ಬೆಂಗಳೂರು (ಅ. 18): ವೀಕೆಂಡ್ ಮೂಡ್ನಲ್ಲಿದ್ದ ಆತ ಬಾಡೂಟ ಮಾಡಲು ಮನೆಯಲ್ಲಿ ಮಟನ್ ತರುವುದಾಗಿ ಹೇಳಿ ಬಂದಿದ್ದ. ಮನೆಯಿಂದ ಹೊರ ಬಂದವನು ದಾರಿ ಮಧ್ಯೆಯೇ ಕಂಡ ಕಂಡವರಿಗೆ ಚಾಕು ಇರಿದು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಇಂದು ಬೆಳಗ್ಗೆ 8.30ರ ಸುಮಾರಿಗೆ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಚಾಕು ಹಾಕಿ ರಾದ್ದಾಂತ ಮಾಡಿದ್ದ. ಆತನ ರೌದ್ರಾವತಾರಕ್ಕೆ ಐದು ಜನ ಗಾಯಗೊಂಡು ಓರ್ವ ಸಾವನ್ನಪ್ಪಿದ್ದ. ಹೀಗೆ ಅಡ್ಡಾದಿಡ್ಡಿ ಚಾಕು ಹಾಕಿದ ವ್ಯಕ್ತಿ ಈತನೇ ನೋಡಿ ಹೆಸರು ಗಣೇಶ್. ಭಕ್ಷಿ ಗಾರ್ಡನ್ ನಿವಾಸಿಯಾದ ಗಣೇಶ್ ಬೆಳಗ್ಗೆ ಮಟನ್ ತರಲು ಮೈಸೂರು ರಸ್ತೆಯ ಮಟನ್ ಶಾಪ್ ಗೆ ಹೋಗಿದ್ದನಂತೆ. ಈ ವೇಳೆ ಅದೇನಾಯ್ತೊ ಏನೋ ಏಕಾಏಕಿ ಮಟನ್ ಶಾಪ್ ನಲ್ಲಿದ್ದ ಚಾಕು ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ.
ಚಾಕು ತೆಗೆದುಕೊಂಡು ರಸ್ತೆಗೆ ಬಂದ ಗಣೇಶ್ ಬಿನ್ನಿ ಮಿಲ್ ಬಳಿ ರಸ್ತೆಯಲ್ಲಿ ಮಾರಿ ಎಂಬ ಯುವಕನ ಎದೆಗೆ ಚಾಕು ಇರಿದಿದ್ದನಂತೆ. ಚಾಕು ಇರಿದ ರಭಸಕ್ಕೆ ಮಾರಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ. ಬಳಿಕ ರಸ್ತೆಯಲ್ಲಿ ಮುಂದೆ ಸಾಗಿದ ಆರೋಪಿ ಗಣೇಶ್ ವೇಲಾಯುಧನ್, ಸುರೇಶ್ ಎಂಬುವರು ಸೇರಿ ಐವರಿಗೆ ಚಾಕು ಇರಿದು ಗಾಯಗೊಳಿಸಿದ್ದಾನೆ. ಬಾಳೆ ಮಂಡಿಯಿಂದ ಸುಮಾರು ಒಂದೂವರೆ ಕಿ.ಮೀ ಸಾಗಿದ ಆಸಾಮಿ ರಸ್ತೆಯಲ್ಲಿ ಸಿಕ್ಕವರಿಗೆ ಇರಿದು ರಾದ್ದಾಂತ ಮಾಡಿದ್ದಾನೆ.
ಇದನ್ನೂ ಓದಿ: ಮಾರ್ಕೆಟ್ನಲ್ಲಿ ಕಡಿಮೆ ಬೆಲೆಗೆ ಸಿಗುವ ತರಕಾರಿ ಅಂಗಡಿಗಳಲ್ಲಿ ದುಪ್ಪಟ್ಟಾಗೋದೇಕೆ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ