ಬೆಂಗಳೂರು(ಸೆ.05): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ಮಿನಲ್(ಟಿ2)ನಲ್ಲಿ ಕಲಾ ಯೋಜನೆಗಾಗಿ ವರ್ಣಚಿತ್ರ ಕಲಾವಿದರು ಮತ್ತು ಕಲಾ ಸಮೂಹಗಳು ಪ್ರಸ್ತಾವನೆಯನ್ನು ಸಲ್ಲಿಸಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿ.ಐ.ಎ.ಎಲ್.)ದಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಕರ್ನಾಟಕದ ಸಮೃದ್ಧ ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವುದಲ್ಲದೆ, ಭರತನ ನಾಟ್ಯಶಾಸ್ತ್ರದಲ್ಲಿ ಎತ್ತಿ ತೋರಲಾಗಿರುವ 9 ಭಾವನೆಗಳಾದ ನವರಸಗಳನ್ನು ಈ ಯೋಜನೆ ಪ್ರಮುಖವಾಗಿ ಪ್ರದರ್ಶಿಸಲಿದೆ. ಟರ್ಮಿನಲ್2ನಲ್ಲಿನ ನಿರ್ದಿಷ್ಟ ಸ್ಥಳಗಳಿಗಾಗಿ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗುತ್ತಿದ್ದು, ಈ ಕಲಾವಸ್ತುಗಳು ಸ್ವಂತದ್ದಾಗಿದ್ದು, ಯಾವುದೇ ಈ ಹಿಂದಿನ ಕಲಾವಸ್ತುವಿನ ನಕಲು ಆಗಿರಬಾರದು. ಪ್ರಸ್ತಾವನೆಗಳನ್ನು ಸ್ವತಂತ್ರ ಸಲಹಾ ಸಮಿತಿ ಮತ್ತು ಬಿ.ಐ.ಎ.ಎಲ್.ನ ಪಾಲುದಾರರು ಮೌಲ್ಯೀಕರಿಸಲಿದ್ದಾರೆ.
Kallathigiri Falls : ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ ಚಿಕ್ಕಮಗಳೂರಿನ ಕಲ್ಲತ್ತಿಗಿರಿ ಜಲಪಾತ
ಹೆಚ್ಚಿನ ಮಾಹಿತಿಗೆ :https://www.bengaluruairport.com/corporate/media/news-press-releases/bial-invites-artists-to-submit-proposals-for-t2-art-programme.html ಈ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.
ನೂತನ ಭಾರತಕ್ಕೆ ಪ್ರವೇಶ ದ್ವಾರವಾಗಿರುವ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮ್ಮ ಪ್ರಯಾಣಿಕರಿಗೆ ನಮ್ಮ ರಾಜ್ಯ ಮತ್ತು ದೇಶದ ನೈಜ ಅನುಭವವನ್ನು ನೀಡುವುದು ನಮ್ಮ ಗುರಿಯಾಗಿದೆ. ಸಾಮಾನ್ಯ ರೀತಿಯಲ್ಲಿ ವಿಮಾನ ಹತ್ತುವ ಪ್ರಕ್ರಿಯೆಯಲ್ಲಿ ಕೊಂಚ ಅಚ್ಚರಿಯನ್ನು ಪೂರೈಸುವುದಲ್ಲದೆ, ನಮ್ಮ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಕರು ಸಾಗುವಾಗ ಅವರಲ್ಲಿ ಆನಂದವನ್ನು ಸೃಷ್ಟಿಸುವ ಅಚ್ಚರಿಯ ಸಾಮರ್ಥ್ಯವನ್ನು ಕಲೆ ಹೊಂದಿರುತ್ತದೆ. ವಿಮಾನ ನಿಲ್ದಾಣದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಕಲಾವಿದರಿಗೆ ಇದು ಅದ್ಭುತವಾದ ಅವಕಾಶವಾಗಿದೆ. ಕಲಾ ವಸ್ತು ಮತ್ತು ಕಲಾವಿದರಿಬ್ಬರೂ ಹೆಚ್ಚಿನ ಸಂಖ್ಯೆಯ ಜನರ ಕಣ್ಣಿಗೆ ಕಾಣುವಂತೆ ಮಾಡುವ ಅದ್ಭುತ ಸಾಧ್ಯತೆಯನ್ನು ಇದು ನೀಡುತ್ತದೆ ಎಂದು ಬಿ.ಐ.ಎ.ಎಲ್.ನ ವಕ್ತಾರರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ