ಅಂತಾರಾಷ್ಟ್ರೀಯ ಕಳ್ಳರಿಗೆ ನೆಲೆಯಾಯ್ತೆ ಬೆಂಗಳೂರು?; ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೊರಗೆಡವಿದ ಆಘಾತಕಾರಿ ಮಾಹಿತಿ

ಯುತಿ ಸ್ಟೆಫಾನಿಯಾ ಮನೆಯ ಕಾಲಿಂಗ್ ಬೆಲ್ ಒತ್ತಿ ಬಾಗಿಲು ತೆರೆದು ವ್ಯಕ್ತಿ ಹೊರಬರುತ್ತಿದ್ದಂತೆ ಅವರ ಮುಖಕ್ಕೆ ಸ್ಪ್ರೇಮಾಡಿ ಮೂರ್ಛೆ ತಪ್ಪಿಸುತ್ತಿದ್ದಳು. ನಂತರ ತನ್ನ ಸಂಗಡಿಗರನ್ನು ಸ್ಥಳಕ್ಕೆ ಕರೆಸಿಕೊಂಡು ಎಲ್ಲರೂ ಒಟ್ಟಾಗಿ ಮನೆಯನ್ನು ದೋಚುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಬಂಧಿತ ವಿದೇಶಿ ಕಳ್ಳರು.

ಬಂಧಿತ ವಿದೇಶಿ ಕಳ್ಳರು.

 • Share this:
  ಬೆಂಗಳೂರು (ಜುಲೈ 30); ಅತ್ಯಾಧುನಿಕ ಸಲಕರಣೆಗಳನ್ನು ಬಳಸಿಕೊಂಡು ನಗರದಲ್ಲಿ ಕಳ್ಳತನ ಮಾಡುತ್ತಿದ್ದ ವಿದೇಶಿ ಗ್ಯಾಂಗ್ ಒಂದನ್ನು ಇಂದು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆದರೆ, ಇದರ ಬೆನ್ನಿಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನೀಡಿರುವ ಕೆಲವು ಮಾಹಿತಿಗಳು ಬೆಂಗಳೂರು ಅಂತಾರಾಷ್ಟ್ರೀಯ ಕಳ್ಳರ ನೆಲೆಯಾಯ್ತೆ? ಎಂಬ ಅನುಮಾನ ಮೂಡುವಂತೆ ಮಾಡಿದೆ.

  ಕೊಲಂಬಿಯಾ ಮೂಲದ ವಿಲಿಯನ್ ಪಡಿಲ್ಲಾ ,ಸ್ಟೆಫಾನಿಯಾ, ಕ್ರಿಶ್ಚಿಯನ್ ಇನಿಸ್ ಬಂಧಿತ ಆರೋಪಿಗಳು. ಈ ಗುಂಪು ನಗರದಲ್ಲಿ ಸೈಕಲ್‌ನಲ್ಲಿ ಓಡಾಡುತ್ತಾ ಬೀಗ ಹಾಕಿದ ಮನೆಗಳನ್ನು ಪತ್ತೆ ಹಚ್ಚುತ್ತಿತ್ತು. ನಂತರ ವಾಕಿಟಾಕಿ ಮೂಲಕ ತಮ್ಮ ಸಂಗಡಿಗರನ್ನು ಸ್ಥಳಕ್ಕೆ ಕರೆಸಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಮನೆ ಬಾಗಿಲು ಒಡೆದು ಕಳ್ಳತನ ಮಾಡುತ್ತಿದ್ದರು.

  ಇನ್ನೂ ಕೆಲವು ವೇಳೆ ಯುತಿ ಸ್ಟೆಫಾನಿಯಾ ಮನೆಯ ಕಾಲಿಂಗ್ ಬೆಲ್ ಒತ್ತಿ ಬಾಗಿಲು ತೆರೆದು ವ್ಯಕ್ತಿ ಹೊರಬರುತ್ತಿದ್ದಂತೆ ಅವರ ಮುಖಕ್ಕೆ ಸ್ಪ್ರೇಮಾಡಿ ಮೂರ್ಛೆ ತಪ್ಪಿಸುತ್ತಿದ್ದಳು. ನಂತರ ತನ್ನ ಸಂಗಡಿಗರನ್ನು ಸ್ಥಳಕ್ಕೆ ಕರೆಸಿಕೊಂಡು ಎಲ್ಲರೂ ಒಟ್ಟಾಗಿ ಮನೆಯನ್ನು ದೋಚುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

  ಮನೆಯಲ್ಲಿ ಕಳ್ಳತನ ಮಾಡುವಾಗ ಮೊಬೈಲ್-ಲ್ಯಾಪ್ಟಾಪ್ ಏನೇ ಸಿಕ್ಕರೂ ಅದನ್ನು ಮುಟ್ಟದ ಇವರು, ಕೇವಲ ಹಣ ಮತ್ತು ಚಿನ್ನಾಭರಣಗಳನ್ನು ಮಾತ್ರ ಕದಿಯುತ್ತಿದ್ದರು. ಅಲ್ಲದೆ, 15 ಅಡಿ ಗೋಡೆಯನ್ನೂ ಸಲೀಸಾಗಿ ಜಿಗಿಯಬಲ್ಲ ತರಬೇತಿಯನ್ನು ಇವರು ಪಡೆದಿದ್ದಾರೆ. ಈ ಹಿಂದೆ ಶಿವರಾಜ್ ಕುಮಾರ್ ಪಕ್ಕದ ಮನೆಯಲ್ಲಿ ಕಳ್ಳತನ ಮಾಡುತ್ತಿರುವಾಗ ಆರೋಪಿಗಳು ಪಿಪಿಇ ಕಿಟ್ ಧರಿಸಿದ್ದಾರೆ. ಪೊಲೀಸರ ಬೀಟ್ ವ್ಯವಸ್ಥೆ ವೇಳೆ ಕಳ್ಳತನದ ಮಾಹಿತಿ ಪತ್ತೆಯಾಗಿದೆ.

  ಇದನ್ನೂ ಓದಿ : ಸರ್ಕಾರ ಸುಭದ್ರವಾಗಿದೆ, ಮುಂದಿನ ಮೂರು ವರ್ಷವೂ ಯಡಿಯೂರಪ್ಪನವರೇ ಸಿಎಂ; ನಳಿನ್‌ ಕುಮಾರ್‌ ಕಟೀಳ್

  ಕೊನೆಗೆ ಆರೋಪಿಗಳು ಆನ್ಲೈನ್ ಫುಡ್ ಡೆಲಿವರಿ ಮಾಡುವಾಗ ಪೊಲೀಸರ ಬಲೆಗೆ ಸಿಲುಕಿದ್ದಾರೆ. ಬಂಧಿತರಿಂದ ಬರೋಬ್ಬರಿ 7 ಕೆ.ಜಿ. ಚಿನ್ನವನ್ನು ಹಾಗೂ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಸಂಬಂಧ ತನಿಖೆ ಮುಂದುವರೆಯುತ್ತಿದ್ದು, ತನಿಖೆಗಾಗಿ ಪೊಲೀಸರು ಸ್ಪ್ಯಾನಿಷ್‌ ಭಾಷೆಯನ್ನು ಕಲಿಯುತ್ತಿದ್ದಾರೆ ಎನ್ನಲಾಗುತ್ತಿದೆ.

  ಅಲ್ಲದೆ, ಬೆಂಗಳೂರಿನಲ್ಲಿ ಎಷ್ಟು ವಿದೇಶಿ ತಂಡ ಹೀಗೆ ಕಳ್ಳತನಕ್ಕೆ ಮುಂದಾಗಿದೆ ಎಂಬ ಕುರಿತು ತನಿಖೆಗಳು ನಡೆಯುತ್ತಿವೆ. ಈ ನಡುವೆ ಕೆಲ ವಿದೇಶಿಗರು ಐಶಾರಾಮಿ ಬದುಕಿಗಾಗಿ ಬೆಂಗಳೂರಿನಲ್ಲಿ ಕಳ್ಳತನಕ್ಕೆ ಕೈಹಾಕಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿರುವುದು ಜನ ಸಾಮಾನ್ಯರಲ್ಲಿ ಈಗಾಗಲೇ ಭೀತಿ ಹೆಚ್ಚುವಂತೆ ಮಾಡಿರುವುದಂತು ಸುಳ್ಳಲ್ಲ.
  Published by:MAshok Kumar
  First published: