ನಂದಿನಿ ಹಾಲಿನ ಬೆಲೆಯನ್ನ 5 ರೂ. ಹೆಚ್ಚಳ ಮಾಡಿ; ಸರ್ಕಾರಕ್ಕೆ ಬೆಂಗಳೂರು ಹಾಲು ಒಕ್ಕೂಟ ಒತ್ತಾಯ 

ಸದ್ಯ ರೈತರು ಡೈರಿಗೆ ಹಾಕುವ ಹಾಲಿಗೆ 24 - 28 ₹ ಬೆಲೆ ನೀಡುತ್ತಿದ್ದೇವೆ. ಸರ್ಕಾರ ನಂದಿನಿ ಹಾಲಿನ ಪ್ಯಾಕೆಟ್ ಬೆಲೆಯನ್ನ 5 ₹ ಬೆಲೆ ಹೆಚ್ಚಳ ಮಾಡಿದರೆ ನಾವು ಆ ಹಣವನ್ನ ರೈತರಿಗೆ ನೀಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಬೆಂಗಳೂರು ಹಾಲು ಒಕ್ಕೂಟ

ಬೆಂಗಳೂರು ಹಾಲು ಒಕ್ಕೂಟ

  • Share this:
ರಾಮನಗರ: 1 ಲೀಟರ್ ನಂದಿನಿ ಹಾಲಿನ ಪ್ಯಾಕೆಟ್ (Nandini Milk Packet) ಬೆಲೆಯನ್ನ 5 ₹ ಹೆಚ್ಚಳ ಮಾಡಬೇಕೆಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಸುದ್ದಿಗೋಷ್ಟಿ ನಡೆಸಿ ಆಗ್ರಹಿಸಿದರು‌. ರಾಮನಗರ ಜಿಲ್ಲೆಯ ಕನಕಪುರದ ಶಿವನಹಳ್ಳಿಯಲ್ಲಿರುವ (Shivanahalli, Kanakapura) ನಂದಿನಿ ಮೆಗಾ ಡೈರಿಯಲ್ಲಿ (Nandini Mega Dairy) ಸುದ್ದಿಗೋಷ್ಟಿ ನಡೆಸಿದ ಅವರು ಪಕ್ಕದ ರಾಜ್ಯಗಳಲ್ಲಿ ನಂದಿನಿ ಹಾಲು 1 ಲೀಟರ್ ಗೆ 50 ₹ ಬೆಲೆಯಿದೆ.  ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಈಗಲೂ ಸಹ 35 ₹ ಬೆಲೆಯಿದೆ. ಇದರಿಂದಾಗಿ ನಮ್ಮ 14 ಒಕ್ಕೂಟಗಳು ಸಹ ನಷ್ಟದಲ್ಲಿ ನಡೆಯುತ್ತಿವೆ. ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಿ ಗ್ರಾಹಕರ ಬೆಲೆಯನ್ನ ಹೆಚ್ಚಳ (Price Hike) ಮಾಡಿದರೆ ಆ 5 ₹ ಹಣವನ್ನ ನಾವು ರೈತರಿಗೆ (Farmers) ನೀಡುತ್ತೇವೆಂದು ತಿಳಿಸಿದರು.

ಸದ್ಯ ರೈತರು ಡೈರಿಗೆ ಹಾಕುವ ಹಾಲಿಗೆ 24 - 28 ₹ ಬೆಲೆ ನೀಡುತ್ತಿದ್ದೇವೆ. ಸರ್ಕಾರ ನಂದಿನಿ ಹಾಲಿನ ಪ್ಯಾಕೆಟ್ ಬೆಲೆಯನ್ನ 5 ₹ ಬೆಲೆ ಹೆಚ್ಚಳ ಮಾಡಿದರೆ ನಾವು ಆ ಹಣವನ್ನ ರೈತರಿಗೆ ನೀಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಇನ್ನು ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಸರ್ಕಾರದ ಗಮನ ಸೆಳೆಯಲು ಈ ಸುದ್ದಿಗೋಷ್ಟಿ ಮಾಡ್ತಿದ್ದೇವೆ. ಸರ್ಕಾರ ಈ ಬಗ್ಗೆ ಗಮನಹರಿಸದ್ದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ 14 ಒಕ್ಕೂಟದವರು ಸೇರಿ ಹೋರಾಟ ಮಾಡ್ತೇವೆಂದು ತಿಳಿಸಿದರು.

ಇದನ್ನೂ ಓದಿ:  ಹಾಸನ ಕ್ಷೇತ್ರಕ್ಕೆ ಬಂದ್ರೆ ರಾಜಕೀಯ ಏನಂತ ಹೇಳಿಕೊಡ್ತೀನಿ: ಗೌಡ್ರ ಮೊಮ್ಮಗನಿಗೆ ಪ್ರೀತಂಗೌಡ ಟಾಂಟ್

ರಾಮನಗರ ಜಿಲ್ಲೆಯಿಂದ ಬಮೂಲ್ ಗೆ 10 ಲಕ್ಷ ಲೀಟರ್ ಹಾಲು 

ರೇಷ್ಮೆನಗರಿ ರಾಮನಗರ ಜಿಲ್ಲೆಯಿಂದ ಪ್ರತಿದಿನವೂ ಸಹ ಬೆಂಗಳೂರು ಡೈರಿಗೆ 10 ಲಕ್ಷ ಲೀಟರ್ ಹಾಲು ಸರಬರಾಗುತ್ತದೆ. ಅದರಲ್ಲಿಯೂ ಪ್ರಮುಖವಾಗಿ ಬೊಂಬೆ ನಗರಿ ಚನ್ನಪಟ್ಟಣ ಅದರಲ್ಲಿ ನಂ.1, ನಂ.2 ಕನಕಪುರ, ನಂ.3 ರಾಮನಗರ, ನಂ.4 ಮಾಗಡಿ ತಾಲೂಕು ಸ್ಥಾನವನ್ನ ಉಳಿಸಿಕೊಂಡಿದೆ.

ಬೆಲೆ ಏರಿಕೆಯಿಂದ ರೈತರಿಗೆ ಹೆಚ್ಚಿನ ಹಣ

ಹಾಗಾಗಿ ಇಡೀ ರಾಜ್ಯದಲ್ಲಿಯೇ ರಾಮನಗರ ಜಿಲ್ಲೆ ಅತಿಹೆಚ್ಚು ಹಾಲು ಉತ್ಪಾದನೆ ಮಾಡುತ್ತಿದ್ದು ಈ ಭಾಗದ ರೈತರಿಗೆ ಮಾತ್ರ ಸೂಕ್ತ ಬೆಲೆ ಸಿಗುತ್ತಿಲ್ಲ. ಹಾಗಾಗಿ ರಾಜ್ಯ ಸರ್ಕಾರ ನಂದಿನಿ ಹಾಲಿನ ಪ್ಯಾಕೆಟ್ ಬೆಲೆಯನ್ನ ಏರಿಕೆ ಮಾಡಿದರೆ ಆ ಹೆಚ್ಚುವರಿ ಹಣವನ್ನ ಗ್ರಾಹಕರಿಂದ ಪಡೆದು ನಂತರ ರೈತರಿಗೆ ಹೆಚ್ಚಿನ ಬೆಲೆಯನ್ನ ನೀಡಬಹುದು.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಬೇಕಿದೆ. ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಿ.ಕೆ.ಸುರೇಶ್ ಪ್ರಮುಖವಾಗಿ ಕನಕಪುರ ತಾಲೂಕಿನ ಶಿವನಹಳ್ಳಿಯಲ್ಲಿ ಮೆಗಾ ಡೈರಿ ಸ್ಥಾಪನೆಯಾಗಲು ಕಾರಣಕರ್ತರು.

ಇದನ್ನೂ ಓದಿ:  ಎಂಇಎಸ್ ಪುಂಡಾಡಿಕೆ: ಕನ್ನಡಪರ ಸಂಘಟನೆಗಳಿಂದ ನಾಳೆ ಬೆಳಗಾವಿ ಚಲೋ; ಕುಂದಾನಗರಿಗೆ ಕನ್ನಡಿಗರ ಪ್ರವಾಹ

ಈ ಮೆಗಾ ಡೈರಿಯಿಂದಾಗಿ ಈ ಭಾಗದ ಯುವಕರಿಗೆ ಕೆಲಸ ಸಿಕ್ಕಿದೆ. ಜೊತೆಗೆ ಜಿಲ್ಲೆಯ ಹೈನುಗಾರಿಕೆ ಬಹಳಷ್ಟು ಪ್ರಗತಿ ಕಂಡಿದೆ. ಜಿಲ್ಲೆಯ ಪ್ರತಿಮನೆಯಲ್ಲಿಯೂ ಸಹ ಹಸುಗಳನ್ನ ಕಟ್ಟಿಕೊಂಡು ಉತ್ತಮವಾದ ಜೀವನ ನಡೆಸಲು ಸಹಕಾರಿಯಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಈ ಬಗ್ಗೆ ಆಲೋಚನೆ ನಡೆಸಬೇಕಿದೆ.

KMFನಿಂದ ಹಾಲು ಉತ್ಪಾದಕರ ಬ್ಯಾಂಕ್ 

‌ ರಾಜ್ಯದ ಕೆಎಂಎಫ್ ಉತ್ಪನ್ನಗಳು (KMF Products) ರಾಜ್ಯ‌ ಅಲ್ಲದೇ ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಖ್ಯಾತಿ ಗಳಿಸಿವೆ. ಇದೀಗ‌ ಮತ್ತೊಂದು ಹೆಜ್ಜೆ ಇಡಲು ಕೆಎಂಎಫ್ (KMF) ಗಂಭೀರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಪ್ರತಿ ವರ್ಷ ಕೆಎಂಎಫ್ 17 ಸಾವಿರ‌ ಕೋಟಿ‌ ವಹಿವಾಟು ನಡೆಸುತ್ತದೆ. ಜತಗೆ ರಾಜ್ಯ(Karnataka0ದಲ್ಲಿ ಹಾಲಿನ ಏಕರೂಪ ದರ (Uniform rate) ನಿಗದಿ ಮಾಡಲು ಚಿಂತನೆ ನಡೆಸಿದೆ. ಮುಂಬರುವ‌ ಡಿಸೆಂಬರ್ ನಲ್ಲಿ ನಡೆಯುವ ಸಾರ್ವತ್ರಿಕ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಕೆಎಂಎಫ್ ಅಧ್ಯಕ್ಷ ‌ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಹೇಳಿದ್ದರು.

ಒಂದು ವರ್ಷಕ್ಕೆ ಕೆಎಂಎಫ್ 17 ಸಾವಿರ ಕೋಟಿ ರೂಪಾಯಿ ವ್ಯವಹಾರ ಹೊಂದಿದೆ.  ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಬ್ಯಾಂಕ್ ಮಾಡುವಂತೆ ಸಲಹೆ ನೀಡಿದ್ದಾರೆ. ಜತಗೆ‌ ನೂರು ಕೋಟಿ ರೂಪಾಯಿ ಠೇವಣಿ ನೀಡುವ ಭರವಸೆ ಸಹ‌ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಬ್ಯಾಂಕ್ (KMF Bank)ನಿರ್ಮಾಣಕ್ಕೆ ಗಂಭೀರವಾಗಿ ‌ಚಿಂತನೆ ನಡೆಸಿದೆ.
Published by:Mahmadrafik K
First published: