ಐಎಂಎ ಕಚೇರಿ ಮುಂದೆ ಹೂಡಿಕೆದಾರರಿಂದ ಪ್ರತಿಭಟನೆಗೆ ಯತ್ನ; ಗುಂಪು ಚದುರಿಸಲು ಲಘು ಲಾಠಿ ಪ್ರಹಾರ

ಕೆಲವರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ವಾಗ್ವಾದ ತೀವ್ರವಾಯಿತು. ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು. ಘಟನೆಯಲ್ಲಿ ಓರ್ವ ಮಹಿಳೆಯ ತಲೆಗೆ ಕಲ್ಲು ತಗುಲಿ ಗಾಯಗೊಂಡಿದ್ದಾರೆ. ವ್ಯಕ್ತಿಯೊರ್ವನನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ ಪೊಲೀಸರು ಮತ್ತು ಮಹಿಳೆಯರ ನಡುವೆ ತಳ್ಳಾಟ ನಡೆದಿದೆ.

HR Ramesh | news18-kannada
Updated:November 18, 2019, 12:09 PM IST
ಐಎಂಎ ಕಚೇರಿ ಮುಂದೆ ಹೂಡಿಕೆದಾರರಿಂದ ಪ್ರತಿಭಟನೆಗೆ ಯತ್ನ; ಗುಂಪು ಚದುರಿಸಲು ಲಘು ಲಾಠಿ ಪ್ರಹಾರ
ಪ್ರತಿಭಟನೆಗೆ ಮುಂದಾದ ಹೂಡಿಕೆದಾರರು ಮತ್ತು ಪೊಲೀಸರ ನಡುವೆ ವಾಗ್ವಾದ
  • Share this:
ಬೆಂಗಳೂರು: ಐಎಂಎಯ ನೂರಾರು ಹೂಡಿಕೆದಾರರು ಶಿವಾಜಿನಗರದ ಐಎಂಎ ಕಚೇರಿ ಮುಂದೆ ಇಂದು ದಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಉಪಚುನಾವಣೆ ಕಾರಣ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದಿದ್ದಾಗ ಹೂಡಿಕೆದಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ಗಂಭೀರತೆ ಪಡೆದುಕೊಂಡಿದೆ. ಇದೇ ವೇಳೆ ಗುಂಪು ಚದುರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ ಘಟನೆಯೂ ನಡೆದಿದೆ.

ಸಂಜೆ 4 ಗಂಟೆಗೆ ಪ್ರತಿಭಟನೆಗೆ ನಿರ್ಧರಿಸಿ ಹೂಡಿಕೆದಾರರು ಐಎಂಎ ಕಚೇರಿ ಮುಂದೆ ಜಮಾಯಿಸಿದರು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಪೊಲೀಸರಿಂದ ಪ್ರತಿಭಟನೆಗೆ ಅನುಮತಿ ನಿರಾಕರಿಸಿದರು. ಶಾಂತಿಯುತ ಪ್ರತಿಭಟನೆ ಮಾಡಲು ಅವಕಾಶ ಕಲ್ಪಿಸುವಂತೆ ಹೂಡಿಕೆದಾರರು  ಮನವಿ ಮಾಡಿಕೊಂಡರು. ನೀತಿ ಸಂಹಿತೆ ಇರುವ ಕಾರಣ ಇಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ, ಬೇರೆ ಸ್ಥಳಗಳಲ್ಲಿ ಪ್ರತಿಭಟನೆ ಮಾಡಿ ಎಂದು ಪೋಲೀಸರ ಮನವೊಲಿಕೆಗೆ ಯತ್ನಿಸಿದ್ದಾರೆ. ಈ ವೇಳೆ ಐಎಂಎ ಹೂಡಿಕೆದಾರರು ಹಾಗೂ ಪೋಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳದಲ್ಲಿ ಮಹಿಳೆಯರು ಸೇರಿದಂತೆ ನೂರಾರು ಹೂಡಿಕೆದಾರರು ಜಮಾಯಿಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.

ಕೆಲವರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ವಾಗ್ವಾದ ತೀವ್ರವಾಯಿತು. ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು. ಘಟನೆಯಲ್ಲಿ ಓರ್ವ ಮಹಿಳೆಯ ತಲೆಗೆ ಕಲ್ಲು ತಗುಲಿ ಗಾಯಗೊಂಡಿದ್ದಾರೆ. ವ್ಯಕ್ತಿಯೊರ್ವನನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ ಪೊಲೀಸರು ಮತ್ತು ಮಹಿಳೆಯರ ನಡುವೆ ತಳ್ಳಾಟ ನಡೆದಿದೆ.

ಇದನ್ನು ಓದಿ: ಐಎಂಎ ವಂಚನೆ ಪ್ರಕರಣ; 20 ಜನ ಆರೋಪಿಗಳ ವಿರುದ್ಧ ಸಿಬಿಐ ಚಾಜ್೯ ಶೀಟ್ ಸಲ್ಲಿಕೆ

First published:November 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ