ಅನೈತಿಕ ಸಂಬಂಧದ ಶಂಕೆಯಿಂದ ಬೆಂಗಳೂರಿನಲ್ಲಿ ಬರ್ಬರ ಹತ್ಯೆ; ಹೆಂಡತಿಯ ಕತ್ತು ಸೀಳಿ ನೇಣಿಗೆ ಶರಣಾದ ಗಂಡ

Bengaluru Crime News: ತಮಿಳುನಾಡು ಮೂಲದ ಮುರುಗೇಶ್​ 15 ವರ್ಷಗಳ ಹಿಂದೆ ವಸಂತ ಎಂಬ ಮಹಿಳೆಯೊಂದಿಗೆ ಮದುವೆಯಾಗಿದ್ದ. ಆರಂಭದಿಂದಲೂ ಪತ್ನಿ ವಸಂತ ನಡವಳಿಕೆ ಬಗ್ಗೆ ಮುರುಗೇಶ್​ ಅನುಮಾನ ಹೊಂದಿದ್ದ.

news18-kannada
Updated:November 26, 2019, 3:00 PM IST
ಅನೈತಿಕ ಸಂಬಂಧದ ಶಂಕೆಯಿಂದ ಬೆಂಗಳೂರಿನಲ್ಲಿ ಬರ್ಬರ ಹತ್ಯೆ; ಹೆಂಡತಿಯ ಕತ್ತು ಸೀಳಿ ನೇಣಿಗೆ ಶರಣಾದ ಗಂಡ
ಮೃತಪಟ್ಟಿರುವ ವಸಂತ- ಮುರುಗೇಶ್​
  • Share this:
ಬೆಂಗಳೂರು (ನ. 26): ತನ್ನ ಹೆಂಡತಿ ಬೇರೆ ಪುರುಷನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಅನುಮಾನದಿಂದ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಗಂಡ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ತಮಿಳುನಾಡು ಮೂಲದ ಮುರುಗೇಶ್​ 15 ವರ್ಷಗಳ ಹಿಂದೆ ವಸಂತ ಎಂಬ ಮಹಿಳೆಯೊಂದಿಗೆ ಮದುವೆಯಾಗಿದ್ದ. ಆರಂಭದಿಂದಲೂ ಪತ್ನಿ ವಸಂತ ನಡವಳಿಕೆ ಬಗ್ಗೆ ಮುರುಗೇಶ್​ ಅನುಮಾನ ಹೊಂದಿದ್ದ. ಆಕೆ ಬೇರಾವುದೋ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನದಿಂದ ಆಗಾಗ ಜಗಳವಾಗುತ್ತಲೇ ಇರುತ್ತಿತ್ತು.

ಯಾರಾದ್ರೂ ಉಂಗುರ, ದುಡ್ಡು ಕೊಟ್ಟರೆ ತಗೊಳ್ಳಿ, ಅದು ಮೋಸದ ಸಂಪಾದನೆ; ಪ್ರಚಾರ ವೇಳೆ ಎಂಟಿಬಿಗೆ ಮಾತಲ್ಲೇ ತಿವಿದ ಶರತ್ ಬಚ್ಚೇಗೌಡ

ಇದೇ ಕಾರಣಕ್ಕೆ ಸೋಮವಾರ ಮತ್ತೆ ಜಗಳ ಉಂಟಾಗಿತ್ತು. ಇಬ್ಬರ ನಡುವಿನ ಜಗಳ ತಾರಕಕ್ಕೇರಿ ಸೋಮವಾರ ರಾತ್ರಿ ಮುರುಗೇಶ್ ತನ್ನ ಪತ್ನಿಯ ಕತ್ತನ್ನು ಚಾಕುವಿನಿಂದ ಕೊಯ್ದು ಹತ್ಯೆ ಮಾಡಿದ್ದಾನೆ. ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಪತ್ನಿ ಬೇರೊಬ್ಬನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಕೋಪದಲ್ಲಿ ಆಕೆಯನ್ನು ಕೊಲೆ ಮಾಡಿದ ನಂತರ ತಾನೂ ನೇಣಿಗೆ ಶರಣಾಗಿದ್ದಾನೆ. ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ನಿನ್ನೆ ನಡುರಾತ್ರಿ ಈ ಘಟನೆ ನಡೆದಿದ್ದು, ಪುಟ್ಟೇನಹಳ್ಳಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
First published: November 26, 2019, 3:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading