ಬೆಂಗಳೂರಿನಲ್ಲಿ ದಟ್ಟ ಮಂಜು ಕವಿದರೂ ಇನ್ಮುಂದೆ ವಿಮಾನ ಹಾರಾಟ ಸುಲಭ

ಇದೀಗ ಕೆಂಪೇಗೌಡ  ಅಂತರಾಷ್ಟ್ರೀಯ  ವಿಮಾನ  ನಿಲ್ದಾಣ  ಸಹ ಕ್ಯಾಟ್  lll  ಬಿ ಮೇಲ್ದರ್ಜೇಗೇರಿದೆ.  ಕ್ಯಾಟ್  lll ಬಿ ಸೌಲಭ್ಯ  ಹೊಂದಿರುವ   ದಕ್ಷಿಣ  ಭಾರತದ  ಏಕೈಕ  ವಿಮಾನ ನಿಲ್ದಾಣಗಳಲ್ಲಿ  ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.

ಬೆಂಗಳೂರು ಏರ್​ಪೋರ್ಟ್​

ಬೆಂಗಳೂರು ಏರ್​ಪೋರ್ಟ್​

  • Share this:
ದೇವನಹಳ್ಳಿ(ಜ.03): ದಟ್ಟ ಮಂಜು ಕವಿದಾಗ  ವಿಮಾನಗಳ  ಹಾರಾಟದಲ್ಲಿ ವ್ರತ್ಯಯವಾಗುತ್ತಿತ್ತು. ಈಗ ದಟ್ಟ ಮಂಜಿನಲ್ಲೂ ವಿಮಾನಗಳ ಹಾರಾಟ  ನಡೆಸುವ  ಸಾಮರ್ಥ್ಯವನ್ನ ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ. ಕ್ಯಾಟ್ lll ಬಿ ಮೇಲ್ದರ್ಜೇಗೇರಿದ  ದಕ್ಷಿಣ ಭಾರತದ ಏಕೈಕ ವಿಮಾನ  ನಿಲ್ದಾಣವಾಗಿ ಬೆಂಗಳೂರಿನ  ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು(ಕೆ.ಐ.ಎ.ಬಿ) ದಕ್ಷಿಣ ರನ್‍ವೇ ಈಗ ಕ್ಯಾಟ್IIIಬಿ  ಮೇಲ್ದರ್ಜೇಗೇರಿದೆ. ಡಿಸೆಂಬರ್ 31ರ  ಬೆಳಗ್ಗೆ 5-30ರಿಂದ  ಕ್ಯಾಟ್ lll ಬಿ  ನಿಯಮಾನುಸಾರ  ವಿಮಾನಗಳ  ಹಾರಾಟವಾಗಿದೆ.

ಈ ಹಿಂದೆ ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ದಟ್ಟವಾದ  ಮಂಜು  ಕವಿದಾಗ ಮತ್ತು ಹವಾಮಾನ  ವೈಪರೀತ್ಯದಿಂದ ಮಂದ ಬೆಳಕು ಇದ್ದಾಗ ರನ್ ವೇಯಲ್ಲಿ ವಿಮಾನಗಳ  ಲ್ಯಾಂಡಿಗ್  ಮತ್ತು  ಟೇಕ್  ಆಫ್  ಮಾಡಲು  ಸಾಧ್ಯವಾಗುತ್ತಿರಲಿಲ್ಲ.  ಹವಾಮಾನ  ವೈಪರೀತ್ಯ  ಇದ್ದಾಗ  ವಿಮಾನಗಳನ್ನ  ಬೇರೆ ವಿಮಾನ  ನಿಲ್ದಾಣಕ್ಕೆ  ಕಳಿಸಲಾಗುತ್ತಿತ್ತು.  ಇದೀಗ ಕೆಂಪೇಗೌಡ  ಅಂತರಾಷ್ಟ್ರೀಯ  ವಿಮಾನ  ನಿಲ್ದಾಣ  ಸಹ ಕ್ಯಾಟ್  lll  ಬಿ ಮೇಲ್ದರ್ಜೇಗೇರಿದೆ.  ಕ್ಯಾಟ್  lll ಬಿ ಸೌಲಭ್ಯ  ಹೊಂದಿರುವ   ದಕ್ಷಿಣ  ಭಾರತದ  ಏಕೈಕ  ವಿಮಾನ ನಿಲ್ದಾಣಗಳಲ್ಲಿ  ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.

ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಭಾರತದ 6 ನೇ ವಿಮಾನ ನಿಲ್ದಾಣವಾಗಿದೆ. ವಿಮಾನಗಳು ಇಳಿಯಲು ಉನ್ನತ ಮಟ್ಟದ ವ್ಯವಸ್ಥೆ(ಐ.ಎಲ್.ಎಸ್.), ವಿಮಾನದ ರನ್‍ವೇ ಮತ್ತು ಸುತ್ತಲಿನ ಪ್ರದೇಶದಲ್ಲಿ ಏರ್‍ಫೀಲ್ಡ್ ಗ್ರೌಂಡ್ ಲೈಟ್(ಎ.ಜಿ.ಎಲ್.) ಬೆಳಕಿನ ವ್ಯವಸ್ಥೆ, ಇದಲ್ಲದೆ ಟ್ರ್ಯಾನ್ಸ್‍ಮಿಸ್ಸೊ ಮೀಟರ್, ಸ್ವಯಂಚಾಲಿತ ಹವಾಮಾನ ನಿರೀಕ್ಷಣಾಲಯ(ಎ.ಡಬ್ಲ್ಯು.ಒ.ಎಸ್.), ಮೇಲ್ಮೈ ಚಲನೆಯ ರ್ಯಾಡಾರ್(ಎಸ್.ಎಂ.ಆರ್.) ಮತ್ತು ಇತರೆ ಮಾರ್ಗಸೂಚಿಯಲ್ಲಿ ಕ್ಯಾಟ್  lll ಬಿ ಮೇಲ್ದರ್ಜೇಗೇರಿಸಲಾಗಿದೆ.

Farmers Protest: 41ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ; ನಾಳೆ ಮತ್ತೊಂದು ಸುತ್ತಿನ ಸಭೆ

ಈ ವ್ಯವಸ್ಥೆಯಲ್ಲಿ  50 ಮೀಟರ್ ರನ್ ವೇ ವಿಶ್ವುವಲ್ಸ್  ರೆಂಜ್   ಇದ್ದರೂ ವಿಮಾನ ಇಳಿಸ ಬಹುದು ಮತ್ತು  125 ಮೀಟರ್ ರನ್ ಲೇ ವಿಶ್ವುವಲ್ಸ್  ರೆಂಜ್  ನಲ್ಲೂ ವಿಮಾನ  ಹಾರಲಿದೆ. ಇದುವರೆಗೆ ವಿಮಾನ ಕೆಳಗಿಳಿಯಲು 550ಮೀಟರ್ ಮತ್ತು ಮೇಲೆ ಹಾರಲು 300 ಮೀಟರ್ ವಿಷುವಲ್ ರೇಂಜ್‍ಗೆ ಪರವಾನಗಿ ಇತ್ತು. ಮಂಜು ಕುರಿತ ವಿಶ್ಲೇಷಣಾ ಅಧ್ಯಯನ, ವಿಮಾನನಿಲ್ದಾಣದ ಪ್ರದೇಶದಲ್ಲಿ ಹವಾಮಾನ ಸ್ಥಿತಿಗಳನ್ನು ಕುರಿತು ಜವಾಹರ್‍ಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ(ಜೆ.ಎನ್.ಸಿ.ಎ.ಎಸ್.ಆರ್.)ದ  ಸಹಭಾಗಿತ್ವದಲ್ಲಿ  ಅಧ್ಯಯನ ನಡೆಸಲು  ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣವು 2019ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ವಿಮಾನ ನಿಲ್ದಾಣ ಪ್ರದೇಶದ ಮೇಲೆ ವಿಕಿರಣಾತ್ಮಕ ಮಂಜು ಕವಿಯುವುದನ್ನು ಮುಂಚಿತವಾಗಿ ತಿಳಿಸುವ ನಾಲ್ಕು ವರ್ಷಗಳ ಅಧ್ಯಯನ ನಡೆಸುತ್ತಿದೆ.

ಅದಾಗಲೇ ಇಡೀ ವಿಶ್ವದ ಗಮನ ಸೆಳೆದಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿ ತಿಂಗಳು 12 ಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರ ಹಾರಾಟದ ಮೂಲಕ ಏಷ್ಯಾದ ಎರಡನೆ ಅತಿದೊಡ್ಡ ವಿಮಾನ‌ ನಿಲ್ದಾಣ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರೊಂದಿಗೆ ಕೆಲವೇ ಕೆಲವು ವರ್ಷಗಳಲ್ಲಿ ಇಡೀ ಜಗತ್ತಿನ ಅತ್ಯುತ್ತಮ ಶ್ರೇಷ್ಠ ವಿಮಾನ ನಿಲ್ದಾಣಗಳಲ್ಲಿ ನಮ್ಮ ಹೆಮ್ಮೆಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಒಂದಾಗಬೇಕೆಂಬ ಬಯಕೆ ಪ್ರಾಧಿಕಾರಕ್ಕೆ ಇದೆ ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.
Published by:Latha CG
First published: