HOME » NEWS » State » BANGALORE MAN QUARRELS WITH BBMP MARSHALS FOR COLLECTING 1000 RUPEES FOR NOT WEARING MASK SCT

ನಾಳೆ ಬೆಳಗ್ಗೆವರೆಗೂ ಮಾಸ್ಕ್ ಹಾಕಲ್ಲ; 1,000 ರೂ. ದಂಡ ಕಟ್ಟಿಸಿಕೊಂಡಿದ್ದಕ್ಕೆ ಕೂಲಿ ಕಾರ್ಮಿಕನ ರಂಪಾಟ

ಮಾಸ್ಕ್ ಇಲ್ಲ ಅಂತ 1 ಸಾವಿರ ರೂ. ದಂಡ ಕಟ್ಟಿಸಿಕೊಂಡಿದ್ದಾರೆ. ನಾನು ಕಟ್ಟಿರುವ ದಂಡದ ವ್ಯಾಲಿಡಿಟಿ 24 ಗಂಟೆ. ಹೀಗಾಗಿ, ನಾಳೆ ಬೆಳಗ್ಗೆ 11 ಗಂಟೆಯವರೆಗೂ ನಾನು ಮಾಸ್ಕ್ ಧರಿಸಲ್ಲ ಎಂದು ಮೆಜೆಸ್ಟಿಕ್​ನಲ್ಲಿ ಕೂಲಿ ಕಾರ್ಮಿಕ ಗಲಾಟೆ ಮಾಡಿದ್ದಾನೆ.

news18-kannada
Updated:October 7, 2020, 1:02 PM IST
ನಾಳೆ ಬೆಳಗ್ಗೆವರೆಗೂ ಮಾಸ್ಕ್ ಹಾಕಲ್ಲ; 1,000 ರೂ. ದಂಡ ಕಟ್ಟಿಸಿಕೊಂಡಿದ್ದಕ್ಕೆ ಕೂಲಿ ಕಾರ್ಮಿಕನ ರಂಪಾಟ
ಬಿಬಿಎಂಪಿ ಮಾರ್ಷಲ್ ಜೊತೆ ಕೂಲಿ ಕಾರ್ಮಿಕನ ವಾಗ್ವಾದ
  • Share this:
ಬೆಂಗಳೂರು (ಅ. 7): ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದುಬಾರಿ ದಂಡ ವಿಧಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿದ್ಯಂತ ಬಿಬಿಎಂಪಿ ಮಾರ್ಷಲ್​ಗಳು ಮಾಸ್ಕ್ ಧರಿಸದವರಿಗೆ 1,000 ರೂ. ದಂಡ ವಿಧಿಸುತ್ತಿದ್ದಾರೆ. ಇಂದು ಕೂಡ ಮೆಜೆಸ್ಟಿಕ್​ನಲ್ಲಿ ಮಾಸ್ಕ್ ಹಾಕದೆ ಓಡಾಡುತ್ತಿದ್ದವರಿಂದ ಬಿಬಿಎಂಪಿ ಮಾರ್ಷಲ್​ಗಳು 1 ಸಾವಿರ ರೂ. ದಂಡ ವಸೂಲಿ ಮಾಡಿದರು. ಈ ವೇಳೆ ರಂಪಾಟ ಮಾಡಿದ ವ್ಯಕ್ತಿ ದುಬಾರಿ ದಂಡ ಕಟ್ಟಿಸಿಕೊಂಡಿದ್ದಕ್ಕೆ ಮಾರ್ಷಲ್​ಗಳ ವಿರುದ್ಧ ಗಲಾಟೆ ಮಾಡಿದ್ದಾನೆ. ಇನ್ನು 24 ಗಂಟೆಗಳ ಕಾಲ ನಾನು ಮಾಸ್ಕ್ ಹಾಕಿಕೊಳ್ಳುವುದಿಲ್ಲ ಎಂದು ಆತ ಪಟ್ಟು ಹಿಡಿದಿದ್ದಾನೆ.

ಮಾಸ್ಕ್ ಹಾಕದ್ದಕ್ಕೆ ದಂಡ ಕಟ್ಟಿದವರು ಅವಾಂತರ ಮಾಡಿದ್ದಾರೆ. ಮೆಜೆಸ್ಟಿಕ್​ನಲ್ಲಿ ದಂಡ ಕಟ್ಟಿದ ವ್ಯಕ್ತಿಯೋರ್ವ ಬಳಿಕ ಗಲಾಟೆ ಮಾಡಿದ್ದಾನೆ. ಕೂಲಿ ಮಾಡುತ್ತಿದ್ದ ವ್ಯಕ್ತಿ ಮಾಸ್ಕ್ ಧರಿಸದೆ ಮೆಜೆಸ್ಟಿಕ್​ಗೆ ಬಂದಿದ್ದ. ಮಾಸ್ಕ್ ಧರಿಸದಿದ್ದಕ್ಕೆ ಆತನಿಂದ ಮಾರ್ಷಲ್​ಗಳು 1,000 ರೂ. ದಂಡ ಕಟ್ಟಿಸಿಕೊಂಡಿದ್ದರು. ದಂಡ ಕಟ್ಟಿದ ಬಳಿಕ ಗಲಾಟೆ ಮಾಡಿದ ವ್ಯಕ್ತಿ ನಾನು ದಂಡ ಕಟ್ಟಿದ್ದೇನೆ. ಇನ್ನು 24 ಗಂಟೆ ಮಾಸ್ಕ್ ಹಾಕುವುದಿಲ್ಲ. ಕೂಲಿ ಮಾಡಿ ದಿನಕ್ಕೆ 300 ರೂ. ಸಂಪಾದನೆ ಮಾಡುತ್ತಿದ್ದೆ. ಇದೀಗ ಮಾಸ್ಕ್ ಇಲ್ಲ ಅಂತ 1 ಸಾವಿರ ರೂ. ದಂಡ ಕಟ್ಟಿಸಿಕೊಂಡಿದ್ದಾರೆ. ನಾನು ಕಟ್ಟಿರುವ ದಂಡದ ವ್ಯಾಲಿಡಿಟಿ 24 ಗಂಟೆ. ಹೀಗಾಗಿ, ನಾಳೆ ಬೆಳಗ್ಗೆ 11 ಗಂಟೆಯವರೆಗೂ ನಾನು ಮಾಸ್ಕ್ ಧರಿಸಲ್ಲ ಎಂದು ವ್ಯಕ್ತಿ ಗಲಾಟೆ ಮಾಡಿದ್ದಾನೆ.

ಇದನ್ನೂ ಓದಿ: ಮಾಸ್ಕ್ ಧರಿಸದಿದ್ದರೆ ಇಂದಿನಿಂದ ಪೊಲೀಸರೂ ಹಾಕ್ತಾರೆ 1,000 ರೂ. ದಂಡ!

ದಂಡ ಕಟ್ಟಿದ ವ್ಯಕ್ತಿಯ ರಂಪಾಟಕ್ಕೆ ಬಿಬಿಎಂಪಿ ಮಾರ್ಷಲ್​ಗಳು ಸುಸ್ತಾಗಿದ್ದಾರೆ. ಆತನಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದರೂ ಮಾತು ಕೇಳದೆ ಗಲಾಟೆ ಮಾಡಿದ್ದಾನೆ. ಮಾಸ್ಕ್ ಹಾಕಿದ್ರೆ ಉಸಿರಾಟ ಮಾಡೋಕೆ ಕಷ್ಟ ಆಗುತ್ತದೆ. ಉಸಿರಾಟ ಮಾಡಿದ್ದರೆ ನಾನು ಸಾಯುತ್ತೇನೆ. ನಾನು ಬದುಕಬೇಕು ಅಂದ್ರೆ ಮಾಸ್ಕ್ ಹಾಕೋದಿಲ್ಲ ಅಂತ ಆತ ಪಟ್ಟುಹಿಡಿದಿದ್ದಾನೆ. ಮೆಜೆಸ್ಟಿಕ್​ನಲ್ಲಿ ಮಾರ್ಷಲ್​ಗಳ ಜೊತೆ ಗಲಾಟೆ ಮಾಡಿದ ಆ ವ್ಯಕ್ತಿಯ ವಿಡಿಯೋ ಈಗ ವೈರಲ್ ಅಗಿದೆ.

ಮಾಸ್ಕ್ ಧರಿಸದೆ ಓಡಾಡುವವರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 1000 ರೂ. ದಂಡ ವಿಧಿಸಲು ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಅದರಂತೆ ಬಿಬಿಎಂಪಿ ಮಾರ್ಷಲ್​ಗಳು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದುಬಾರಿ ದಂಡವನ್ನೂ ಹಾಕಲು ಆರಂಭಿಸಿದ್ದರು. ಆದರೆ, ಇನ್ನುಮುಂದೆ ಕೇವಲ ಬಿಬಿಎಂಪಿ ಮಾರ್ಷಲ್​ಗಳು ಮಾತ್ರವಲ್ಲ ಪೊಲೀಸರು ಕೂಡ ಮಾಸ್ಕ್ ಹಾಕದವರಿಗೆ 1000 ರೂ. ದಂಡ ವಿಧಿಸಲಿದ್ದಾರೆ. ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಪೊಲೀಸ್ ಕಮಿಷನರ್ ದಂಡ ವಿಧಿಸೋ ಮಷಿನ್ ಕಳುಹಿಸಿದ್ದಾರೆ.
Published by: Sushma Chakre
First published: October 7, 2020, 1:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories