ಬೆಂಗಳೂರು (ಜು. 13): ಗುರು ರಾಘವೇಂದ್ರ ಕೋ ಅಪರೇಟಿವ್ ಬ್ಯಾಂಕ್ ನಿರ್ದೇಶಕರಿಂದ ಮತ್ತೊಂದು ವಂಚನೆ ಆಗಿರುವುದು ಆಡಿಟಿಂಗ್ ವೇಳೆ ಬಯಲಾಗಿದೆ. ಶಂಕರಪುರದಲ್ಲಿರುವ ಗುರುಸೌರ್ವಭೌಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ 233 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪ ಇದೀಗ ಕೇಳಿ ಬಂದಿದೆ. ಗುರುಸಾರ್ವಭೌಮ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ, ಉಪಾಧ್ಯಕ್ಷ ಸತ್ಯನಾರಾಯಣ ಹಾಗೂ ವಾಸುದೇವ ಮಯ್ಯ ಸೇರಿದಂತೆ ಹದಿನಾಲ್ಕು ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಕಳೆದ ತಿಂಗಳು ಬ್ಯಾಂಕ್ ಸೀಜ್ ಮಾಡಿದ್ದ ಅಧಿಕಾರಿಗಳು, ಆಡಳಿತ ಅವಧಿಯಲ್ಲಿ ಹೆಚ್ಚಿನ ಬಡ್ಡಿ ಆಸೆ ತೋರಿಸಿ ಗ್ರಾಹಕರನ್ನು ಸೆಳೆದು ಬ್ಯಾಂಕಿನಲ್ಲಿ ಹಣ ಹೂಡುವಂತೆ ಆರೋಪಿಗಳು ಮಾಡಿದ್ದರು. ಹೀಗೆ ಬಂದ ಮೊದಲ 90 ಕೋಟಿ ಹಣವನ್ನು ಬಸವನಗುಡಿಯ ನೆಟ್ಟಕಲ್ಲಪ್ಪ ರಸ್ತೆಯಲ್ಲಿರುವ ಗುರು ರಾಘವೇಂದ್ರ ಬ್ಯಾಂಕ್ ನ ಸಾಲಗಳಿಗೆ ವಜಾ ಮಾಡಿಕೊಳ್ಳಲು ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಇದನ್ನು ಆಡಿಟಿಂಗ್ ಮಾಡಿದ್ದ ಬ್ಯಾಂಕ್ ವಿಶೇಷ ಅಧಿಕಾರಿ ಸಂಜಯ್ ಕಲಾಸ್ಕರ್ ಅವರಿಂದ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ರೆಸಾರ್ಟ್ ರಾಜಕೀಯ; ಸಿಎಲ್ಪಿ ಸಭೆ ಬೆನ್ನಲ್ಲೇ ಕಾಂಗ್ರೆಸ್ ಶಾಸಕರು ಹೋಟೆಲ್ಗೆ ಶಿಫ್ಟ್
ಹಣ ವರ್ಗಾವಣೆಗೆ ದಾಖಲೆ ತೋರಿಸದೇ ಬ್ಯಾಂಕ್ ಆಡಿಟ್ ವೇಳೆ ಕೇವಲ 20 ಕೋಟಿ ಸಾಲ ನೀಡಿರುವುದಾಗಿ ಡಾಕ್ಯುಮೆಂಟ್ಸ್ ನಲ್ಲಿ ಮಾಹಿತಿ ಇದೆ. ನೂರಾರು ಕೋಟಿ ಅವ್ಯವಹಾರ ನಡೆಸಿ ಗ್ರಾಹಕರ ಠೇವಣಿ ಹಣ ವಾಪಾಸ್ ನೀಡದ ಆರೋಪವಿದ್ದು, ಕಳೆದ ಸೋಮವಾರ ನಡೆದ ವಾಸುದೇವ ಮಯ್ಯ ಆತ್ಮಹತ್ಯೆ ಪ್ರಕರಣ ಸಾಕಷ್ಟು ಅನುಮಾನ ಮೂಡಿಸಿದೆ. ಸದ್ಯ ಈ ಪ್ರಕರಣವನ್ನು ಸಿಐಡಿಗೆ ದಕ್ಷಿಣ ವಿಭಾಗದ ಡಿಸಿಪಿ ಹಸ್ತಾಂತರಿಸಿದ್ದು, ಎರಡು ಪ್ರಕರಣಗಳು ಇದೀಗ ಸಿಐಡಿ ತನಿಖೆ ನಡೆಸಲು ಮುಂದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ