ಬೆಂಗಳೂರು ಹನಿಟ್ರಾಪ್ ದಂಧೆ; ದುಡ್ಡು ಮಾಡಲು ಮಗಳನ್ನೇ ಬಳಸಿಕೊಂಡ ಅಪ್ಪ-ಅಮ್ಮ!

Bangalore Crime Updates: ಮಗಳ ಮೂಲಕ ಹನಿಟ್ರಾಪ್ ಮಾಡಲು ಮುಂದಾಗಿದ್ದ ತಂದೆ ಪ್ರಮೋದ್ ಕುಮಾರ್, ತಾಯಿ ಲೀನಾ ಕವಿತಾ ಅವರನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಡೇಟಿಂಗ್ ಆ್ಯಪ್ ಮೂಲಕ ಯುವಕರನ್ನು ಪರಿಚಯ ಮಾಡಿಕೊಳ್ಳುವಂತೆ ಮಗಳನ್ನು ಮುಂದೆ ಬಿಡುತ್ತಿದ್ದ ಈ ದಂಪತಿ ಬಳಿಕ ದುಡ್ಡು ವಸೂಲಿ ಮಾಡುತ್ತಿದ್ದರು.

Sushma Chakre | news18-kannada
Updated:October 23, 2019, 10:20 AM IST
ಬೆಂಗಳೂರು ಹನಿಟ್ರಾಪ್ ದಂಧೆ; ದುಡ್ಡು ಮಾಡಲು ಮಗಳನ್ನೇ ಬಳಸಿಕೊಂಡ ಅಪ್ಪ-ಅಮ್ಮ!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಅ. 23): ತಮ್ಮ ಮಕ್ಕಳನ್ನು ಸಮಾಜದ ದುಷ್ಟರು ಮತ್ತು ಕೆಟ್ಟ ಆಚರಣೆಗಳಿಂದ ದೂರವಿಡಲು ಪೋಷಕರು ಇನ್ನಿಲ್ಲದಂತೆ ನಿಗಾ ವಹಿಸುತ್ತಾರೆ. ಆದರೆ, ಹನಿಟ್ರಾಪ್​ ಮೂಲಕ ಹಣ ಸಂಪಾದನೆ ಮಾಡಲು ಮಗಳನ್ನೇ ದಾಳವನ್ನಾಗಿ ಬಳಸಿಕೊಂಡ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ.

ಮಗಳ ಮೂಲಕ ಹನಿಟ್ರಾಪ್ ಮಾಡಲು ಮುಂದಾಗಿದ್ದ ತಂದೆ ಪ್ರಮೋದ್ ಕುಮಾರ್, ತಾಯಿ ಲೀನಾ ಕವಿತಾ ಅವರನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಡೇಟಿಂಗ್ ಆ್ಯಪ್ ಮೂಲಕ ಯುವಕರನ್ನು ಪರಿಚಯ ಮಾಡಿಕೊಳ್ಳುವಂತೆ ಮಗಳನ್ನು ಮುಂದೆ ಬಿಡುತ್ತಿದ್ದ ಈ ದಂಪತಿ ಬಳಿಕ ದುಡ್ಡು ವಸೂಲಿ ಮಾಡುತ್ತಿದ್ದರು. ಇದೇ ರೀತಿ ಪ್ರಮೋದ್- ಕವಿತಾ ಅವರ ಮಗಳು ನಿಖಿತಾ ಡೇಟಿಂಗ್ ಆ್ಯಪ್ ಮೂಲಕ ತ್ರಿಶಾಲ್ ಎಂಬ ಹುಡುಗನ ಪರಿಚಯ ಮಾಡಿಕೊಂಡಿದ್ದಳು. ಇವರಿಬ್ಬರೂ ಮೊಬೈಲ್ ನಂಬರ್ ಹಂಚಿಕೊಂಡು ಸ್ನೇಹಿತರಾಗಿದ್ದರು.

ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ತ್ರಿಶಾಲ್ ಜೊತೆಗೆ ನಿಖಿತಾ ಲಾಡ್ಜ್​ನಲ್ಲಿ ಒಂದು ರಾತ್ರಿಯನ್ನೂ ಕಳೆದಿದ್ದಳು. ಚಾಟ್ ಮಾಡಿಕೊಂಡು ಯುವಕರನ್ನು ಬುಟ್ಟಿಗೆ ಹಾಕಿಕೊಳ್ಳಲು ಹೇಳಿದರೆ ತಮಗೆ ಹೇಳದೆ ಮಗಳು ತ್ರಿಶಾಲ್ ಜೊತೆಗೆ ಲಾಡ್ಜ್​ಗೆ ಹೋಗಿದ್ದು ಪ್ರಮೋದ್ ಕುಮಾರ್ ಮತ್ತು ಲೀನಾ ಕವಿತಾ ಅವರಿಗೆ ಕೋಪ ತರಿಸಿತ್ತು. ಈ ಬಗ್ಗೆ ತ್ರಿಶಾಲ್ ಅವರ ಪೋಷಕರಿಗೆ ಫೋನ್ ಮಾಡಿದ್ದ ಪ್ರಮೋದ್ ಕುಮಾರ್, ತಮ್ಮ ಮಗಳನ್ನು ನಿಮ್ಮ ಮಗ ಲಾಡ್ಜ್​ಗೆ ಕರೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದರು.

ಜೀನ್ಸ್​ ಧರಿಸಿದ ಯುವತಿಗೆ ಆರ್​ಟಿಓ ಅಧಿಕಾರಿ ಈ ರೀತಿ ಮಾಡೋದಾ?; ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ

ಪ್ರಮೋದ್ ಕುಮಾರ್ ಮತ್ತು ಲೀನಾ ಕವಿತಾ ಅವರ ಬೆದರಿಕೆಗೆ ಹೆದರಿದ ತ್ರಿಶಾಲ್ ಪೋಷಕರು ತಮ್ಮ ಮಗನಿಗೆ ಬುದ್ಧಿ ಹೇಳುವುದಾಗಿ ತಿಳಿಸಿದ್ದರು. ಆದರೆ, ಅಷ್ಟಕ್ಕೆ ಸುಮ್ಮನಾಗದ ಪ್ರಮೋದ್ ಕುಮಾರ್, ನಿಮ್ಮ ಮಗ ನಮ್ಮ ಮಗಳ ಜೊತೆ ಇರುವ ಖಾಸಗಿ ವಿಡಿಯೋಗಳಿವೆ. 1 ಕೋಟಿ ರೂ. ಕೊಡದಿದ್ದರೆ ಅವುಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದಕ್ಕೆ ಹೆದರಿದ ತ್ರಿಶಾಲ್ ಮನೆಯವರು 3 ಚೆಕ್​ಗಳ ಮೂಲಕ 22 ಲಕ್ಷ ರೂ. ನೀಡಿದ್ದರು.

ಅತ್ಯಾಚಾರ ತಡೆಯಲಾಗದಿದ್ದರೆ ಎಂಜಾಯ್ ಮಾಡಿ; ವಿವಾದ ಸೃಷ್ಟಿಸಿದ ಕಾಂಗ್ರೆಸ್ ಸಂಸದನ ಪತ್ನಿಯ ಫೇಸ್​ಬುಕ್ ಪೋಸ್ಟ್​

1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಪ್ರಮೋದ್ ಕುಮಾರ್ ದಂಪತಿ ನಂತರ 22 ಲಕ್ಷಕ್ಕೆ ವ್ಯವಹಾರ ಕುದುರಿಸಿದ್ದರು. ಕೆಲ ದಿನಗಳ ಬಳಿಕ ಮತ್ತೆ ಹೊಸ ಡ್ರಾಮಾ ಶುರುಮಾಡಿದ್ದ ದಂಪತಿ ತಮ್ಮ ಮಗಳು ಗರ್ಭಿಣಿ. ಆಕೆಗೆ ಅಬಾರ್ಷನ್ ಮಾಡಿಸಬೇಕೆಂದು ಮತ್ತೆ 20 ಲಕ್ಷ ರೂ. ಪಡೆದಿದ್ದರು. ಇದಾದ ಬಳಿಕ ಮತ್ತೆ ಹಣದ ಬೇಡಿಕೆ ಇಟ್ಟಾಗ ಬೇರೆ ದಾರಿ ಕಾಣದೆ ತ್ರಿಶಾಲ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ಬೆನ್ನತ್ತಿದ್ದ ಮಲ್ಲೇಶ್ವರಂ ಪೊಲೀಸರು ನಿಖಿತಾ ಎಂಬ ಯುವತಿಯ ತಂದೆ-ತಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದೆ.(ವರದಿ: ಕಿರಣ್ ಕೆ.ಎನ್)

First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading