ಯಾವ ಹೈಟೆಕ್ ಖಾಸಗಿ​ ಸ್ಕೂಲ್​ಗೂ ಕಡಿಮೆ ಇಲ್ಲ, ಈ ಗಡಿ ಭಾಗದ ಸರ್ಕಾರಿ ಶಾಲೆ

ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರಿಂದ ಯಾವ ಕ್ರಾಂತಿ ಬೇಕಾದರೂ ಸಾಧ್ಯ ಎಂಬುದಕ್ಕೆ ಈ ಶಾಲೆ ಸಾಕ್ಷಿಯಾಗಿದೆ, ಬಡಕಂಬಿ ತೋಟದ ನಮ್ಮೂರ ಸರ್ಕಾರಿ ಕನ್ನಡ ಹಿರಿಯ ಪ್ರಧಾಮಿಕ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟ ಶಿಕ್ಷಕರಿಂದ ಈ ಕಾರ್ಯ ಸಾಧ್ಯವಾಗಿದೆ

Seema.R | news18-kannada
Updated:November 13, 2019, 3:11 PM IST
ಯಾವ ಹೈಟೆಕ್ ಖಾಸಗಿ​ ಸ್ಕೂಲ್​ಗೂ ಕಡಿಮೆ ಇಲ್ಲ, ಈ ಗಡಿ ಭಾಗದ ಸರ್ಕಾರಿ ಶಾಲೆ
ಶಾಲೆಯ ಮಕ್ಕಳೊಂದಿಗೆ ಶಿಕ್ಷಕರು
  • Share this:
ಬೆಳಗಾವಿ (ನ.13) ಸರ್ಕಾರಿ ಶಾಲೆ ಎಂದರೆ ಸಾಕು ಜನರಲ್ಲಿ ಒಂದು ರೀತಿ ತಾತ್ಸರ ಮನೋಭಾವನೆ. ಅದರಲ್ಲಿಯೂ ಗಡಿಭಾಗದ ಶಾಲೆಗಳ ಸ್ಥಿತಿಯನ್ನು ಕೇಳುವವರಿಲ್ಲ. ಈ ರಾಜ್ಯ ಕಲಿಕೆಯೋ, ಆ ರಾಜ್ಯದ ಕಲಿಕೆಯೋ  ಎಂಬ ಗೊಂದಲದಲ್ಲಿ ಗಡಿ ಭಾಗದ ಮಕ್ಕಳು ನಲುಗಿ ಹೋಗುತ್ತಾರೆ. ಇದರ ನಡುವೆ ಶಿಕ್ಷಕರ ಕೊರತೆ, ಮೂಲಭೂತ ಸಮಸ್ಯೆಗಳಿಂದ ಬಳಲುವ ಈ ಶಾಲೆಗಳ ಸ್ಥಿತಿ ಶೋಚನೀಯ. ಆದರೆ, ಈ ಗಡಿ ಭಾಗದ ಶಾಲೆ ನೋಡಿದರೆ ಒಮ್ಮೆ ಅಚ್ಚರಿಗೆ ಒಳಗಾಗುವುದು ಗ್ಯಾರಂಟಿ.

ಮಹಾರಾಷ್ಟ್ರ-ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿಯ ಅಥಣಿಯ ಬಡಕಂಬಿ ತೋಟದ ಈ ಸರ್ಕಾರಿ ಶಾಲೆ ನಗರದ ಯಾವುದೇ ಹೈಟೆಕ್​ ಶಾಲೆಗೂ ಕಡಿಮೆ ಇಲ್ಲ. ಅಷ್ಟೇ ಅಲ್ಲದೇ, ಇಲ್ಲಿನ ಫಲಿತಾಂಶ, ಶಿಕ್ಷಕರು, ಮೂಲಭೂತ ಸೌಲಭ್ಯಗಳನ್ನು ಗಮನಿಸಿದರೆ, ಇದು ನಿಜಕ್ಕೂ ಸರ್ಕಾರಿ ಶಾಲೆಯಾ ಎಂಬ ಅನುಮಾನ ವ್ಯಕ್ತವಾಗುದು ಸಹಜ.

ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರಿಂದ ಯಾವ ಕ್ರಾಂತಿ ಬೇಕಾದರೂ ಸಾಧ್ಯ ಎಂಬುದಕ್ಕೆ ಈ ಶಾಲೆ ಸಾಕ್ಷಿಯಾಗಿದೆ, ಬಡಕಂಬಿ ತೋಟದ ನಮ್ಮೂರ ಸರ್ಕಾರಿ ಕನ್ನಡ ಹಿರಿಯ ಪ್ರಧಾಮಿಕ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟ ಶಿಕ್ಷಕರಿಂದ ಈ ಕಾರ್ಯ ಸಾಧ್ಯವಾಗಿದೆ.

ಇನ್ನು ಈ ಶಾಲೆಯಲ್ಲಿ ಕೇವಲ ಕಲಿಕೆಗೆ ಮಾತ್ರ ಒತ್ತು ನೀಡದೆ, ಮಕ್ಕಳ ಪಠ್ಯೇತರ ಚಟುವಟಿಕೆಗೂ ಶಿಕ್ಷಕರು ಆಸಕ್ತಿವಹಿಸಿದ್ದಾರೆ. ಇದರ ಫಲವಾಗಿ ಶಾಲೆಯ 8 ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಗಳು ಕೂಡ ಆಯ್ಕೆಯಾಗಿದ್ದಾರೆ.

ಸರ್ಕಾರದ ಅನುದಾದನ ಜತೆಗೆ ಎಸ್​ಡಿಎಂಸಿ ಸದಸ್ಯರ ಸಹಯೋಗದೊಂದಿಗೆ ಇಲ್ಲಿನ ಮುಖ್ಯ ಶಿಕ್ಷಕರಾದ ಎ.ಎಸ್​ ಪೂಜಾರಿ ತಮ್ಮ ಕೈನಿಂದ ಹಣ ಖರ್ಚು ಮಾಡಿ ಮಕ್ಕಳಿಗಾಗಿ ಹೈ ಟೆಕ್​ ಶೌಚಾಲಯದ ವ್ಯವಸ್ಥೆ ಮಾಡಿದ್ದಾರೆ.

ಶಿಕ್ಷಕರ ಉತ್ಸಹ, ಕಾರ್ಯಕ್ಷಮತೆಯಿಂದಾಗಿ ಇಲ್ಲಿ ಮಕ್ಕಳ ಕಲಿಕೆಗೆ ಒತ್ತು ನೀಡಲಾಗಿದ್ದು, ಅವರ ಕಲಿಕೆಗೆ ಪೂರಕವಾಗಿ ಬುಕ್​ ಬ್ಯಾಂಕ್​ ಕೂಡ ಆರಂಭಿಸಲಾಗಿದೆ. ಇದರಿಂದ ಬಡಮಕ್ಕಳು ತಮಗೆ ಅಗತ್ಯವಾದಾಗ ಇಲ್ಲಿಂದ ಪುಸ್ತಕ, ಪೆನ್​ , ಪೆನ್ಸಿಲ್ ಸೇರಿದಂತೆ ಅಗತ್ಯವಸ್ತು ಎರವಲು ಪಡೆದು ಬಳಿಕ ನೀಡಬಹುದು. ಇದರಿಂದ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಕೂಡ ಹೆಚ್ಚಾಗಿದೆ.  ಅಷ್ಟೇ ಅಲ್ಲದೇ ಖಾಸಗಿ  ಶಾಲೆಯಂತೆ ಇಲ್ಲಿಯೂ ವಾರದಲ್ಲಿ ಎರಡು ದಿನ ಎಲ್ಲರಿಗೂ ಒಂದೇ ಬಣ್ಣದ ಟೀ ಶರ್ಟ್​, ಪ್ಯಾಂಟ್​ ವ್ಯವಸ್ಥೆಯನ್ನು ಸಮವಸ್ತ್ರವಾಗಿ ಮಾಡಲಾಗಿದೆ

ಇದನ್ನು ಓದಿ: ಫೆ.5ರಿಂದ ಕಲಬುರಗಿಯ ವಿವಿ ಆವರಣದಲ್ಲಿ 85ನೇ ಕನ್ನಡ ಸಾಹಿತ್ಯ ಸಮ್ಮೇಳನಶಾಲೆಯ ಗೋಡೆ, ಕಿಟಕಿಗಳ ಮೇಲೆ ಮಕ್ಕಳ ಮೇಲೆ ಪ್ರಭಾವ ಬೀರುವ ಕನ್ನಡ ನುಡುಗಟ್ಟು, ಗಾದೆ ಮಾತು, ವಿಜ್ಞಾದ ಮಾಹಿತಿಗಳನ್ನು ಕೂಡ ಮೂಡಿಸಲಾಗಿದೆ. ಇದರಿಂದ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಕೆಲಸ ಮಾಡಲಾಗಿದೆ. ಇದರಿಂದಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2014ರಲ್ಲಿ ಕೇವಲ 90 ಮಕ್ಕಳಿದ್ದ ಶಾಲೆಯಲ್ಲಿ ಈಗ 207 ಮಕ್ಕಳು ಕಲಿಯುತ್ತಿದ್ದು, ಇಲ್ಲಿನ ಪೋಷಕರು ಕೂಡ ಸರ್ಕಾರಿ ಶಾಲೆಗೆ ಸೇರಿಸಲು ಆಸಕ್ತಿ ತೋರುತ್ತಿದ್ದಾರೆ.

ಕೇವಲ 4 ಕೋಣೆಗಳನ್ನು ಹೊಂದಿರುವ ಈ ಶಾಲೆಯಲ್ಲಿ ಹೈಟೆಕ್​ ಶೌಚಾಲಯ, ಬುಕ್​ ಬ್ಯಾಕ್​, ಉತ್ತ ಶಿಕ್ಷಕರನ್ನು ಈ ಶಾಲೆ ಹೊಂದಿದೆ. ಕೇವಲ 5 ಗುಂಟೆ ವಿಸ್ತಿರ್ಣದಲ್ಲಿರುವ ಈ ಶಾಲೆಗೆ ಕ್ರೀಡಾಂಗಣ ಹಾಗೂ ಕೊಠಡಿ ಕೊರತೆ ಇದ್ದು, ಈ ಬಗ್ಗೆ ಕೂಡ ಸರ್ಕಾರಕ್ಕೆ ಪ್ರಸ್ತಾಪ ನೀಡಲಾಗಿದೆ.
First published:November 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ