ಕಮಲಿ ಧಾರಾವಾಹಿ ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ಧ ವಂಚನೆಯ ಆರೋಪ; ನಿರ್ಮಾಪಕರಿಂದ ದೂರು ದಾಖಲು

ಸತ್ವ ಮೀಡಿಯಾ ಹೆಸರಿನಲ್ಲಿ ಚಾನೆಲ್ ಜೊತೆ ಒಪ್ಪಂದ ಮಾಡಿಕೊಂಡಿರುವ ನಿರ್ದೇಶಕ ಅರವಿಂದ್ ಕೌಶಿಕ್, ಶಿಲ್ಪಾ ಅರವಿಂದ್ ಮತ್ತು ನವೀನ್ ಸಾಗರ್ ಕಮಲಿ ಧಾರಾವಾಹಿಯಿಂದ ಬಂದ ಎಲ್ಲ ಲಾಭಾಂಶವನ್ನು ತಾವೇ ಪಡೆದಿದ್ದಾರೆ ಎಂದು ಧಾರಾವಾಹಿಯ ನಿರ್ಮಾಪಕ ರೋಹಿತ್ ದೂರು ನೀಡಿದ್ದಾರೆ.

news18-kannada
Updated:January 14, 2020, 9:02 AM IST
ಕಮಲಿ ಧಾರಾವಾಹಿ ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ಧ ವಂಚನೆಯ ಆರೋಪ; ನಿರ್ಮಾಪಕರಿಂದ ದೂರು ದಾಖಲು
ಕಮಲಿ ಧಾರಾವಾಹಿ
  • Share this:
ಬೆಂಗಳೂರು (ಜ. 14): ಖಾಸಗಿ ವಾಹಿನಿಯ 'ಕಮಲಿ' ಧಾರಾವಾಹಿ ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ಧ ವಂಚನೆಯ ಆರೋಪ ಕೇಳಿಬಂದಿದ್ದು, ಈ ಕುರಿತು ಅದೇ ಧಾರಾವಾಹಿ ನಿರ್ಮಾಪಕರಿಂದ ದೂರು ದಾಖಲಾಗಿದೆ.

ಕನ್ನಡದ ಖ್ಯಾತ ಧಾರಾವಾಹಿ 'ಕಮಲಿ' ನಿರ್ಮಾಪಕ ರೋಹಿತ್ ತಮಗೆ ವಂಚನೆಯಾಗಿದೆ ಎಂದು ದೂರು ದಾಖಲಿಸಿದ್ದಾರೆ. ಧಾರಾವಾಹಿ ನಿರ್ದೇಶಕ ಅರವಿಂದ್ ಕೌಶಿಕ್, ಶಿಲ್ಪಾ ಕೌಶಿಕ್ ಮತ್ತು ನವೀನ್ ಸಾಗರ್ ಎಂಬುವವರ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ರೋಹಿತ್ ದೂರು ನೀಡಿದ್ದಾರೆ.

ಸತ್ವ ಮೀಡಿಯಾ ಸಂಸ್ಥೆಯಡಿ ನಿರ್ಮಾಣಗೊಳ್ಳುತ್ತಿರುವ ಕಮಲಿ ಧಾರಾವಾಹಿಗೆ ರೋಹಿತ್ ಅವರಿಂದ 73 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿಸಲಾಗಿತ್ತು. ಹೂಡಿಕೆಯ ನಂತರ ಬಂದ ಲಾಭಾಂಶ ಹಾಗೂ ಬಂಡವಾಳವನ್ನು ತಮಗೆ ವಾಪಾಸ್ ನೀಡಿಲ್ಲ ಎಂದು ಆರೋಪಿಸಿ ರೋಹಿತ್ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ: Anushka Sharma: ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನದಲ್ಲಿ ಬೆವರಿಳಿಸಿದ ಕ್ಯಾಪ್ಟನ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ; ಯಾಕೆ ಗೊತ್ತಾ?

2018ರ ಮೇ 28ರಂದು 'ಕಮಲಿ' ಧಾರಾವಾಹಿ ಶುರುವಾಗಿತ್ತು. ಸುಮಾರು 287 ಸಂಚಿಕೆಗಳು ಪ್ರಸಾರವಾಗುವವರೆಗೂ ರೋಹಿತ್ ಅವರನ್ನು ನಿರ್ಮಾಪಕನೆಂದು ತೋರಿಸಲಾಗಿತ್ತು. ಆದರೆ, ನಂತರ ಧಾರಾವಾಹಿಯ ಟೈಟಲ್ ಕಾರ್ಡ್​ನಿಂದ ರೋಹಿತ್ ಅವರ ಹೆಸರನ್ನು ತೆಗೆದು ಹಾಕಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.

ಧಾರಾವಾಹಿಯ ನಿರ್ದೇಶಕ ಅರವಿಂದ್ ಕೌಶಿಕ್ ತಮ್ಮ ಪತ್ನಿ ಶಿಲ್ಪಾ ಹೆಸರಿನಲ್ಲಿ ಸತ್ವ ಮೀಡಿಯಾ ಬ್ಯಾನರ್​ನಡಿ ಧಾರಾವಾಹಿ ನಿರ್ಮಿಸುತ್ತಿರುವುದಾಗಿ ಚಾನೆಲ್ ಜೊತೆ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಈ ಮೂಲಕ ಅರವಿಂದ್ ಕೌಶಿಕ್, ಆತನ ಪತ್ನಿ ಶಿಲ್ಪಾ, ಹಾಗೂ ನವೀನ್ ಸಾಗರ್ ಎಂಬುವವರು ಸೇರಿಕೊಂಡು ಧಾರಾವಾಹಿಯಿಂದ ಬಂದ ಎಲ್ಲ ಲಾಭಾಂಶವನ್ನು ತಾವೇ ಪಡೆದಿದ್ದಾರೆ. 73 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿದ್ದ ನನ್ನ ಗಮನಕ್ಕೆ ತರದೇ ವಂಚನೆ ಮಾಡಿದ್ದಾರೆ ಎಂದು ರೋಹಿತ್ ಆರೋಪಿಸಿದ್ದಾರೆ.
First published: January 14, 2020, 8:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading