ಬೆಂಗಳೂರಿನ ರೆಸಿಡೆನ್ಷಿಯಲ್ ಪ್ರದೇಶದಲ್ಲಿ ಕೆಮಿಕಲ್ ಗೋಡೌನ್ ಇದ್ದರೆ ಪೊಲೀಸರಿಗೆ ಮಾಹಿತಿ ನೀಡಿ!
ಪೊಲೀಸ್ ಕಾನ್ಸ್ಟೇಬಲ್ಗಳು ತಮ್ಮ ಬೀಟ್ನಲ್ಲಿರುವ ಕೆಮಿಕಲ್ ಸ್ಟೋರೇಜ್ ಮಾಡಿರುವ ಫ್ಯಾಕ್ಟರಿಗಳ ಬಗ್ಗೆ ಇನ್ಸ್ಪೆಕ್ಟರ್ಗಳ ಗಮನಕ್ಕೆ ತರಲು ಆದೇಶ ನೀಡಲಾಗಿದೆ. ಸುತ್ತಮುತ್ತ ಅನುಮಾನಾಸ್ಪದ ಗೋದಾಮಿನ ಮಾಹಿತಿ ನೀಡಿ ಎಂದು ಸಾರ್ವಜನಿಕರಿಗೂ ಮನವಿ ಮಾಡಲಾಗಿದೆ.
ಬೆಂಗಳೂರಿನ ಕೆಮಿಕಲ್ ಫ್ಯಾಕ್ಟರಿ ಗೋಡೌನ್ನಲ್ಲಿ ಬೆಂಕಿ ಅವಘಡ
ಬೆಂಗಳೂರು (ನ. 15): ಬಾಪೂಜಿನಗರದ ಹೊಸಗುಡ್ಡದಹಳ್ಳಿಯಲ್ಲಿರುವ ರೇಖಾ ಕೆಮಿಕಲ್ ಫ್ಯಾಕ್ಟರಿಯ ಗೋಡೌನ್ನಲ್ಲಿ ಬೆಂಕಿ ಅವಘಡ ಉಂಟಾಗಿತ್ತು. ಈ ಪ್ರಕರಣದ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದು, ಫುಲ್ ಅಲರ್ಟ್ ಆಗಿದ್ದಾರೆ. ಬೆಂಗಳೂರಿನಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆಗೆ ಪ್ಲಾನ್ ಮಾಡಲಾಗಿದೆ. ಬೆಂಗಳೂರಿನಲ್ಲಿರುವ ಬೀಟ್ ಪೊಲೀಸರಿಗೆ ಮತ್ತೊಂದು ಜವಾಬ್ದಾರಿ ವಹಿಸಲಾಗಿದ್ದು, ತಮ್ಮ ಬೀಟ್ನಲ್ಲಿ ಕೆಮಿಕಲ್ ಸ್ಟೋರೇಜ್ ಮಾಡಿರುವ ಕಟ್ಟಡಗಳನ್ನು ಚೆಕ್ ಮಾಡಲು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಮೆಮೋ ಕಳಿಸಿರುವ ಪೊಲೀಸ್ ಆಯುಕ್ತ ಕಮಲ್ ಪಂಥ್, ಕೆಮಿಕಲ್ ಸ್ಟೋರೇಜ್ ಬಗ್ಗೆ ಪರಿಶೀಲಿಸಲು ಸೂಚನೆ ನೀಡಿದ್ದಾರೆ. ಪೊಲೀಸ್ ಕಾನ್ಸ್ಟೇಬಲ್ಗಳು ತಮ್ಮ ಬೀಟ್ನಲ್ಲಿರುವ ಕೆಮಿಕಲ್ ಸ್ಟೋರೇಜ್ ಮಾಡಿರುವ ಫ್ಯಾಕ್ಟರಿಗಳ ಬಗ್ಗೆ ಇನ್ಸ್ಪೆಕ್ಟರ್ಗಳ ಗಮನಕ್ಕೆ ತರಲು ಆದೇಶ ನೀಡಲಾಗಿದೆ. ಬೆಂಗಳೂರಿನ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಲೀಸ್ಟ್ ಮಾಡಲಾಗುತ್ತಿದೆ. ಬಳಿಕ ಆ ಮಾಹಿತಿಯನ್ನು ಅಗ್ನಿಶಾಮಕ ಇಲಾಖೆಗೆ ಕಳುಹಿಸಲಾಗುವುದು. ಮುಂದೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಜಂಟಿ ರೇಡ್ಗೆ ಪ್ಲಾನ್ ಮಾಡಲಾಗಿದೆ.
ಬೆಂಗಳೂರಿನಲ್ಲಿ ವಸತಿ ಪ್ರದೇಶದಲ್ಲಿ ಕೆಮಿಕಲ್ ಗೋಡೌನ್ಗಳಿಗೆ ಅನುಮತಿಯಿಲ್ಲ. ಇಂತಹ ಘಟನೆ ಮರುಕಳಿಸದಂತೆ ಈ ಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ವೇಳೆ ಸಾರ್ವಜನಿಕರಿಗೂ ಕಮಿಷನರ್ ಕಮಲ್ ಪಂಥ್ ಮನವಿ ಮಾಡಿದ್ದು, ಸುತ್ತಮುತ್ತ ಅನುಮಾನಾಸ್ಪದ ಗೋದಾಮಿನ ಮಾಹಿತಿ ನೀಡಿ ಎಂದು ಸೂಚಿಸಿದ್ದಾರೆ. ಈ ಮೂಲಕ ಬೆಂಕಿ ಅವಘಡ ತಡೆಯಲು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಅಂತಹ ಗೋಡೌನ್ಗಳ ಮಾಹಿತಿ ಇದ್ದರೆ ತಮ್ಮ ಏರಿಯಾ ಬೀಟ್ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಕಳೆದ ವಾರ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ನಡೆಯುತ್ತಿದ್ದಂತೆ ರೇಖಾ ಕೆಮಿಕಲ್ ಫ್ಯಾಕ್ಟರಿಯ ಮಾಲೀಕ ಸಜ್ಜನ್ ರಾಜ್ ಹಾಗೂ ಕಮಲ ಇಬ್ಬರೂ ನಾಪತ್ತೆಯಾಗಿದ್ದರು. ಹೆಂಡತಿ ಹೆಸರಿನಲ್ಲಿ ಬೊಮ್ಮಸಂದ್ರದ ರೇಖಾ ಕೆಮಿಕಲ್ ಇಂಡಸ್ಟ್ರಿ ಹೆಸರಿನಲ್ಲಿ ಪರವಾನಗಿ ಪಡೆದುಕೊಂಡಿದ್ದ ಸಜ್ಜನ್ ರಾಜ್ ಹೊಸಗುಡ್ಡದಹಳ್ಳಿಯ ಗೋದಾಮಿನಲ್ಲಿ ಕೆಮಿಕಲ್ ಸಂಗ್ರಹ ಮಾಡಲು ಅನುಮತಿ ಪಡೆಯದೆ ಅಕ್ರಮವಾಗಿ ಸಂಗ್ರಹ ಮಾಡಿದ್ದ. ಲಾರಿಯಲ್ಲಿನ ಬ್ಯಾರಲ್ ನಿಂದ ಕೆಮಿಕಲ್ಸ್ ಅನ್ನು ಪೈಪ್ ಮೂಲಕ ನಾಲ್ವರು ಕಾರ್ಮಿಕರು ಅನ್ಲೋಡ್ ಮಾಡುತ್ತಿದ್ದಾಗ ಕಿಡಿ ಹೊತ್ತಿಕೊಂಡು ಬೆಂಕಿ ಆವರಿಸಿತ್ತು.
ಈಗಾಗಲೇ ಕೆಮಿಕಲ್ ಫ್ಯಾಕ್ಟರಿ ಮಾಲೀಕ ಸಜ್ಜನ್ ರಾಜ್ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ ಫ್ಯಾಕ್ಟರಿ ಮಾಲೀಕ ಸಜ್ಜನ್ ರಾಜ್ ಮತ್ತು ಪತ್ನಿ ಕಮಲಾ ಅವರನ್ನು ಪೊಲೀಸರು ಬಂಧಿಸಿದ್ದರು. ಬಿಬಿಎಂಪಿ, ಫೈರ್ ಮತ್ತು ಎಮರ್ಜೆನ್ಸಿ ಸರ್ವಿಸ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಇಲ್ಲದೆ ಹಲವು ವರ್ಷಗಳಿಂದ ಗೋದಾಮು ನಡೆಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು.
ಕೆಮಿಕಲ್ ಫ್ಯಾಕ್ಟರಿ ಮಾಲೀಕ ಸಜ್ಜನ್ರಾಜ್ ತನ್ನ ಪತ್ನಿ ಕಮಲಾ ಹೆಸರಿನಲ್ಲಿ ಪರವಾನಗಿ ಪಡೆದಿದ್ದರು. ಬೊಮ್ಮಸಂದ್ರದ ರೇಖಾ ಕೆಮಿಕಲ್ ಇಂಡಸ್ಟ್ರಿ ಹೆಸರಿನಲ್ಲಿ ಪರವಾನಗಿ ಇದೆ. ಆದರೆ, ಹೊಸಗುಡ್ಡದಹಳ್ಳಿಯ ಗೋದಾಮಿನಲ್ಲಿ ಕೆಮಿಕಲ್ ಸಂಗ್ರಹ ಮಾಡಲು ಅನುಮತಿ ಪಡೆದಿರಲಿಲ್ಲ. ಚಾಮರಾಜಪೇಟೆಯ ಉಮಾ ಟಾಕೀಸ್ ಬಳಿಯ ಗೋದಾಮಿನಿಂದ ಕೆಮಿಕಲ್ ತುಂಬಿದ್ದ ಬ್ಯಾರಲ್ ತಂದಿದ್ದರು. ಹೀಗೆ ಕೆಮಿಕಲ್ ಅನ್ನು ಹೊಸಗುಡ್ಡದಹಳ್ಳಿಯ ಗೋದಾಮಿನಲ್ಲಿ ಶೇಖರಿಸಿ ಇಡುವಾಗ ಸ್ಪೋಟ ಆಗಿತ್ತು. ಸುಮಾರು 1,000 ಬ್ಯಾರಲ್ ಗಳನ್ನು ಮುಂಜಾನೆ ತಗೊಂಡು ಹೋಗಿದ್ದರು. ಅದನ್ನು ಅನ್ಲೋಡ್ ಮಾಡುವಾಗ ಬೆಂಕಿ ಸ್ಫೋಟಗೊಂಡಿತ್ತು.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ