ಆನೇಕಲ್​ನಲ್ಲಿ ನಡು ರಸ್ತೆಯಲ್ಲೇ ಹೊತ್ತಿ ಉರಿದ ಗೂಡ್ಸ್ ವಾಹನ; ಶಾರ್ಟ್ ಸರ್ಕ್ಯೂಟ್ ಶಂಕೆ

ಹೊಗೆ ಮತ್ತು ಬೆಂಕಿಯನ್ನು ಗಮನಿಸಿದ ಚಾಲಕ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮೊದಲು ವಾಹನದಲ್ಲಿದ್ದ ಸಿಲಿಂಡರ್ ಹೊರ ತೆಗೆದಿದ್ದಾನೆ. ಆದರೆ, ಜನರು ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ವಾಹನವನ್ನು ಆವರಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆನೇಕಲ್ (ಡಿ. 15): ಚಲಿಸುತ್ತಿದ್ದ ಗೂಡ್ಸ್ ವಾಹನವೊಂದಕ್ಕೆ ಮಾರ್ಗ ಮಧ್ಯೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಲಿಂಕ್ ರಸ್ತೆಯಲ್ಲಿ ನಡೆದಿದೆ. ಶಾರ್ಟ್​​ ಸರ್ಕ್ಯೂಟ್​ನಿಂದ ಈ ಅವಘಡ ಸಂಭವಿಸಿರುವ ಅನುಮಾನ ವ್ಯಕ್ತವಾಗಿದೆ.

ಅತ್ತಿಬೆಲೆ ವಾಸಿಯೊಬ್ಬರು ಮನೆ ಖಾಲಿ ಮಾಡಿ ಜಿಗಣಿಯಲ್ಲಿನ ಮನೆಗೆ ಶಿಫ್ಟ್ ಆಗಲು ಮನೆಯ ಸರಕು ಸರಂಜಾಮುಗಳನ್ನು ಗೂಡ್ಸ್ ವಾಹನದಲ್ಲಿ ತುಂಬಿ ಕಳುಹಿಸಿದ್ದರು. ಗೂಡ್ಸ್ ವಾಹನದ ಚಾಲಕ ಆ ಮನೆಯ ಸರಕು ಸರಂಜಾಮುಗಳನ್ನು ತುಂಬಿಕೊಂಡು ಅತ್ತಿಬೆಲೆಯಿಂದ ಬೊಮ್ಮಸಂದ್ರ ಮಾರ್ಗವಾಗಿ ಜಿಗಣಿ ಕಡೆ ಬರುತ್ತಿದ್ದ ವೇಳೆ ಬೊಮ್ಮಸಂದ್ರ ಮತ್ತು ಜಿಗಣಿ ಲಿಂಕ್ ರಸ್ತೆಯಲ್ಲಿ ಚಲಿಸುತ್ತಿದ್ದ ವೇಳೆಯೇ ಬೆಂಕಿ ಹೊತ್ತಿಕೊಂಡಿದೆ.

ಇದನ್ನೂ ಓದಿ: ನೂತನ ಕೃಷಿ ಮಸೂದೆಯ ಒಳನೋಟ; ರಾಜಕೀಯ ಲೆಕ್ಕಾಚಾರ ಬದಿಗಿಟ್ಟು ವಾಸ್ತವತೆ ಸ್ವೀಕರಿಸಿ

ಹೊಗೆ ಮತ್ತು ಬೆಂಕಿಯನ್ನು ಗಮನಿಸಿದ ಚಾಲಕ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮೊದಲು ವಾಹನದಲ್ಲಿದ್ದ ಸಿಲಿಂಡರ್ ಹೊರ ತೆಗೆದಿದ್ದಾನೆ. ಜೊತೆಗೆ ಕೆಲ ಸರಕು ಸರಂಜಾಮುಗಳನ್ನು ಹೊರ ತೆಗೆಯಲು ಯತ್ನಿಸಿದ್ದಾನೆ. ಆದರೆ, ಜನರು ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ವಾಹನವನ್ನು ಆವರಿಸಿದೆ. ಸ್ಥಳೀಯರು ನೀರಿನ ಟ್ಯಾಂಕರ್ ನೆರವಿನಿಂದ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಆದರೆ, ಆ ವೇಳೆಗಾಗಲೇ ಬೆಂಕಿಯ ಕೆನ್ನಾಲಿಗೆಯಿಂದ ಇಡೀ ಗೂಡ್ಸ್​​ ವಾಹನ ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದ್ದು, ಜಿಗಣಿ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.
Published by:Sushma Chakre
First published: