Environmental crusader: 9 ವರ್ಷದಿಂದ ಕರಿದ ಎಣ್ಣೆಯಲ್ಲಿ ಚಲಿಸುತ್ತಿದೆ ಈ ಕಾರು! ಬೆಂಗಳೂರು ಮೂಲದ ಈ ಯುವಕ ಸಾಧನೆಯನ್ನು ಕಣ್ಣಾರೆ ನೋಡಿ

ಅವಿನಾಶ್​​ ನಾರಾಯಣಸ್ವಾಮಿ ಎಂಬಾತ ತನ್ನ ಕಾಋಇಗೆ ಕರಿದ ಎಣ್ಣೆಯನ್ನು ಬಳಸುವ ಮೂಲಕ ಕಾರು ಓಡಿಸುತ್ತಿದ್ದಾನೆ. ಅಂದಹಾಗೆಯೇ 9 ವರ್ಷದಿಂದ ಈ ಕಾರು ಚಲಾಯಿಸುತ್ತಿದ್ದಾರೆ. ಈ ಯುವಕನ ಸಾಧನೆ ಇದೀಗ ಬೆಳಕಿಗೆ ಬಂದಿದೆ.

ಅವಿನಾಶ್​​ ನಾರಾಯಣಸ್ವಾಮಿ

ಅವಿನಾಶ್​​ ನಾರಾಯಣಸ್ವಾಮಿ

 • Share this:
  ಪೆಟ್ರೋಲ್ (petrol)​, ಡಿಸೇಲ್ (Disel),​ ಗ್ಯಾಸ್ (Gas)​, ಬ್ಯಾಟರಿ ಚಾರ್ಜ್​ನಿಂದ ಚಲಿಸುವ ವಾಹನವನ್ನು ನೋಡಿರುತ್ತೀರಾ. ಆದರೆ ಕರಿದ ಎಣ್ಣೆಯಲ್ಲಿ (fried oil) ಓಡಾಡುವ ವಾಹನವನ್ನು ನೋಡಿದ್ದೀರಾ? ಅಂತಹದೊಂದು ಕಾರು (Car) ಇಲ್ಲಿದೆ. ಹೌದು. ಆಗಸದತ್ತ ಮುಖ ಮಾಡಿದ ಇಂಧನ ಬೆಲೆಯ ನಡುವೆ ವ್ಯಕ್ತಿಯೋರ್ವ ತನ್ನ ಕಾರನ್ನು ಕರಿದ ಎಣ್ಣೆಯಲ್ಲಿ ಓಡಿಸುತ್ತಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಕಾರು ನಿನ್ನೆ ಮೊನ್ನೆಯಿಂದ ಕರಿದ ಎಣ್ಣೆಯಲ್ಲಿ ಓಡಾಡುತ್ತಿಲ್ಲ. 9 ವರ್ಷಗಳ ಹಿಂದಿನಿಂದಲೇ ಈ ಕಾರು ಚಲಿಸುತ್ತಿದೆ. ಅಂದಹಾಗೆಯೇ ಈ ಸಾಧನೆ ಮಾಡಿದ ವ್ಯಕ್ತಿ ಯಾರು? ಆ ಕಾರು ಯಾವ ಕಂಪನಿಯದ್ದು? ತಿಳಿಯೋಣ.

  ಬೆಂಗಳೂರು ಮೂಲದ ಅವಿನಾಶ್​​ ನಾರಾಯಣಸ್ವಾಮಿ ಎಂಬಾವರು ತನ್ನ ಕಾರಿಗೆ ಕರಿದ ಎಣ್ಣೆಯನ್ನು ಬಳಸುವ ಮೂಲಕ ಕಾರು ಓಡಿಸುತ್ತಿದ್ದಾರೆ. ಅಂದಹಾಗೆಯೇ 9 ವರ್ಷದಿಂದ ಈ ಕಾರು ಚಲಾಯಿಸುತ್ತಿದ್ದಾರೆ.

  ಅವಿನಾಶ್​​ ನಾರಾಯಣಸ್ವಾಮಿ ಕರಿದ ಎಣ್ಣೆಯನ್ನು ಜೈವಿಕ ಇಂಧನವನ್ನಾಗಿ ಮಾರ್ಪಡಿಸಿ ಬಳಸುತ್ತಿದ್ದಾರೆ. ಡಿಸೇಲ್​ ಚಾಲಿತ ವಾಹನಕ್ಕೆ ಇಂಧನ ಬಳಸುವ ಮೂಲಕ ಎಚ್ಚರೂ ಅಚ್ಚರಿಪಡುವಂತೆ ಮಾಡಿದ್ದಾರೆ.

  ಅವಿನಾಶ್​​ ನಾರಾಯಣಸ್ವಾಮಿ ಅವರೇ ತಯಾರಿಸಿದ ಜೈವಿಕ ಇಂಧನವನ್ನು ಕಾರಿಗೆ ಇಂಧನವಾಗಿ ಬಳಸುತ್ತಿದ್ದಾರೆ. ಅಂದಹಾಗೆಯೇ ಅನೇಕ ವರ್ಷಗಳಿಂದ ಕಾರನ್ನು ಓಡಿಸುತ್ತಿದ್ದಾರೆ. ಇದುವರೆಗೆ ಸುಮಾರು 1.20 ಲಕ್ಷ ಕಿ.ಮೀನಷ್ಟು ದೂರ ಈ ಕಾರು ಕ್ರಮಿಸಿದೆ.

  ಕರಿದ ಎಣ್ಣೆಯ ಬಳಕೆ

  ಸಾಮಾನ್ಯವಾಗಿ ಹೊಟೇಲ್​ಗಳಲ್ಲಿ ಎಣ್ಣೆಯನ್ನು ಉಪಯೋಗಿಸಿ ತಿಂದಿ ಮಾಡುತ್ತಾರೆ. ಹೀಗೆ ಉಪಯೋಗಿಸಿದ ಅಥವಾ ಕರಿದ ಎಣ್ಣೆಯನ್ನು ಅವಿನಾಶ್​​ ನಾರಾಯಣಸ್ವಾಮಿ ಖರೀದಿಸುತ್ತಾರೆ. ಬಳಿಕ 6 ರಿಂದ 7 ಗಂಟೆಗಳ ಕಾಲ ವಿವಿಧ ರೀತಿಯಲ್ಲಿ ಸಂಸ್ಕರಣೆ ಮಾಡುತ್ತಾರೆ.

  ಒಂದು ಲೀಟರ್​ ಎಣ್ಣೆಗೆ 700 ರಿಂದ 800 ಎಂ.ಎಲ್​ ಜೈವಿಕ ಇಂಧನ ದೊರೆಯುತ್ತದೆ. ಮಾತ್ರವಲ್ಲದೆ, ಇದರಿಂದ ಕಾರು ಕೂಡ ಚಲಿಸುತ್ತದೆ. ಅಂದಹಾಗೆಯೇ ಇತರ ಇಂಧನಕ್ಕೆ ಹೊಲಿಸಿದರೆ ಇದು ಬೆಸ್ಟ್​. ಏಕೆಂದರೆ ಕಡಿಮೆ ಖರ್ಚು ಮತ್ತು ಪರಿಸರ ಸ್ನೇಹಿಯಾಗಿದೆ. ಇಂಧನದ ಬೆಲೆ 60 ರಿಂದ 65 ರೂವರೆಗೆ ವೆಚ್ಚವಾಗುತ್ತದೆ.

  ಇದನ್ನೂ ಓದಿ: Snake Massage: ಹೆಬ್ಬಾವಿನ ಮಸಾಜ್! ಈ ಸೇವೆ ಎಲ್ಲಿ ಸಿಗುತ್ತೆ? ಹೇಗಿರುತ್ತೆ?

  9 ವರ್ಷಗಳಿಂದ ಓಡುತ್ತಿರುವ ಕಾರು!

  ಒಂದಲ್ಲಾ, ಎರಡಲ್ಲಾ ಅವಿನಾಶ್​​ ನಾರಾಯಣಸ್ವಾಮಿ ಅವರು ಕರಿದ ಎಣ್ಣೆಯನ್ನು ಬಳಸಿ 9 ವರ್ಷದಿಂದ ವಾಹನ ಚಲಾಯಿಸುತ್ತಿದ್ದಾರೆ. ಹಾಗಾಗಿ ಇದು ನಂಬಲು ಸಾಧ್ಯವಾಗಿದೆ. ಮಾತ್ರವಲ್ಲದೆ, ಅವರು ಓಡಿಸುವ ವಾಹನವು ಯಾವುದೇ ರೀತಿಯಲ್ಲೂ ಹಾನಿಗೊಳಗಾಗಿಲ್ಲ. ಕರಿದ ಎಣ್ಣೆಯಿಂದ ಎಂಜಿನ್​ ಅಥವಾ ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದು ಅವಿನಾಶ್​​ ನಾರಾಯಣಸ್ವಾಮಿ ಹೇಳುತ್ತಾರೆ.

  ಮೈಲೇಜ್​ ಎಷ್ಟು?

  ಅವಿನಾಶ್​​ ನಾರಾಯಣಸ್ವಾಮಿ ಅವರು 2013ರಿಂದ ತಮ್ಮ ಫೋರ್ಡ್​ ಕಾರಿಗೆ ಕರಿದ ಎಣ್ಣೆಯನ್ನು ಸಂಸ್ಕರಿಸಿ ವಾಹನ ಚಲಾಯಿಸುತ್ತಾರೆ. ಒಂದು ಲೀಟರ್​ ಜೈವಿಕ ಇಂಧನ ಬಳಸಿದ ಕಾರು ಸುಮಾರು 15 ರಿಂದ 17 ಕಿ.ಮೀ ಮೈಲೇಜ್​ ನೀಡುತ್ತದೆ. ಅದರಲ್ಲೂ ಹೊಗೆ ತಪಾಸಣೆ ವಿಚಾರದಲ್ಲೂ ಯಾವುದೇ ಸಮಸ್ಯೆ ಕಂಡುಬಂದಿಲ್ಲ.

  ಅವಿನಾಶ್​​ ನಾರಾಯಣಸ್ವಾಮಿ


  ಮತ್ತೊಂದು ಸಂಗತಿಯೆಂದರೆ ಇಂಧನ ತಯಾಋಇಸುವಾಗ ಬರುವ ತ್ಯಾಜ್ಯದಿಂದ ಇನ್ನಿತರ ವಸ್ತುಗಳನ್ನು ಅವಿನಾಶ್​​ ನಾರಾಯಣಸ್ವಾಮಿ ಅವರು ತಯಾರಿಸುತ್ತಿದ್ದಾರೆ. ಹ್ಯಾಂಡ್​ವಾಶ್​​, ಫ್ಲೋರ್​ ಕ್ಲೀನರ್​ ಸೇರಿದಂತೆ ಇದರಿಂದ ಹಲವು ಉತ್ಪನ್ನಗಳನ್ನು ಅವಿನಾಶ್​​ ನಾರಾಯಣಸ್ವಾಮಿ ತಯಾರಿಸುತ್ತಿದ್ದಾರೆ.

  ಇದನ್ನೂ ಓದಿ: Xiaomi 12 Lite ಸ್ಮಾರ್ಟ್​ಫೋನ್​ ಬಿಡುಗಡೆ ಸನ್ನದ್ಧ! ಆದ್ರೆ ಈ ಫೋನ್​ ಸ್ಥಗಿತಗೊಳ್ಳಲಿದೆ

  ಅವಿನಾಶ್​​ ನಾರಾಯಣಸ್ವಾಮಿ ಈ ಸಾಧನೆಯಿಂದಾಗಿ ಇಂಡಿಯನ್​ ಬುಕ್​ ಆಪ್​ ರೆಕಾರ್ಡ್​ನಲ್ಲಿ ದಾಖಲೆ ಬರೆದಿದ್ದಾರೆ. ಇಂತಹ ಚಿಂತನೆಯೊಂದಿಗೆ ಅವರು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಇದರ ಘಟಕ ತೆರೆದಿದ್ದಾರೆ ಮತ್ತು ಕಾರ್ಖಾನೆ ಯಂತ್ರಗಳನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಜೊತೆಗೆ ಇದರಿಂದಾಗುವ ಅನುಕೂಲ ಮತ್ತು ಅನಾನುಕೂದ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ ಎಂದು ಅವಿನಾಶ್​​ ನಾರಾಯಣಸ್ವಾಮಿ ಹೇಳಿದ್ದಾರೆ.

  ನಂತರ  ಮಾತು ಮುಂದುವರಿಸಿದ ಅವರು,ಇದೊಂದು ಆತ್ಮನಿರ್ಭರ ಮತ್ತು ಪರಿಸರ ಸ್ನೇಹಿ ಇಂಧನವಾಗಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚು ವಾಹನಗಳಲ್ಲಿ ಬಳಸುವ ಸಾಧ್ಯತೆ ಎಂದು ಎಂದು ಹೇಳಿದ್ದಾರೆ.
  Published by:Harshith AS
  First published: