Youtube Video
First published: January 31, 2020, 8:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories