Bangalore Crime: ಹೆಂಡತಿ ಇಲ್ಲದಿದ್ದಾಗ ಕೆಲಸದ ಹುಡುಗಿ ಮೇಲೆ ಅತ್ಯಾಚಾರ; ಮೈಕೈ ಸುಟ್ಟು ವಿಕೃತಿ ಮೆರೆದ ಬೆಂಗಳೂರು ಮೌಲ್ವಿಯ ಬಂಧನ

Bangalore Rape: ಮೌಲ್ವಿಯೊಬ್ಬ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ಯುವತಿಯನ್ನು ಕರೆತಂದು ಅತ್ಯಾಚಾರವೆಸಗಿದ ನಂತರ ಐರನ್ ಬಾಕ್ಸ್​​ನಿಂದ ಆಕೆಯ ದೇಹವನ್ನು ಸುಟ್ಟು ವಿಕೃತಿ ಮೆರೆದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

news18-kannada
Updated:December 14, 2019, 9:55 AM IST
Bangalore Crime: ಹೆಂಡತಿ ಇಲ್ಲದಿದ್ದಾಗ ಕೆಲಸದ ಹುಡುಗಿ ಮೇಲೆ ಅತ್ಯಾಚಾರ; ಮೈಕೈ ಸುಟ್ಟು ವಿಕೃತಿ ಮೆರೆದ ಬೆಂಗಳೂರು ಮೌಲ್ವಿಯ ಬಂಧನ
ಆರೋಪಿ ಫರ್ವೇಜ್
  • Share this:
ಬೆಂಗಳೂರು (ಡಿ. 14): ದೇಶದೆಲ್ಲೆಡೆ ಒಂದರ ಹಿಂದೊಂದು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮಹಿಳೆಯರ ಸುರಕ್ಷತೆಗೆ ಆಗ್ರಹಿಸಿ ಅನೇಕ ಸಂಘಟನೆಗಳು ಬೀದಿಗಿಳಿದಿವೆ. ಇದೆಲ್ಲದರ ನಡುವೆ ಬೆಂಗಳೂರಿನಲ್ಲಿ ಯುವತಿ ಮೇಲೆ ಮೌಲ್ವಿಯೊಬ್ಬ ಅತ್ಯಾಚಾರ ನಡೆಸಿ, ಚಿತ್ರಹಿಂಸೆ ನೀಡಿದ ಭೀಕರ ಘಟನೆ ಬೆಳಕಿಗೆ ಬಂದಿದೆ.

ಮೌಲ್ವಿಯೊಬ್ಬ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ಯುವತಿಯನ್ನು ಕರೆತಂದು ಅತ್ಯಾಚಾರವೆಸಗಿದ ನಂತರ ಐರನ್ ಬಾಕ್ಸ್​​ನಿಂದ ಆಕೆಯ ದೇಹವನ್ನು ಸುಟ್ಟು ವಿಕೃತಿ ಮೆರೆದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೆಲಸಕ್ಕೆಂದು ಯುವತಿಯನ್ನು ಕರೆತಂದು, ಆಕೆಯನ್ನು ಗೃಹ ಬಂಧನದಲ್ಲಿಟ್ಟು ಅತ್ಯಾಚಾರ ನಡೆಸಿದ್ದಷ್ಟೇ ಅಲ್ಲದೆ ಐರನ್ ಬಾಕ್ಸ್​ನಿಂದ ಯುವತಿಯ ದೇಹ ಸುಟ್ಟು ಚಿತ್ರಹಿಂಸೆ ನೀಡಿದ್ದಾನೆ.

ಕೋರಮಂಗಲದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಣ ಸಂಸ್ಥೆಗಳು (ಟ್ಯುಟೋರಿಯಲ್) ಮತ್ತು ಮದರಸಾ ನಡೆಸುತ್ತಿರುವ ಫರ್ವೇಜ್ ಎಂಬ ಮೌಲ್ವಿ ಯುವತಿಯ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದ ವ್ಯಕ್ತಿ. ಬಿಹಾರ ಮೂಲದ 26 ವರ್ಷದ ಸಂತ್ರಸ್ತೆಗೆ ನರಕ ತೋರಿಸಿದ ಈ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.

Bengaluru Crime: ಆಸ್ತಿ ತರುವಂತೆ ಪೀಡಿಸುತ್ತಿದ್ದ ಪತ್ನಿಯ ಕಿರುಕುಳ ತಾಳಲಾರದೆ ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ

ಬಿಹಾರದಿಂದ ಕೆಲಸಕ್ಕೆಂದು 4 ವರ್ಷಗಳ ಹಿಂದೆ ಯುವತಿಯನ್ನು ಕರೆತಂದಿದ್ದ ಫರ್ವೇಜ್ ಪತ್ನಿ ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್ ಉದ್ಯೋಗಿಯಾಗಿದ್ದಾರೆ. ಯುವತಿಯನ್ನು ಕೆಲಸಕ್ಕೆಂದು ಮನೆಗೆ ಕರೆತಂದು ಇಟ್ಟುಕೊಂಡಿದ್ದ ಫರ್ವೇಜ್ ಆಕೆಯನ್ನು ಮನೆಯಿಂದ ಆಚೆ ಹೋಗಲು ಬಿಡುತ್ತಿರಲಿಲ್ಲ. ಪತ್ನಿ ಆಫೀಸಿಗೆ ಹೋದ ನಂತರ ಸಂತ್ರಸ್ತೆಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ನಡೆಸುತ್ತಿದ್ದ.

ಫರ್ವೇಜ್ ವಿರುದ್ಧ ಐಪಿಸಿ ಸೆಕ್ಷನ್ 344 ಅಡಿ ಅಕ್ರಮ ಬಂಧನ, 376 ಅಡಿ ಅತ್ಯಾಚಾರ, 307 ಅಡಿ ಕೊಲೆ ಯತ್ನ, 506,507 ಅಡಿ ಬೈಗುಳ, ಜೀವ ಬೆದರಿಕೆ ಆರೋಪದಡಿ ಕೋರಮಂಗಲ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.
First published:December 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading