ದೇಶದ ಮೊಟ್ಟಮೊದಲ ಸಾರ್ವಜನಿಕ ಬಾಂಡೆಡ್ ವೇ​​ರ್​​ಹೌಸ್​  ಆರಂಭಿಸಿದ ಕೆಂಪೇಗೌಡ ಏರ್​ಪೋರ್ಟ್​​​​

ಬೆಂಗಳೂರು ವಿಮಾನ ನಿಲ್ದಾಣ ದಕ್ಷಿಣ ಭಾರತದ ಉತ್ಪಾದಕರ ಅತ್ಯಂತ ನೆಚ್ಚಿನ ಆಯ್ಕೆಯ ಸರಕು ರವಾನೆ ಕೇಂದ್ರವಾಗಿರುವುದಲ್ಲದೆ, ಅತ್ಯಂತ ಹೆಚ್ಚಿನ ಚಟುವಟಿಕೆಯ ಕೇಂದ್ರವಾಗಿದೆ.

ಬೆಂಗಳೂರು ವಿಮಾನ ನಿಲ್ದಾಣ

ಬೆಂಗಳೂರು ವಿಮಾನ ನಿಲ್ದಾಣ

  • Share this:
ಬೆಂಗಳೂರು(ಅ.03): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಯಶಸ್ವಿ ಸರಕು-ಸಾಗಣೆ ಕೇಂದ್ರವಾಗಿಸುವ ದೃಷ್ಟಿಯಿಂದ ಅಲ್ಲಿ ಇತ್ತೀಚೆಗೆ ಭಾರತದ ಮೊಟ್ಟಮೊದಲ  ಸಾರ್ವಜನಿಕ ಬಾಂಡೆಡ್ ವೇರ್​ ಹೌಸ್​​ನ್ನು ಆರಂಭಿಸಿದೆ.  ಇದು  ಅಕ್ರಮ‌ ವಹಿವಾಟು ಮತ್ತು ಅಂತಾರಾಷ್ಟ್ರೀಯ ಸರಕುಗಳ ಬಗ್ಗೆ ನಿಗಾ ವಹಿಸಲು ಅನುಕೂಲ ಮಾಡಿಕೊಡುತ್ತದೆ. ಕಾರ್ಗೋ ಸರ್ವೀಸ್ ಸೆಂಟರ್(ಸಿ.ಎಸ್.ಸಿ.) ಕಾರ್ಯಾಚರಣೆ ನಿರ್ವಹಿಸುವ ಈ 10,000 ಚದರ ಅಡಿ ವಿಸ್ತೀರ್ಣದ ದಾಸ್ತಾನು ಸೌಲಭ್ಯ ಬೆಂಗಳೂರು ಕಸ್ಟಮ್ಸ್ ನಗರ ಆಯುಕ್ತರ ಆಡಳಿತ ವ್ಯಾಪ್ತಿಯಡಿ ಬರುತ್ತದೆ. ಭಾರತದ ಮಾಹಿತಿ ತಂತ್ರಜ್ಞಾನ ಕೇಂದ್ರವಾದ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಿಗೆ ಪೂರೈಕೆ ಸರಣಿಯ ವೆಚ್ಚವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಈ ಸೌಲಭ್ಯವು ಹೆಚ್ಚಿನ ಭದ್ರತೆ ಜೊತೆಗೆ, ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಡಲಿದೆ.

ಈ ಸಾರ್ವಜನಿಕ ಬಾಂಡೆಡ್ ವೇರ್​ಹೌಸ್​ ವಸ್ತುಗಳ ಪುನರ್ ರಫ್ತಿಗೆ, ವಿದೇಶಗಳಿಗೆ ರವಾನೆಯಾಗಬೇಕಾದ ವಸ್ತುಗಳನ್ನು ದೀರ್ಘಕಾಲದವರೆಗೆ ದಾಸ್ತಾನು ಮಾಡಲು, ಭಾಗಶಃ ಅವುಗಳನ್ನು ಬಿಡುಗಡೆ ಮಾಡಲು ಮತ್ತು ಲೇಬಲಿಂಗ್, ಪ್ಯಾಕಿಂಗ್ ಮತ್ತು ಪುನರ್ ಪ್ಯಾಕಿಂಗ್, ಭದ್ರತಾ ತಪಾಸಣೆ ಸೇವೆಗಳಂತಹ ಮೌಲ್ಯವರ್ಧಿತ ಸೇವೆಗಳಿಗೆ ಅವಕಾಶ ಮಾಡಿಕೊಡುವುದು ಸೇರಿದಂತೆ ಹಲವು ಕಾರ್ಯಗಳಿಗೆ ನೆರವಾಗಲಿದೆ.``ಉತ್ತಮ ಕಾರ್ಯಕ್ಷಮತೆಯ ಕಾರ್ಯಾಚರಣೆಗಳನ್ನು ನಡೆಸಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮೂಲ ಸೌಕರ್ಯದೊಂದಿಗೆ ಸಜ್ಜಾಗಿರುವ ಸರಕು ರವಾನೆ ಕೇಂದ್ರವಾಗಿ ಬೆಂಗಳೂರು ವಿಮಾನ ನಿಲ್ದಾಣವನ್ನು ರೂಪಿಸುವುದು ಬಿ.ಐ.ಎ.ಎಲ್ ಚಿಂತನೆಯಾಗಿದೆ.

ಪ್ರಕ್ರಿಯೆಗಳನ್ನು ಸರಳಗೊಳಿಸಲು ಮತ್ತು ಬೆಂಗಳೂರು ಕಸ್ಟಮ್ಸ್ ಸೇರಿದಂತೆ ಪ್ರಮುಖ ಪಾಲುದಾರರ ನೆರವಿನ ಜೊತೆಗೆ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಬಿ.ಐ.ಎ.ಎಲ್ ಭಾರತದಲ್ಲಿನ ಮೊಟ್ಟಮೊದಲ ವಿಮಾನ ನಿಲ್ದಾಣದಲ್ಲಿನ ಸಾರ್ವಜನಿಕ ಬಾಂಡೆಡ್ ವೇರ್​ಹೌಸ್​​ನ್ನು ಸ್ಥಾಪಿಸುವ ಕ್ರಮ ಕೈಗೊಂಡಿದೆ ಎಂದು ನ್ಯೂಸ್18 ಜೊತೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ವಿಮಾನ ನಿಲ್ದಾಣದ ಸರಕು ರವಾನೆ ಸಮುದಾಯವನ್ನು ಬೆಂಬಲಿಸುವಲ್ಲಿ ಬಿ.ಐ.ಎ.ಎಲ್.ನ ಬದ್ಧತೆಯನ್ನು ಇದು ಪ್ರದರ್ಶಿಸುತ್ತದೆ. ಅಲ್ಲದೇ ಒಂದು ಕಾರ್ಗೋ ಕೇಂದ್ರವಾಗಿ ಬೆಂಗಳೂರು ವಿಮಾನ ನಿಲ್ದಾಣದ ಬೆಳವಣಿಗೆಗೆ ಹೆಚ್ಚಿನ ಚಾಲನೆ ನೀಡಲಿದೆ ಎಂದು ಬಿ.ಐ.ಎ.ಎಲ್‍ನ ಮುಖ್ಯ ಯೋಜನೆ ಮತ್ತು ಅಭಿವೃದ್ಧಿ ಅಧಿಕಾರಿ ಸತ್ಯಕಿ ರಘುನಾಥ್ ನ್ಯೂಸ್18 ಗೆ ಸ್ಪಷ್ಟ ಪಡಿಸಿದ್ದಾರೆ.

ಡಿಕ್ಕಿಯ ರಭಸಕ್ಕೆ ಹೊತ್ತಿ ಉರಿದ 2 ಬೈಕ್​ಗಳು; ಸ್ಥಳದಲ್ಲೇ ಮೂವರ ದಾರುಣ ಸಾವು

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳು ಮತ್ತು ರಿಟೇಲ್ ಬ್ರಾಂಡ್‍ಗಳ ಹಾಜರಿಯ ಕಾರಣ ಬೆಂಗಳೂರು ಬೃಹತ್ ಪ್ರಮಾಣದ ಆಮದು ವ್ಯವಹಾರವನ್ನು ನಿಭಾಯಿಸುತ್ತದೆ. ವಿಶ್ವದ ಎಲ್ಲೆಡೆಯ ಮಾರುಕಟ್ಟೆಗಳೊಂದಿಗೆ ಸಂಪರ್ಕ ರಚಿಸುವುದು ಮತ್ತು ವ್ಯಾಪಾರವನ್ನು ಸುಧಾರಿಸುವುದರೊಂದಿಗೆ ಈ ನೂತನ ಸೌಲಭ್ಯ ಈ ಪ್ರದೇಶದ ಆರ್ಥಿಕ ಸ್ಥಿತಿಗೆ ಹೆಚ್ಚಿನ ಚಾಲನೆ ನೀಡುವಲ್ಲಿ ಗಮನಾರ್ಹ ಪಾತ್ರ ವಹಿಸಲಿದೆ.

ಬೆಂಗಳೂರು ವಿಮಾನ ನಿಲ್ದಾಣ ದಕ್ಷಿಣ ಭಾರತದ ಉತ್ಪಾದಕರ ಅತ್ಯಂತ ನೆಚ್ಚಿನ ಆಯ್ಕೆಯ ಸರಕು ರವಾನೆ ಕೇಂದ್ರವಾಗಿರುವುದಲ್ಲದೆ, ಅತ್ಯಂತ ಹೆಚ್ಚಿನ ಚಟುವಟಿಕೆಯ ಕೇಂದ್ರವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನೂತನ ಸಾರ್ವಜನಿಕ ಬಾಂಡೆಡ್ ವೇರ್​ಹೌಸ್​ ಕಾರ್ಯಾಚರಣೆ ನಿರ್ವಹಿಸುವವರಾಗಿ ಬಿ.ಐ.ಎ.ಎಲ್. ಜೊತೆಗೆ ಪಾಲುದಾರರಾಗಿರಲು ನಾವು ರೋಮಾಂಚನಗೊಂಡಿದ್ದೇವೆ. ಸಿ.ಎಸ್.ಸಿ. ಭಾರತದಲ್ಲಿ ಸರಕು ಸಾಗಣೆ ಸೇವಾ ಪೂರೈಕೆಯಲ್ಲಿ ಅತ್ಯಂತ ದೊಡ್ಡ ಸಂಸ್ಥೆಯಾಗಿದ್ದು, ಮುಂಬೈ, ದಿಲ್ಲಿ ಮತ್ತು ಅಹ್ಮದಾಬಾದ್‍ಗಳಲ್ಲಿ ಹಾಜರಿ ಹೊಂದಿದೆ.

ವಿಮಾನ ನಿಲ್ದಾಣದಲ್ಲಿ ಕಾರ್ಗೊ ವಿಲೇಜ್‍ನ ಕಾರ್ಯಾಚರಣೆ ನೋಡಿಕೊಳ್ಳುವವರಾಗಿ ಬೆಂಗಳೂರು ವಿಮಾನನಿಲ್ದಾಣದಲ್ಲಿ ನಾವು ಈಗಾಗಲೇ ನಮ್ಮ ಹೆಜ್ಜೆ ಗುರುತು ಹೊಂದಿದ್ದೇವೆ.  ದಕ್ಷಿಣ ಭಾರತದ ಸರಕುಸಾಗಣೆ ಕೇಂದ್ರವಾಗಲು ಬೆಂಗಳೂರು ವಿಮಾನ ನಿಲ್ದಾಣ ಅಪಾರ ಸಾಮರ್ಥ್ಯ ಹೊಂದಿದೆ. ಈ ಪರಿವರ್ತನೆಯ ಭಾಗವಾಗಿರಲು ಸಿ.ಎಸ್.ಸಿ.ಯಲ್ಲಿ ನಾವು ಉತ್ಸಾಹಿತರಾಗಿದ್ದೇವೆ ಎಂದು ಸಿ.ಎಸ್.ಸಿ. ಸಮೂಹದ ಚೇರ್ಮನ್ ತುಷಾರ್ ಜಾನಿ ಹೇಳಿದರು.

ಬೆಂಗಳೂರು ವಿಮಾನ ನಿಲ್ದಾಣ ಏಪ್ರಿಲ್ ಮತ್ತು ಆಗಸ್ಟ್ 2020ರ ನಡುವಿನ 5 ತಿಂಗಳುಗಳಲ್ಲಿ 99,154 ಮೆಟ್ರಿಕ್ ಟನ್‍ಗಳ ಸರಕು ರವಾನೆ ಪ್ರಕ್ರಿಯೆ ಕೈಗೊಂಡಿದೆ. ಇದರೊಂದಿಗೆ ಸರಕು ವಾಯು ಸಂಚಾರ ಚಲನೆಯಲ್ಲಿ ಶೇ.92ರಷ್ಟು ಬೆಳವಣಿಗೆ ದಾಖಲಿಸಿದೆ. ದಕ್ಷಿಣ ಭಾರತದಲ್ಲಿ ಅತ್ಯಂತ ದೊಡ್ಡದಾದ ವಾಯು ಸರಕು ಟರ್ಮಿನಲ್ ಅನ್ನು ಈ ನಿಲ್ದಾಣ ಸಾದರಪಡಿಸುತ್ತಿದ್ದು, 5,70,000 ಮೆಟ್ರಿಕ್ ಟನ್‍ಗಳಷ್ಟು ವಸ್ತುಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ದಕ್ಷಿಣ ಭಾರತದ ಪ್ರಮುಖ ಉತ್ಪಾದನಾ ಸಮೂಹಗಳಿಂದ ಸರಾಸರಿ 9 ಗಂಟೆಗಳ ಪ್ರಯಾಣದ ದೂರದಲ್ಲಿ ಈ ವಿಮಾನ ನಿಲ್ದಾಣ ಇರುತ್ತದೆ. ಈ ಪ್ರದೇಶದ ಕೈಗಾರಿಕೆಗಳಿಗೆ ನೆಚ್ಚಿನ ಆಯ್ಕೆಯ ಸರಕು ಸಾಗಣೆ ಕೇಂದ್ರವಾಗಿ ಬೆಂಗಳೂರು ವಿಮಾನ ನಿಲ್ದಾಣ ಹೊರಹೊಮ್ಮುತ್ತಿದೆ. ದಕ್ಷಿಣ ಭಾರತದಲ್ಲಿ ಅತ್ಯಂತ ಹೆಚ್ಚಿನ ಚಟುವಟಿಕೆಯ ಮತ್ತು ದೇಶದಲ್ಲಿ ಮೂರನೇ ಅತ್ಯಂತ ಹೆಚ್ಚಿನ ಚಟುವಟಿಕೆಯ ಸರಕು ಸಾಗಣೆ ವಿಮಾನ ನಿಲ್ದಾಣ ಇದಾಗಿದೆ.

ಸರಕು ಕಾರ್ಯಾಚರಣೆಗೆ ಮತ್ತಷ್ಟು ಕಾರ್ಯಕ್ಷಮತೆಗಳನ್ನು ತರುವುದಕ್ಕಾಗಿ ಬಿ.ಐ.ಎ.ಎಲ್. ಇತ್ತೀಚೆಗೆ ವಾಯು ಸರಕು ಸಮುದಾಯ ವ್ಯವಸ್ಥೆ(ಎ.ಸಿ.ಎಸ್.)ಯ ಅನುಷ್ಠಾನವನ್ನು ಪ್ರಕಟಿಸಿದ್ದು, ವಿಮಾನದ ಮೂಲಕ ಸರಕು ರವಾನೆ ಪೂರೈಕೆ ಸರಣಿಯನ್ನು ಮತ್ತಷ್ಟು ಸರಳಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಡಿಜಿಟಲ್ ವೇದಿಕೆ ಪೂರೈಕಾ ಸರಣಿಯ ಎಲ್ಲಾ ಪಾಲುದಾರರ ನಡುವೆ ಸೀಮಾತೀತ ಸಹಭಾಗಿತ್ವಕ್ಕೆ ಅವಕಾಶ ಮಾಡಿಕೊಡುವುದಲ್ಲದೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೆಚ್ಚು ಉನ್ನತಮಟ್ಟದ ಮತ್ತು ಉತ್ತಮ ಕಾರ್ಯಕ್ಷಮತೆಯ ಸರಕು ಸಾಗಣೆ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅವಕಾಶ ಮಾಡಿಕೊಡಲಿದೆ.
Published by:Latha CG
First published: