Bengaluru Crime: ಬೆಂಗಳೂರಲ್ಲಿ ಸ್ಯಾಂಡಲ್​ವುಡ್ ಸಿನಿಮಾ ಕಲಾವಿದನ ಬರ್ಬರ ಹತ್ಯೆ!

Bengaluru Crime News: ವಿಜಯ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು.  ನಟ ಕಿಚ್ಚ ಸುದೀಪ್ ಅಭಿಮಾನಿ  ಬಳಗದಲ್ಲಿ ಸಕ್ರಿಯ ಸದಸ್ಯನಾಗಿ ಇವರು ಕಾರ್ಯ ನಿರ್ವಹಿಸುತ್ತಿದ್ದರು.

news18-kannada
Updated:May 21, 2020, 8:16 AM IST
Bengaluru Crime: ಬೆಂಗಳೂರಲ್ಲಿ ಸ್ಯಾಂಡಲ್​ವುಡ್ ಸಿನಿಮಾ ಕಲಾವಿದನ ಬರ್ಬರ ಹತ್ಯೆ!
ವಿಜಯ
  • Share this:
ಬೆಂಗಳೂರು (ಮೇ 17): ಲಾಕ್​ಡೌನ್​ನಿಂದಾಗಿ ಅಪಘಾತ ಹಾಗೂ ಕೊಲೆ ಪ್ರಕರಣಗಳು ಕಡಿಮೆ ಆಗಿವೆ. ಪೊಲೀಸರು ಹೆಚ್ಚು ಸುತ್ತಾಟ ನಡೆಸುತ್ತಿರುವುದು ಅಪರಾಧ ಪ್ರಕರಣಗಳು ಕಡಿಮೆ ಆಗಲು ಪ್ರಮುಖ ಕಾರಣ. ಈ ಮಧ್ಯೆ ಬೆಂಗಳೂರಲ್ಲಿ ನಡೆದ ಬರ್ಬರ ಹತ್ಯೆಗೆ ಜನತೆ ಬೆಚ್ಚಿ ಬಿದ್ದಿದೆ.  ವಿಜಯ ಕುಮಾರ್(30) ಕೊಲೆಯಾದ ವ್ಯಕ್ತಿ. ಬೆಂಗಳೂರಿನ ಆರ್.ಆರ್. ನಗರದಲ್ಲಿ ಈ ಕೊಲೆ ನಡೆದಿದೆ. ರಸ್ತೆ ಬದಿಯಲ್ಲಿ ಕರೆದು, ಈತನ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿದೆ. ಸದ್ಯ, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರೀಕ್ಷೆ ನಡೆಸಿದ್ದಾರೆ.

ವಿಜಯ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು.  ನಟ ಕಿಚ್ಚ ಸುದೀಪ್ ಅಭಿಮಾನಿ  ಬಳಗದಲ್ಲಿ ಸಕ್ರಿಯ ಸದಸ್ಯನಾಗಿ ಇವರು ಕಾರ್ಯ ನಿರ್ವಹಿಸುತ್ತಿದ್ದರು.

ಆರ್ಮುಗಂ ದೇವಸ್ಥಾನದ ಸಮೀಪ ಈ ಕೊಲೆ ನಡೆದಿದೆ. ತಡರಾತ್ರಿ ದುಷ್ಕರ್ಮಿಗಳು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಅಂದಹಾಗೆ ಈ ಕೊಲೆ ನಡೆಯಲು ಕಾರಣವೇನು ಎನ್ನುವುದು ಇನ್ನು ತಿಳಿದು ಬಂದಿಲ್ಲ.

ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್​​-19: ಇಂದು 54 ಮಂದಿಗೆ ಸೋಂಕು, ಓರ್ವ ಸಾವು; ಸೋಂಕಿತರ ಸಂಖ್ಯೆ 1,146ಕ್ಕೆ ಏರಿಕೆ
First published: May 17, 2020, 3:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading