ಬೆಂಗಳೂರು (ಜುಲೈ 15); ಲಾಕ್ಡೌನ್ನಿಂದಾಗಿ ಬೆಂಗಳೂರಿನ ಜನ ಸಾಮಾನ್ಯರು ಇಷ್ಟು ದಿನ ತಮ್ಮ ಊರಿಗೆ ಬಸ್, ಲಾರಿ, ಟೆಂಪೋನಲ್ಲಿ ಗುಳೆ ಹೊರಟದ್ದು ಆಯ್ತು ಇದೀಗ ವಿಮಾನದಲ್ಲಿ ಗುಳೆ ಹೊರಡುವ ಸರದಿ ಆರಂಭವಾಗಿದೆ. ಹೌದು..! ನಂಬಲು ಅಸಾಧ್ಯವಾದರೂ ಇದೇ ಸತ್ಯ!
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾರಣಾಂತಿಕ ಕೊರೋನಾ ಸೋಂಕು ದಿನೇ ದಿನೇ ಕೈಮೀರುತ್ತಲೇ ಇದೆ. ಹೀಗಾಗಿ ತಜ್ಞರ ಅಭಿಪ್ರಾಯದಂತೆ ರಾಜ್ಯದಲ್ಲಿ ಇಂದಿನಿಂದ ಮತ್ತೆ ಒಂದು ವಾರಗಳ ಕಾಲ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಪರಿಣಾಮ ಕಳೆದ ಎರಡು ದಿನಗಳಿಂದ ಬೇರೆ ಬೇರೆ ಜಿಲ್ಲೆಗೆ ಪ್ರಯಾಣಿಸಬೇಕಿದ್ದ ಪ್ರಯಾಣಿಕರು ಗಡಿಬಿಡಿಯಲ್ಲಿ ಬಸ್, ಟೆಂಪೋ, ಲಾರಿ ಹಿಡಿದು ಹೊರಟಿದ್ದು ಸುದ್ದಿ ಸದ್ದು ಮಾಡಿತ್ತು.
ಆದರೆ, ಇದೀಗ ಬೇರೆ ಬೇರೆ ರಾಜ್ಯಗಳಿಗೆ ತೆರಳಬೇಕಿರುವವರು ಗುಳೆ ಹೊರಡಲು ವಿಮಾನ ನಿಲ್ದಾಣಕ್ಕೆ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಬೆಂಗಳೂರನ್ನು ತೊರೆದು ತಮ್ಮ ಊರಿಗೆ ಹೋಗಿ ನೆಲೆಸಲು ವಿಮಾನಗಳ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಇಷ್ಟು ದಿನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರಿಲ್ಲದೆ ಬಣಗುಡುತ್ತಿತ್ತು. ಆದರೆ, ಮೊನ್ನೆ ಸಿಎಂ ಯಡಿಯೂರಪ್ಪ ಮತ್ತೆ ಒಂದು ವಾರಗಳ ಕಾಲ ಲಾಕ್ಡೌನ್ ಘೋಷಣೆ ಮಾಡುತ್ತಿದ್ದಂತೆ, ಖಾಲಿ ಇದ್ದ ವಿಮಾನ ನಿಲ್ದಾಣಗಳು ಗುಳೆ ಹೊರಡುವ ಜನರಿಂದ ಒಮ್ಮೆಲೆ ಭರ್ತಿಯಾಗಿವೆ ಎನ್ನಲಾಗುತ್ತಿದೆ.
ಪ್ರಯಾಣಿಕರು ಹೆಚ್ಚು ಸಂಖ್ಯೆಯಲ್ಲಿ ವಿಮಾನಗಳನ್ನು ಬುಕ್ ಮಾಡಿದ್ದ ಕಾರಣ ಇಂದು ಒಂದೇ ದಿನ ಬರೋಬ್ಬರಿ 63 ವಿಮಾನಗಳನ್ನು ಶೆಡ್ಯುಲ್ ಮಾಡಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ನ್ಯೂಸ್18ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : World Youth Skill Day - ವಿಶ್ವ ಯುವ ಕೌಶಲ್ಯ ದಿನ: ಇವತ್ತು ಪ್ರಧಾನಿ ನರೇಂದ್ರ ಮೋದಿ ಭಾಷಣ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ