ಬೆಂಗಳೂರು ಇಂಜಿನಿಯರ್​ ನೂತನ ಆವಿಷ್ಕಾರ; ಹೆಲ್ಮೆಟ್​, ಜಾಕೆಟ್​ಗೂ ಬಂತು ಎಸಿ!

ವಿಶೇಷ ಸಂಗತಿಯೆಂದರೆ ಈ ಎಸಿಯನ್ನು ಹೆಲ್ಮೆಟ್​ಗೆ ಮಾತ್ರವಲ್ಲದೇ ಉತ್ತಮ ಗುಣಮಟ್ಟದ ಜಾಕೆಟ್​ಗೂ ಬಳಸಬಹುದು. ಲಾಂಗ್ ರೈಡ್ ಹೋಗೋರು, ವಿಪರೀತ ಟ್ರಾಫಿಕ್​ಗಳಲ್ಲಿ ಓಡಾಡೋರಿಗೆಲ್ಲಾ ಇದು ಅತ್ಯಂತ ಉಪಯುಕ್ತವಾಗಿದೆ.

Sushma Chakre | news18-kannada
Updated:September 18, 2019, 6:54 PM IST
ಬೆಂಗಳೂರು ಇಂಜಿನಿಯರ್​ ನೂತನ ಆವಿಷ್ಕಾರ; ಹೆಲ್ಮೆಟ್​, ಜಾಕೆಟ್​ಗೂ ಬಂತು ಎಸಿ!
ಎಸಿ ಹೆಲ್ಮೆಟ್​ನೊಂದಿಗೆ ಸಂದೀಪ್
  • Share this:
ಬೆಂಗಳೂರು (ಸೆ. 18): ದೇಶದೆಲ್ಲೆಡೆ ಹೆಲ್ಮೆಟ್​ ಕಡ್ಡಾಯಗೊಳಿಸಿದ ನಂತರ ದ್ವಿಚಕ್ರ ವಾಹನ ಸವಾರರ ತಲೆಬಿಸಿ ಜಾಸ್ತಿಯಾಗಿದೆ. ಕಟ್ಟುನಿಟ್ಟಾಗಿ ನಿಯಮ ಪಾಲಿಸದಿದ್ದರೆ ದಂಡ ಕಟ್ಟಬೇಕಲ್ಲ ಎಂಬ ಚಿಂತೆ ಒಂದೆಡೆಯಾದರೆ ಹೆಲ್ಮೆಟ್​ ಹಾಕಿಕೊಂಡು ಗಾಡಿ ಓಡಿಸುವಾಗ ತಲೆಯೆಲ್ಲ ಬೆವರಿ ಇರೋಬರೋ ಕೂದಲೂ ಉದುರಿಹೋಗುತ್ತಲ್ಲ ಎಂಬ 'ತಲೆಬಿಸಿ' ಇನ್ನೊಂದೆಡೆ. ಹೆಲ್ಮೆಟ್​ ಹಾಕಿಕೊಂಡು ಸೆಖೆಯಿಂದ ಪರಿತಪಿಸುವವರಿಗೆ ಬೆಂಗಳೂರಿನ ಮೆಕ್ಯಾನಿಕಲ್ ಇಂಜಿನಿಯರ್​ ಒಬ್ಬರು ಸಿಹಿಸುದ್ದಿ ನೀಡಿದ್ದಾರೆ. 

ಇನ್ನುಮುಂದೆ ನೀವೇನಾದರೂ ಲಾಂಗ್​ಡ್ರೈವ್ ಹೋಗುವುದಾದರೆ ಇಷ್ಟವಿಲ್ಲದಿದ್ದರೂ ಕಷ್ಟಪಟ್ಟು ಹೆಲ್ಮೆಟ್​ ಧರಿಸಬೇಕಾಗಿಲ್ಲ. ಯಾಕೆಂದರೆ ಬೆಂಗಳೂರಿನ ಮೆಕ್ಯಾನಿಕಲ್ ಇಂಜಿನಿಯರ್ ಎಸಿ ಹೆಲ್ಮೆಟ್​ ಕಂಡುಹಿಡಿದಿದ್ದಾರೆ. ಏನಿದು ಎಸಿ ಹೆಲ್ಮೆಟ್​? ಅಂತ ಆಶ್ಚರ್ಯ ಪಡುತ್ತಿದ್ದೀರ? ಎಸಿ ಹೆಲ್ಮೆಟ್ ಅನ್ನೋ ಈ ಚಮತ್ಕಾರಿ ವಸ್ತುವಿನ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಸಂದೀಪ್ ದಹಿಯಾ ಎಸಿ ಹೆಲ್ಮೆಟ್​ ಕಂಡುಹಿಡಿದಿರುವ ವ್ಯಕ್ತಿ. ಮಾಮೂಲಿ ಹೆಲ್ಮೆಟ್​ಗೆ  ಹಿಂದಿನಿಂದ ಒಂದು ಪೈಪ್ ಇಟ್ಟು ಆ ಪೈಪ್​ನಿಂದ ಒಂದು ಪುಟಾಣಿ ಎಸಿ ಕನೆಕ್ಟ್ ಮಾಡಲಾಗುತ್ತದೆ. ತಮ್ಮ ಬೈಕ್​ ಹಿಂಬದಿಗೆ ಎಸಿ ಯಂತ್ರವನ್ನು ಕಟ್ಟಿಕೊಂಡು ಬೈಕ್ ಚಲಾಯಿಸಬಹುದು. ಇದು ಲಾಂಗ್​ಡ್ರೈವ್​ ಹೋಗುವವರಿಗೆ ಬೆಸ್ಟ್​, ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೂಡ ಈ ಹೆಲ್ಮೆಟ್​ ಅನ್ನು ಆರಾಮಾಗಿ ಬಳಸಬಹುದು.

ನೀರಿನಲ್ಲಿ ಮುಳುಗುತ್ತಿದ್ದವನ ಕಂಡ ಆನೆಮರಿ ಮಾಡಿದ್ದೇನು ಗೊತ್ತಾ?

ಶೇ. 90ರಷ್ಟು ದೇಸೀ ಉಪಕರಣಗಳನ್ನೇ ಬಳಸಿ ಸಂದೀಪ್ ಈ ಎಸಿಯನ್ನು ತಯಾರಿಸಿದ್ದಾರೆ. 12 ವೋಲ್ಟ್ ತಾಕತ್ತಿನ ಈ ಎಸಿ ಸುಮಾರು 3.5 ಆಂಪ್​ಗಳಷ್ಟು ವಿದ್ಯುತ್ ಬಳಸುತ್ತದೆ. ನೇರವಾಗಿ ಬೈಕ್​ನ ಬ್ಯಾಟರಿಗೇ ಇದನ್ನು ಕನೆಕ್ಟ್ ಮಾಡಿರುವುದರಿಂದ ಎಲ್ಲಿಯವರೆಗೆ ಗಾಡಿ ಓಡುತ್ತೋ ಅಲ್ಲಿಯವರೆಗೂ ಎಸಿ ಕೆಲಸ ಮಾಡುತ್ತದೆ. ಇನ್ನು ಈ ಯಂತ್ರದಿಂದ ರಬ್ಬರ್ ಪೈಪಿನ ಮೂಲಕ ಹೆಲ್ಮೆಟ್​ಗೆ ಕನೆಕ್ಷನ್ ಕೊಡಲಾಗುತ್ತದೆ. ಅಲ್ಲಿಂದ ನಾಲ್ಕು ಚಿಕ್ಕ ಟ್ಯೂಬ್​ಗಳ ಮೂಲಕ ಮುಖದ ಮುಂಭಾಗಕ್ಕೆ ಕೂಲ್ ಆದ ಗಾಳಿ ಹರಿದು ಬರುತ್ತದೆ.

ವಾತಾವರಣದಿಂದ ಗಾಳಿಯನ್ನು ಒಳಗೆ ಎಳೆದುಕೊಳ್ಳೋ ಈ ಯಂತ್ರ ಅದನ್ನು ಕೂಲ್ ಮಾಡಿ ನೇರವಾಗಿ ಹೆಲ್ಮೆಟ್ ಒಳಗೆ ರಿಲೀಸ್ ಮಾಡುವ ವ್ಯವಸ್ಥೆ ಕಲ್ಪಿಸುತ್ತದೆ. ದಿನಾ ಮನೆಯಿಂದ ಆಫೀಸಿಗೆ ಈ ಎಸಿ ಹೆಲ್ಮೆಟ್ ತೊಟ್ಟು ಓಡಾಡೋ ಸಂದೀಪ್​ಗೆ ಪ್ರತೀ ಸಿಗ್ನಲ್​ನಲ್ಲೂ ಹತ್ತಾರು ಜನರ ಕುತೂಹಲದ ಪ್ರಶ್ನೆಗಳು ಎದುರಾಗ್ತಾನೇ ಇರುತ್ತದಂತೆ. ಬೈಕ್​ಗೆ ಕಟ್ಟಿರೋ ಎಸಿಯನ್ನು ಬ್ಯಾಕ್​ಪ್ಯಾಕ್​ ರೀತಿ ಹಾಕಿಕೊಂಡೂ ಹೋಗಬಹುದು. ಕೇವಲ 1,800 ಗ್ರಾಂ ತೂಕದ ಯಂತ್ರ ಇದಾಗಿರೋದ್ರಿಂದ ಭಾರವಿರುವುದಿಲ್ಲ.

PHOTOS: ಸನ್​ಗ್ಲಾಸ್​ ಹಾಕಿ ಕೂಲ್​ ಆಗಿ ಮಿಂಚಿದ ಮುದ್ದು ನಾಯಿಗಳುವಾತಾವರಣಕ್ಕೆ ತಕ್ಕಂತೆ ತಾಪವೂ ಬದಲಾಗುತ್ತೆ:

ವಾತಾವರಣದ ಟೆಂಪರೇಚರ್ ಎಷ್ಟಿರುತ್ತೋ ಅದಕ್ಕೆ ಸೂಕ್ತವಾಗಿ ಹೆಲ್ಮೆಟ್ ಒಳಗೂ ಟೆಂಪರೇಚರ್ ಬದಲಾಗುತ್ತದೆ. ಹೊರಗೆ ವಿಪರೀತ ಚಳಿ, ಹಿಮ ಇದ್ರೆ ಕೂಲ್ ಆಗುತ್ತಿದ್ದ ಹೆಲ್ಮೆಟ್ ತಾನೇ ತಾನಾಗಿ ಬಿಸಿಯೂ ಆಗುತ್ತೆ. ಹಾಗಾಗಿ ಇದು ಹಾಟ್ ಆ್ಯಂಡ್ ಕೋಲ್ಡ್ ಹೆಲ್ಮೆಟ್ ಅಂದರೂ ತಪ್ಪಾಗುವುದಿಲ್ಲ.  ಈ ಉಪಕರಣಕ್ಕೆ 'ವಾತಾನುಕೂಲ್' ಎಂಬ ಹೆಸರು ಇಟ್ಟಿರುವ ಸಂದೀಪ್ ಇದನ್ನು ಸಂಪೂರ್ಣವಾಗಿ ರೆಡಿ ಮಾಡೋಕೆ ಬರೋಬ್ಬರಿ ನಾಲ್ಕೂವರೆ ವರ್ಷ ಶ್ರಮ ವಹಿಸಿದ್ದಾರೆ. ಹತ್ತಾರು ವೈಫಲ್ಯದ ನಂತರ ಈಗ ಎಸಿ ಹೆಲ್ಮೆಟ್ ರೆಡಿಯಾಗಿದೆ. ಕೇವಲ ರೈಡರ್ಸ್ ಮಾತ್ರವಲ್ಲದೇ ಹಿಂಬದಿ ಸವಾರರಿಗೂ ಈ ಹೆಲ್ಮೆಟ್ ಬಹಳ ಉಪಯೋಗವಾಗುತ್ತದೆ.

ಆಕ್ಸ್​ಫರ್ಡ್​ ಡಿಕ್ಷನರಿಯಲ್ಲಿ ಯಡವಟ್ಟು; ಮಹಿಳೆಗೆ ಸಮಾನಾರ್ಥಕ ಪದ ವೇಶ್ಯೆ!

ಜಾಕೆಟ್​ಗೂ ಈ ಎಸಿ ಅಳವಡಿಸಬಹುದು:

ಇನ್ನೊಂದು ವಿಶೇಷ ಸಂಗತಿಯೆಂದರೆ ಈ ಎಸಿಯನ್ನು ಹೆಲ್ಮೆಟ್​ಗೆ ಮಾತ್ರವಲ್ಲದೇ ಉತ್ತಮ ಗುಣಮಟ್ಟದ ಜಾಕೆಟ್​ಗೂ ಬಳಸಬಹುದು. ಲಾಂಗ್ ರೈಡ್ ಹೋಗೋರು, ವಿಪರೀತ ಟ್ರಾಫಿಕ್​ಗಳಲ್ಲಿ ಓಡಾಡೋರಿಗೆಲ್ಲಾ ಇದು ಅತ್ಯಂತ ಉಪಯುಕ್ತ ತಂತ್ರಜ್ಞಾನ. ತಮ್ಮ ಗೆಳೆಯರ ಬಳಗದಲ್ಲೇ ಒಂದಷ್ಟು ಜನ್ರಿಗೆ ಈ ಹೆಲ್ಮೆಟ್ ಮತ್ತು ಜಾಕೆಟ್​ಗಳನ್ನು ಕೊಟ್ಟು, ಅವರ ಪ್ರತಿಕ್ರಿಯೆ ಪಡೆಯೋ ಆಲೋಚನೆ ಇವ್ರಿಗೆ. ವಾತಾನುಕೂಲ್​ನ ಪೇಟೆಂಟ್ ಇವರ ಬಳಿ ಇದ್ದು ಮತ್ತಷ್ಟು ಫೈನ್ ಟ್ಯೂನಿಂಗ್ ಮಾಡಿ ಇದನ್ನು ಎಲ್ಲರಿಗೂ ಕೈಗೆಟುಕುವ ಬೆಲೆಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಆಲೋಚನೆ ಇವರದ್ದು.

(ವರದಿ: ಸೌಮ್ಯ ಕಳಸ)

First published: September 18, 2019, 6:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading