2 ತಿಂಗಳೊಳಗೆ ನೆಲಮಂಗಲ ನಗರಸಭೆ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ

ನೆಲಮಂಗಲ ನಗರಭೆಯ ಸಂಪೂರ್ಣ ಪತ್ರ ವ್ಯವಹಾರ ಸರ್ಕಾರದ ನಡೆ ಪುರಸಭಾ ಸದಸ್ಯರ ಮನವಿ, 108 ಗ್ರಾಮ ಪಂಚಾಯತಿ ಸದಸ್ಯರ ಮನವಿ ಸೇರಿದಂತೆ ಎಲ್ಲವನ್ನೂ ಸಂಪೂರ್ಣವಾಗಿ ಪರಿಶೀಲನೆ ಮಾಡಿದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ದೇವದಾಸ್ 2 ತಿಂಗಳ ಒಳಗಾಗಿ ನಗರಸಭೆ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.

ನೆಲಮಂಗಲ ನಗರಸಭೆ ಕಚೇರಿ

ನೆಲಮಂಗಲ ನಗರಸಭೆ ಕಚೇರಿ

  • Share this:
ನೆಲಮಂಗಲ (ಜ. 10): ಎರಡು ತಿಂಗಳಲ್ಲಿ ನೆಲಮಂಗಲ ನಗರಸಭೆ ಚುನಾವಣೆ ನಡೆಸುವಂತೆ ಹೈ ಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ದೇವದಾಸ್ ಅದೇಶ ನೀಡಿದ್ದಾರೆ. ನಗರಸಭೆ ಚುನಾವಣೆ ಕುರಿತಂತೆ ನೆಲಮಂಗಲ ನಗರಸಭೆಗೆ ನೂತನವಾಗಿ ಸೇರ್ಪಡೆಗೊಂಡಿರುವ ಅರಿಶಿನಕುಂಟೆ, ವಾಜರಹಳ್ಳಿ, ವಿಶ್ವೇಶ್ವರಪುರ, ಬಸವನಹಳ್ಳಿ ಗ್ರಾಮ ಪಂಚಾಯ್ತಿಗಳು 108 ಜನ ಮಾಜಿ ಸದಸ್ಯರ ಪರವಾಗಿ ಕಲ್ಪನಾ ಮಂಜುನಾಥ್ ಹೈ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ದೇವದಾಸ್ ಅವರು ನೆಲಮಂಗಲ ನಗರಸಭೆ ಚುನಾವಣೆ ನಡೆಸುವಂತೆ ಆದೇಶ ನೀಡಿದ್ದಾರೆ.

ಈ ಹಿಂದೆ ನೆಲಮಂಗಲ ಪುರಸಭೆಗೆ 26 ಮೇ 2019ರಲ್ಲಿ 23 ವಾರ್ಡ್‌ಗಳಿಗೆ ಚುನಾವಣೆ ನಡೆಸಲಾಗಿದ್ದು, 2019ರ ಜೂನ್ 1ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಜೂನ್ 3 ರಂದು ರಾಜ್ಯಪತ್ರದಲ್ಲಿ ಪುರಸಭಾ ಸದಸ್ಯರನ್ನು ಸರ್ಕಾರ ಘೋಷಣೆ ಮಾಡುವುದರ ಮೂಲಕ 23 ವಾರ್ಡ್ ಸದಸ್ಯರನ್ನ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು.

ನಗರಸಭೆ ಘೋಷಣೆ:

ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರದ ಮನವಿಯನ್ನ ರಾಜ್ಯಪಾಲರು ಪುರಸ್ಕರಿಸಿ ದಿನಾಂಕ 24-6-2019 ರಂದು ಅಂಕಿತ ಹಾಕಿ ಕಲಂ 3/1 ರ ಪ್ರಕಾರ ಆಕ್ಷೇಪಣಾ ಅರ್ಜಿಗೆ ದಿನಾಂಕ 27-7-2019 ರವರೆಗೆ 30 ದಿನಗಳ ಕಾಲ ಗಡುವು ನೀಡುತ್ತದೆ. ಈ ನಡುವೆ ಪುರಸಭೆ ಸದಸ್ಯರು ನಾವು ಪುರಸಭೆಗೆ ಚುನಾಯಿತರಾಗಿದ್ದೇವೆ ನಮ್ಮನ್ನು ನಗರಸಭೆಯ ಸದ್ಸಯರನ್ನಾಗಿ ಪರಿಗಣಿಸಿ ಎಂದು ಆಕ್ಷೇಪಣಾ ಅರ್ಜಿ ಸಲ್ಲಿಸುತ್ತಾರೆ. ಆದರೆ ಪುರಸಭಾ ಸದಸ್ಯರನ್ನ ನಗರಸಭಾ ಸದಸ್ಯರನ್ನಾಗಿ ಮುಂದುವರೆಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಸೆಕ್ಷನ್ 351 ರಡಿ ಅಕ್ಷೇಪಣೆ ಅರ್ಜಿಯನ್ನ ವಜಾಗೊಳಿಸಲಾಗುತ್ತದೆ. ದಿನಾಂಕ 26-12-2019 ರಲ್ಲಿ ನೆಲಮಂಗಲ ಪುರಸಭೆ ಸೇರಿದಂತೆ ವಾಜರಹಳ್ಳಿ ಹಾಗೂ ಅರಿಶಿನಕುಂಟೆಯ ಸಂಪೂರ್ಣ ಗ್ರಾಮ ಪಂಚಾಯ್ತಿ, ಬಸವನಹಳ್ಳಿ ಹಾಗೂ ವಿಶ್ವೇಶ್ವರಪುರದ ಭಾಗಶಃ ಗ್ರಾಮ ಪಂಚಾಯ್ತಿಗಳನ್ನು ಒಳಗೊಂಡಂತೆ ನೆಮಂಗಲ ಪುರಸಭೆಯನ್ನು ನಗರಸಭೆಯನ್ನಾಗಿ ಸರ್ಕಾರ ಮೇಲ್ದರ್ಜೆಗೆ ಏರಿಸಲಾಗಿತ್ತು. ನಂತರ ಪುರಸಭೆಯ ಆಡಳಿತ ವೈಖರಿ ನಗರಸಭೆಯಾಗಿ ಮೇಲ್ದರ್ಜೆಗೆ ಏರುತ್ತದೆ. ಅಲ್ಲದೆ 2011 ಜನಗಣತಿ ಪ್ರಕಾರ 70,373 ಜನಸಂಖ್ಯೆ ಆಧಾರದ ಮೇಲೆ 31 ವಾರ್ಡ್‌ಗಳ ವಿಂಗಡಣೆ ಸಹ ಮಾಡಲಾಗುತ್ತದೆ.

ಇದನ್ನೂ ಓದಿ: Siddaramaiah: ಬಿಜೆಪಿಯ ದರಿದ್ರ ಸರ್ಕಾರದ ಜನ ವಿರೋಧಿ ಕಾಯ್ದೆಗಳ ವಿರುದ್ಧ ಬೀದಿಗಿಳಿದು ಹೋರಾಟ; ಸಿದ್ದರಾಮಯ್ಯ ಕಿಡಿ

ಪುರಸಭೆ ಮೀಸಲಾತಿ ಪ್ರಕಟ:

ನೆಲಮಂಗಲ ನಗರಸಭೆಯ ಆಡಳಿತ ವೈಖರಿ ಬದಲಾದರೂ ಸಹ ಸರ್ಕಾರದ ಎಡವಟ್ಟಿನಿಂದ ಪುರಸಭೆ ಸದಸ್ಯರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ  ಮೀಸಲಾಗಿ ಪ್ರಕಟ ಮಾಡುವುದರ ಮೂಲಕ ಅಧಿಕಾರಿಗಳು ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಸಕಲ ಸಿದ್ದತೆಗಳನ್ನ ಮಾಡಿಕೊಳ್ಳುತ್ತಾರೆ. ಇದರ ವಿರುದ್ದ 4 ಗ್ರಾಮ ಪಂಚಾಯ್ತಿಯ 108 ಸದಸ್ಯರು ಡಬ್ಯು ಪಿ 6398/2020 ಪ್ರಕಾರ ಹೈ ಕೋರ್ಟ್ಗೆ ಮನವಿ ಸಲ್ಲಿಸುತಾರೆ, ಮನವಿ ಪ್ರಕಾರ ಬೆಂಗಳೂರು ಗ್ರಾಮಾಂತ ಜಿಲ್ಲಾಧಿಕಾರಿಗಳಿಗೆ ಕೋರ್ಟ್ ನೆಲಮಂಗಲ ಪುರಸಭೆನ ಅಥವಾ ನಗರ ಸಭೆನ ಎಂದು ಪ್ರಮಾಣಿಕರಿಸುವಂತೆ ಸೂಚನೆ ನೀಡಿರುವುದರ ಪ್ರಕಾರ ಜಿಲ್ಲಾಧಿಕಾರಿಗಳು ನೆಲಮಂಗಲ ನಗರಸಭೆ ಎಂದು ಹೈಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸುತ್ತಾರೆ.

ನಗರಸಭೆಗೆ ಮೀಸಲಾತಿ ಪ್ರಕಟ:

ಈ ನಡುವೆ ಸರ್ಕಾರ ನಗರಸಭೆಗೆ ಮೀಸಲಾತಿ ಪ್ರಕಟಿಸುವಿದರ ಮೂಲಕ ಮತ್ತೊಂದು ಎಡವಟ್ಟು ಮಾಡುತ್ತದೆ, ಮೀಸಲಾತಿ ಪ್ರಕಟಣೆಯ ಬೆನ್ನಲ್ಲೆ ಪುರಸಭೆಯಲ್ಲಿ ಗೆದ್ದಿದ್ದೋ ನಗರಸಭೆಯ ಸದಸ್ಯರನ್ನಾಗಿ ಮುಂದುವರೆಸಲು ಪುರಸಭಾ ಸದಸ್ಯರು ಸರ್ಕಾರಕ್ಕೆ ಮನವಿ ಸಲ್ಲಿಸುರುತ್ತಾರೆ, ಸದಸ್ಯರ ಮನವಿ ಮೇರೆ ದಿನಾಂಕ 3-8-2020 ರಂದು ನಿಮ್ಮ ಮನವಿಯನ್ನ ಪರಿನಣಿಸಲಾಗಿದೆ ಎಂದು ಪತ್ರ ರಾಜ್ಯ ಮುಖ್ಯ ಕಾರ್ಯದರ್ಶಿ ಪತ್ರ ಬರಯುತ್ತಾರೆ, ಈ ಪತ್ರ ಕಾನೂನು ಬಾಹಿರವೆಂದು ಗ್ರಾಮ ಪಂಚಾಯ್ತಿ ಸದಸ್ಯರು ಮತ್ತೊಮ್ಮೆ ಡಬ್ಲ್ಯು.ಪಿ 11725/2020 ರಲ್ಲಿ ಹೈಕೋರ್ಟ್‌ಗೆ ದಿನಾಂಕ  ಮೇಲ್ಮನವಿ ಅರ್ಜಿ ಸಲ್ಲಿಸುತ್ತಾರೆ. ಈ ನಡುವೆ ದಿನಾಂಕ 11-5-2020 ರಂದು ನೆಲಮಂಗಲ ನಗರಸಭೆಯಲ್ಲಿ ಯಾವುದೇ ಚುನಾಯಿತ ಕೌನಿಸ್ಸ ಇಲ್ಲದಿರುವುದರಿಂದ ಚುನಾವಣೆ ಮಾಡಿ ವಾರ್ಡ್ ವಿಂಗಡಣೆ ಮಾಡಿ ಎಂದು ಜಿಲ್ಲಾಧಿಕಾರಿಗೆ ಸರ್ಕಾರದ ಪತ್ರ ತಲುಪುತ್ತದೆ, ಇದರ ಪ್ರಕಾರ 6-7-2020 ರಂದು ಜಿಲ್ಲಾಧಿಕಾರಿ ಆಡಳಿತಾಧೀಕಾರಿಯಾಗಿ ನೇಮಕವಾಗುತ್ತಾರೆ.

ನೆಲಮಂಗಲ ನಗರಭೆಯ ಸಂಪೂರ್ಣ ಪತ್ರ ವ್ಯವಹಾರ ಸರ್ಕಾರದ ನಡೆ ಪುರಸಭಾ ಸದಸ್ಯರ ಮನವಿ, 108 ಗ್ರಾಮ ಪಂಚಾಯತಿ ಸದಸ್ಯರ ಮನವಿ ಸೇರಿದಂತೆ ಎಲ್ಲವನ್ನೂ ಸಂಪೂರ್ಣವಾಗಿ ಪರಿಶೀಲನೆ ಮಾಡಿದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ದೇವದಾಸ್ ಅವ‌ರ ಏಕ ಸದಸ್ಯ ಪೀಠ ಕೋರ್ಟ್ ಈ ಆದೇಶ ತಲುಪಿ ಎರಡು ತಿಂಗಳ ಒಳಗಾಗಿ ನಗರಸಭೆ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
Published by:Sushma Chakre
First published: