ಹನಿಟ್ರ್ಯಾಪ್​ ಜಾಲದೊಳಗೆ ಬಿಜೆಪಿ ಎಂಎಲ್​ಎ; ಸಿಸಿಬಿ ಪೊಲೀಸರಿಗೆ ಸಿಕ್ತು ಕರಾವಳಿ ಶಾಸಕನ ಅಶ್ಲೀಲ ವಿಡಿಯೋ

Karnataka Honey Trap Scam: ಪೊಲೀಸರು ದಾಳಿ ನಡೆಸುತ್ತಿದ್ದಂತೆ ಬಿಜೆಪಿ ಶಾಸಕರೊಬ್ಬರು ಆರೋಪಿ ಪುಷ್ಪಾ ಜೊತೆಗಿರುವ ಅಶ್ಲೀಲ ವಿಡಿಯೋ ಇರುವ ಪೆನ್​ ಡ್ರೈವ್​ ಅನ್ನು ರಘುವಿನ ತಾಯಿ ತಮ್ಮ ಮರ್ಮಾಂಗದ ಬಳಿ ಬಚ್ಚಿಟ್ಟುಕೊಂಡಿದ್ದರು. ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

news18-kannada
Updated:November 29, 2019, 10:34 AM IST
ಹನಿಟ್ರ್ಯಾಪ್​ ಜಾಲದೊಳಗೆ ಬಿಜೆಪಿ ಎಂಎಲ್​ಎ; ಸಿಸಿಬಿ ಪೊಲೀಸರಿಗೆ ಸಿಕ್ತು ಕರಾವಳಿ ಶಾಸಕನ ಅಶ್ಲೀಲ ವಿಡಿಯೋ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ನ. 29): ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ರಾಜಕಾರಣಿಗಳ ಹನಿಟ್ರ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ತಿರುವು ಸಿಗುತ್ತದೆ. ಇಬ್ಬರು ಅನರ್ಹ ಶಾಸಕರು ಸೇರಿ ಒಟ್ಟು 10 ರಾಜಕಾರಣಿಗಳನ್ನು ಪುಷ್ಪಾ ಮತ್ತು ರಾಘವೇಂದ್ರ ಅಲಿಯಾನ್ ರಘು ತಮ್ಮ ಜಾಲದೊಳಗೆ ಬೀಳಿಸಿಕೊಂಡಿದ್ದರು ಎಂಬ ಸಂಗತಿಯನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದರ ಬೆನ್ನಲ್ಲೇ ಇನ್ನೊಂದು ಮಾಹಿತಿ ಲಭ್ಯವಾಗಿದ್ದು, ಆಡಳಿತ ಪಕ್ಷವಾದ ಬಿಜೆಪಿಯ ಶಾಸಕರೊಬ್ಬರು ಕೂಡ ಹನಿಟ್ರ್ಯಾಪ್​ ಜಾಲದೊಳಗೆ ಸಿಲುಕಿದ್ದಾರೆ.

ಕರಾವಳಿ ಭಾಗದ ಬಿಜೆಪಿ ಶಾಸಕರೊಬ್ಬರ ವಿಡಿಯೋ ಇರುವ ಪೆನ್​ಡ್ರೈವ್ ಸಿಸಿಬಿ ಪೊಲೀಸರ ಕೈಸೇರಿದೆ. ಆರೋಪಿ ರಘು ಮನೆಯಲ್ಲಿ ಪೆನ್​ಡ್ರೈವ್, ಸಿಡಿಗಳಿಗಾಗಿ ತಪಾಸಣೆ ನಡೆಸಿದ್ದ ಸಿಸಿಬಿ ಪೊಲೀಸರಿಗೆ ಎಲ್ಲೂ ಸಾಕ್ಷಿಗಳು ಸಿಕ್ಕಿರಲಿಲ್ಲ. ಪೊಲೀಸರು ಮನೆಗೆ ಬರುತ್ತಿದ್ದಂತೆ ಬಿಜೆಪಿ ಶಾಸಕರೊಬ್ಬರು ಆರೋಪಿ ಪುಷ್ಪಾ ಜೊತೆಗೆ ಬೆತ್ತಲಾಗಿರುವ ವಿಡಿಯೋ ಇರುವ ಪೆನ್​ ಡ್ರೈವ್​ ಅನ್ನು ರಘುವಿನ ತಾಯಿ ತಮ್ಮ ಮರ್ಮಾಂಗದ ಬಳಿ ಬಚ್ಚಿಟ್ಟುಕೊಂಡಿದ್ದರು. ಪೊಲೀಸ್ ಟೀಂ ಜೊತೆಗೆ ಹೋಗಿದ್ದ ಮಹಿಳಾ ಸಿಬ್ಬಂದಿ ರಾಘವೇಂದ್ರದ ತಾಯಿಯನ್ನು ಪರಿಶೀಲನೆ ಮಾಡಿದಾಗ ಆ ಮೆಮೊರಿ ಕಾರ್ಡ್​ ಸಿಕ್ಕಿತ್ತು. ಹನಿಟ್ರ್ಯಾಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳ ಬೆನ್ನತ್ತಿರುವ ಸಿಸಿಬಿ ಪೊಲೀಸದರಿಗೆ ದಿನದಿಂದ ದಿನಕ್ಕೆ ಹೊಸ ಸಾಕ್ಷಿಗಳು ಸಿಗಲಾರಂಭಿಸಿವೆ.

ಸೀರಿಯಲ್ ನಟಿಯರ ಮೂಲಕ 10 ರಾಜಕಾರಣಿಗಳ ಹನಿಟ್ರ್ಯಾಪ್; ಈ ಜಾಲಕ್ಕೆ ಸಿಲುಕಿದ್ದಾರೆ ಇಬ್ಬರು ಅನರ್ಹರು!

ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ವಿಡಿಯೋ ಬಿಡುಗಡೆ ಮಾಡಬಹುದು ಎಂಬ ಆತಂಕ ಕರ್ನಾಟಕದ ರಾಜಕಾರಣಿಗಳಿಗೆ ಎದುರಾಗಿತ್ತು. ಧಾರಾವಾಹಿಗಳಲ್ಲಿ ಮೇಕಪ್ ಮಾಡುತ್ತಿದ್ದ ಪುಷ್ಪಾ ಎಂಬ ಯುವತಿಯನ್ನು ಮುಂದಿಟ್ಟುಕೊಂಡು ಆರೋಪಿ ರಘು ಕಿರುತೆರೆ ನಟಿಯರನ್ನು ಹನಿಟ್ರ್ಯಾಪ್​ ಮಾಡಲು ಬಳಸಿಕೊಳ್ಳುತ್ತಿದ್ದ. ಕಾಂಗ್ರೆಸ್ ನ ಇಬ್ಬರು ಶಾಸಕರು, ಇಬ್ಬರು ಅನರ್ಹ ಶಾಸಕರು, ಬಿಜೆಪಿ ಶಾಸಕರೂ ಹನಿಟ್ರ್ಯಾಪಿಂಗ್ ಜಾಲದೊಳಗೆ ಸಿಲುಕಿರುವುವುದು ಪೊಲೀಸ್ ವಿಚಾರಣೆ ವೇಳೆ ಪತ್ತೆಯಾಗಿದೆ.

ಹೈದರಾಬಾದ್ ಕರ್ನಾಟಕದ ಇಬ್ಬರು ಶಾಸಕರು, ಚಿತ್ರದುರ್ಗ ನಾಡು ಜಿಲ್ಲೆಯ ಬಿಜೆಪಿ ಶಾಸಕ, ಕಾಂಗ್ರೆಸ್ ಮೇಲ್ಮನೆಯ ಓರ್ವ ಸದಸ್ಯ ಸೇರಿ ಅನೇಕ ಮಂದಿಯ ವಿಡಿಯೋಗಳು ಪತ್ತೆಯಾಗಿವೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದ್ದು, ಇದು ರಾಜ್ಯದ ಜನರನ್ನು ಅಚ್ಚರಿಗೊಳಿಸಿರುವುದು ಮಾತ್ರವಲ್ಲದೆ ರಾಜಕಾರಣಿಗಳನ್ನೂ ತಲ್ಲಣಗೊಳಿಸಿದೆ.

ಕೆ.ಆರ್​. ಪೇಟೆಯಲ್ಲಿ ಯಡವಟ್ಟು; ಜೆಡಿಎಸ್​ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಯಾಚಿಸಿದ ಎಚ್​.ಡಿ. ರೇವಣ್ಣ!

ಹನಿಟ್ರ್ಯಾಪಿಂಗ್​ನ ವಿಡಿಯೋಗಳನ್ನು ಆರೋಪಿಗಳು ಎಲ್ಲಿ ಇಟ್ಟಿದ್ದಾರೆ ಎನ್ನುವ ಬಗ್ಗೆ ಸಿಸಿಬಿಯಿಂದ ತನಿಖೆ ಚುರುಕುಗೊಂಡಿದೆ. ಸಿಸಿಬಿ ಬಳಿಯಿರುವ ಪೆನ್ ಡ್ರೈವ್​ನಲ್ಲಿ ವಿಡಿಯೋಗಳು ಲಭ್ಯವಾಗಿವೆ. ಆದರೆ, ಆ ವಿಡಿಯೋಗಳ ನಕಲಿ ಪ್ರತಿಗಳನ್ನು ಎಲ್ಲಿ ಇರಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾವಾಗ ಬೇಕಿದ್ದರೂ ಆರೋಪಿಗಳು ಆ ವಿಡಿಯೋಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇರುವುದರಿಂದ ಸಿಸಿಬಿ ಪೊಲೀಸರ ಮೇಲೆ ರಾಜಕಾರಣಿಗಳ ಒತ್ತಡ ಹೆಚ್ಚಾಗುತ್ತಿದೆ.ಆರೋಪಿಗಳು ಇಲ್ಲಿಯವರೆಗೆ 10ಕ್ಕೂ ಹೆಚ್ಚು ಮಂದಿಯನ್ನು ಹನಿಟ್ರ್ಯಾಪ್ ಮಾಡಿರುವ ಸಂಗತಿ ಪತ್ತೆಯಾಗಿದೆ. ಆದರೆ, ಈ ಬಗ್ಗೆ ದೂರು ನೀಡಲು ಯಾವೊಬ್ಬ ಶಾಸಕರೂ ಮುಂದೆ ಬರುತ್ತಿಲ್ಲ. ಟ್ರ್ಯಾಪ್ ಗೆ ಒಳಗಾದ ಉಳಿದ ಶಾಸಕರು ಸಹಿತ ದೂರು ನೀಡಿದರೆ ತನಿಖೆಗೆ ಅನುಕೂಲವಾಗುತ್ತದೆ ಎಂದು ಸಿಸಿಬಿ ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ಕೈಗೊಳ್ಳಲಾಗುತ್ತದೆ. ಆದರೆ, ತಮ್ಮ ವಿಷಯ ಬಹಿರಂಗವಾಗುತ್ತದೆ ಎಂಬ ಭಯದಿಂದ ಹನಿಟ್ರ್ಯಾಪಿಂಗ್​ಗೆ ಒಳಗಾಗಿರುವ ಶಾಸಕರು ದೂರು ನೀಡಲು ಒಪ್ಪುತ್ತಿಲ್ಲ.

ಸಾಕ್ಷಿ ಕಲೆಹಾಕಿದ ಪೊಲೀಸರು:

ಆರೋಪಿ ರಘು ಅಲಿಯಾಸ್ ರಾಘವೇಂದ್ರನ ಮನೆಯಲ್ಲಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಲ್ಲಿ ಪೆನ್​ಡ್ರೈವ್, ಹಾರ್ಡ್​ ಡಿಸ್ಕ್​ ಮತ್ತು ಮೊಬೈಲ್​ಗಳನ್ನು ಜಪ್ತಿ ಮಾಡಲಾಗಿದೆ. 6 ಮೊಬೈಲ್​ಗಳಲ್ಲಿ ಹನಿ ಟ್ರ್ಯಾಪ್​ಗೆ ಒಳಗಾದ ಶಾಸಕರ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹನಿಟ್ರ್ಯಾಪಿಂಗ್​ಗೆ ದಾಳವಾಗಿದ್ದ ಯುವತಿಯರ ಜೊತೆ ಶಾಸಕರು ಮಾತಾಡಿದ ಆಡಿಯೋಗಳು ಕೂಡ ಲಭ್ಯವಾಗಿವೆ. 200ಕ್ಕೂ ಹೆಚ್ಚು ಕಿರುತೆರೆ ನಟಿಯರನ್ನು ಬಳಸಿಕೊಂಡು ರಘು ರಾಜಕಾರಣಿಗಳ ಜೊತೆ ಸಂಪರ್ಕ ಬೆಳೆಸಿಕೊಂಡು ಹನಿಟ್ರ್ಯಾಪಿಂಗ್ ದಂಧೆಯನ್ನು ನಡೆಸುತ್ತಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.

ಕಿರುತೆರೆ ನಟಿಯರೇ ದಾಳ:
ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಸಿಗದೆ ಅಲೆದಾಡುತ್ತಿದ್ದ ನಟಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿ ರಘು ಅವರನ್ನು ಬಳಸಿಕೊಂಡು ರಾಜಕಾರಣಿಗಳ ಪರಿಚಯ ಮಾಡುತ್ತಿದ್ದ. ಅವರ ಕೈಗೆ ವ್ಯಾನಿಟಿ ಬ್ಯಾಗ್ ಕೊಟ್ಟು ಅದರಲ್ಲಿ ಕ್ಯಾಮೆರಾ ಇಟ್ಟು ಆ ನಟಿಯರ ಜೊತೆಗೆ ರಾಜಕಾರಣಿಗಳು ನಡೆಸುತ್ತಿದ್ದ ರಾಸಲೀಲೆಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ. ನಂತರ ಆ ವಿಡಿಯೋಗಳನ್ನು ತೋರಿಸಿ ರಾಜಕಾರಣಿಗಳನ್ನು ಬ್ಲ್ಯಾಕ್​ಮೇಲ್ ಮಾಡುತ್ತಿದ್ದ.ತಮ್ಮ ಮಾನ ಉಳಿಸಿಕೊಳ್ಳಲು ರಘು ಗ್ಯಾಂಗ್​ಗೆ ಕೋಟಿ-ಕೋಟಿ ರೂ. ಹಣ ಕೊಟ್ಟು ರಾಜಕಾರಣಿಗಳು ಸುಮ್ಮನಾಗುತ್ತಿದ್ದರು.
First published:November 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ