• Home
  • »
  • News
  • »
  • state
  • »
  • ಎರಡನೇ ಕಂತಿನ ಫೀಸ್ ಕಟ್ಟದಿದ್ದಕ್ಕೆ ಆನ್‌ಲೈನ್ ಕ್ಲಾಸ್ ಬಂದ್: ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಎಚ್ಚರಿಕೆ

ಎರಡನೇ ಕಂತಿನ ಫೀಸ್ ಕಟ್ಟದಿದ್ದಕ್ಕೆ ಆನ್‌ಲೈನ್ ಕ್ಲಾಸ್ ಬಂದ್: ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಎಚ್ಚರಿಕೆ

ಪೋಷಕರ ಪ್ರತಿಭಟನೆ

ಪೋಷಕರ ಪ್ರತಿಭಟನೆ

ವಾರ್ಷಿಕ ಶುಲ್ಕವನ್ನು ಸಂಪೂರ್ಣವಾಗಿ ಕಟ್ಟಿಲ್ಲವೆಂದು ಕಳೆದ ಒಂದು ವಾರದಿಂದ ಫೀಸ್ ಕಟ್ಟದ ವಿದ್ಯಾರ್ಥಿಗಳ ಆನ್ಲೈನ್ ಕ್ಲಾಸ್ ಅನ್ನು ಶಾಲಾ ಆಡಳಿತ ಮಂಡಳಿ ಬ್ಲಾಕ್ ಮಾಡಿದೆ.

  • Share this:

ಬೆಂಗಳೂರು (ನ. 9): ಕೊರೋನಾ ಸಂಕಷ್ಟದ ನಡುವೆಯೂ ಧನದಾಹಿ ಶಿಕ್ಷಣ ಸಂಸ್ಥೆಗಳು ಹಣ ವಸೂಲಿಗೆ ಇಳಿಯುತ್ತಿವೆ. ಇಲ್ಲೊಂದು ಶಾಲೆ ಕೂಡ ಮೂರು ಕಂತುಗಳ ಶಾಲ ಶುಲ್ಕದಲ್ಲಿ ಎರಡನೇ ಕಂತು ಪಾವತಿಸಿದಕ್ಕೆ ಶಾಲಾ ಆಡಳಿಯ ಮಂಡಳಿ ಆನ್ಲೈನ್ ಕ್ಲಾಸ್ ಬ್ಲಾಕ್ ಮಾಡಿದೆ. ಕೊರೋನಾ  ಕಾಲದಲ್ಲಿ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟ ಆಡುತ್ತಿದೆ ಎಂದು ಪೋಷಕರು ಬೀದಿಗಿಳಿದು, ಶಾಲಾ ಆಡಳಿತ ಮಂಡಳಿ ವಿರುದ್ದ ಕಿಡಿ ಕಾರಿದ್ದಾರೆ. ನರ್ಚರ್ ಇಂಟರ್ ನ್ಯಾಷನಲ್ ಶಾಲೆಯ ಮುಂಭಾಗದಲ್ಲಿ ಶನಿವಾರದಿಂದ  ಪೋಷಕರು ಧರಣಿ ಮಾಡುತ್ತಿದ್ದರು. ಇಂದು ಶಾಲೆಯ ಆವರಣಕ್ಕೆ ನುಗ್ಗಿದ ಪೋಷಕರು ಶಾಲಾ ಆವರನವನ್ನು ರಣರಂಗದಂತಾಗಿಸಿದ್ದರು. ಖಾಸಗಿ ಶಾಲಾ ಆವರಣ ಥೇಟ್ ಯುದ್ಧ ಭೂಮಿಯಂತಾಯಿತು.  ಖಾಸಗಿ ಶಾಲೆಯಲ್ಲಿ ಕಟ್ಟಬೇಕಾದ ವಾರ್ಷಿಕ ಶುಲ್ಕವನ್ನು ಸಂಪೂರ್ಣವಾಗಿ ಕಟ್ಟಿಲ್ಲವೆಂದು ಕಳೆದ ಒಂದು ವಾರದಿಂದ ಫೀಸ್ ಕಟ್ಟದ ವಿದ್ಯಾರ್ಥಿಗಳ ಆನ್ಲೈನ್ ಕ್ಲಾಸ್ ಅನ್ನು ಶಾಲಾ ಆಡಳಿತ ಮಂಡಳಿ ಬ್ಲಾಕ್ ಮಾಡಿದೆ.


ಎಲ್‌ಕೆಜಿಯಿಂದ 10ನೇ ತರಗತಿವರೆಗೂ ಇರುವ ಶಾಲೆಯಲ್ಲಿ ಒಟ್ಟು  ಸರಿಸುಮಾರು 700 ವಿದ್ಯಾರ್ಥಿಗಳಿದ್ದು, ಕೇವಲ 200 ವಿದ್ಯಾರ್ಥಿಗಳು 2ನೇ ಕಂತಿನ ಶುಲ್ಕ ಸಹ ಪಾವತಿಸಿದ್ದಾರೆ. ಇನ್ನುಳಿದ 50 ವಿದ್ಯಾರ್ಥಿಗಳು  ಹಣಕಾಸಿನ ಸಮಸ್ಯೆಯಿಂದ ಮೊದಲ ಕಂತು ಕಟ್ಟಿದ್ದು ಎರಡನೇ ಕಂತು ಕಟ್ಟಿಲ್ಲ. 70 ಸಾವಿರದಿಂದ ಒಂದು ಲಕ್ಷ ವಾರ್ಷಿಕ ಫೀಸ್ ಇದ್ದು ಮೊದಲ ಕಂತಿನಲ್ಲಿ 30 ಸಾವಿರ ಹಣ ಕಟ್ಟಿದ್ದರು.


ಇದನ್ನು ಓದಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆಗೆ ಸಿದ್ಧತೆ ಪೂರ್ಣ ; ತೀವ್ರ ಕುತೂಹಲ ಕೆರಳಿಸಿದ ಫಲಿತಾಂಶ


ಆನ್ಲೈನ್ ಶಿಕ್ಷಣಕ್ಕೆ ಶಾಲಾ ಆಡಳಿತ ಮಂಡಳಿ ಅವಕಾಶ ಕಲ್ಪಿಸಿಲ್ಲ. ಶಾಲಾ ಆಡಳಿತ ಮಂಡಳಿ ನಡೆಗೆ ಶನಿವಾರ ಹಾಗೂ ಇಂದು ಪೋಷಕರು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರಹಾಕಿದ್ದರು. ಆದರೆ ಶಾಲಾ ಆಡಳಿತ ಮಂಡಳಿ ಮಾತ್ರ ತಾಂತ್ರಿಕ ದೋಷದಿಂದ ಈ ಸಮಸ್ಯೆ ಆಗಿದೆ. ಮಕ್ಕಳ ಶಿಕ್ಷಣಕ್ಕೆ ನಾವು ತೊಂದರೆ ಕೊಡುವುದಿಲ್ಲ ಎಂದು ಅವರ ತಪ್ಪನ್ನು ತಳ್ಳಿಹಾಕಿದ್ದಾರೆ ಎಂದರು.


ಮಕ್ಕಳ ಭವಿಷ್ಯದ ಜೊತೆ ಆಟ ಆಡಬೇಡಿ


ಕ್ಷೇತ್ರ ಶಿಕ್ಷಣಾಧಿಕರಿಗಳು ಇಂದು ನರ್ಚರ್ ಶಾಲಾ ಆಡಿತ ಮಂಡಳಿ ಜೊತೆ ಮಾತನಾಡಿದ್ದು ಯಾವುದೇ ಕಾರಣಕ್ಕೂ ಮಕ್ಕಳ ಭವಿಷ್ಯದ ಜೊತೆ ಆಟವಾಡಬೇಡಿ. ಆನ್ಲೈನ್ ಕ್ಲಾಸ್ ನಿಲ್ಲಸಬೇಡಿ ಶೀರ್ಘವೇ ಮುಂದುವರಿಸಿ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಆಡಳಿತ ಮಂಡಳಿ ನಿರ್ದೇಶಕ ನರಸಿಂಹನ್ ಹೇಳಿದ್ದಾರೆ.


ವರದಿ ಮಾಡದಂತೆ ದೌರ್ಜನ್ಯ:


ಪ್ರತಿಭಟನೆಯ ವರದಿ ಮಾಡಲು ಮಾಧ್ಯಮದವರು ತೆರಳಿದ್ದ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಜೊತೆ ಕೈ ಜೋಡಿಸಿರುವ ಕೆಲವು ಪೋಷಕರು ಮಾಧ್ಯಮದವರ ಕ್ಯಾಮೆರಾಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು. ಅಷ್ಟೊತ್ತಿಗೆ ಬಾಗಲಗುಂಟೆ ಪೊಲೀರು ಬಂದಿದ್ದರಿಂದ ಮುಂದೆ ಆಗಬೇಕಿದ್ದ ಅನಾಹುತ ತಪ್ಪಿತು.

Published by:Seema R
First published: