ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಿಟ್ ಆ್ಯಂಡ್ ರನ್ ಹಾಗೂ ಸರಣಿ ಅಪಘಾತ ಪ್ರಕರಣಗಳು (Hit and Run) ಪಾದಾಚಾರಿಗಳು ಹಾಗೂ ವಾಹನ ಸವಾರರ ಜೀವ ಹಿಂಡುತ್ತಿವೆ. ಫೆಬ್ರವರಿ 2ರಂದು ಮೈಸೂರು ರಸ್ತೆಯ (Mysuru Road) ಬಿಮ್ಸ್ ಕಾಲೇಜು ಬಳಿ ಶ್ವೇತಾ ಎಂಬ ವಿದ್ಯಾರ್ಥಿನಿಗೆ (Student) ಕಾರು ಡಿಕ್ಕಿ ಹೊಡೆದ ಪರಿಣಾಮ ಆಕೆ 50 ಮೀಟರ್ ದೂರ ಹಾರಿ ಬಿದಿದ್ದರು. ಈಗಲೂ ವಿದ್ಯಾರ್ಥಿನಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ಮಾಡ್ತಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಇಂದು ಮಧ್ಯಾಹ್ನದ ವೇಳೆಗೆ ನೃಪತುಂಗ ರಸ್ತೆಯ (Nrupathunga Road ) ಪೊಲೀಸ್ ಪಾರ್ಕ್ ಬಳಿ (Police Park) ಸರಣಿ ಅಪಘಾತ ಸಂಭವಿಸಿದ್ದು, ಸದಾ ಗಿಜಿಗುಡುವ ರಸ್ತೆಯಲ್ಲಿ ವೇಗವಾಗಿ ಬಂದ ಇನ್ನೋವಾ ಕಾರು (Innova Car) ಮೂರು ಬೈಕ್, ಒಂದು ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ (Accident) ಮೂವರು ಬೈಕ್ ಸವಾರರು ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಕಾರು ಚಾಲಕ ಪೊಲೀಸರ ವಶಕ್ಕೆ
ಸರಣಿ ಅಪಘಾತಕ್ಕೆ ಕಾರಣವಾದ ಇನ್ನೋವಾ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಅಪಘಾತ ಎಸಗಿದ ಕಾರಿನಲ್ಲಿ ಸಾಗರ ಶಾಸಕ ಹರತಾಳು ಹಾಲಪ್ಪ ಪಾಸ್ ಪತ್ತೆಯಾಗಿದೆ. ರಾಮು ಸುರೇಶ್ ಎಂಬುವರ ಹೆಸರಲ್ಲಿ ಕಾರು ನೋಂದಣಿಯಾಗಿದ್ದು, ಈ ಬಗ್ಗೆ ಹಲಸೂರು ಗೇಟ್ ಸಂಚಾರಿ ಪೊಲೀಸರು ತನಿಖೆ ನಡೆಸಿದ್ದಾರೆ. ಕಾರು ಓರ್ವ ಬೈಕ್ ಸವಾರ ತಲೆ ಮೇಲೆ ಹರಿದಿದ್ದು, ಮತ್ತೋರ್ವ ಸವಾರನ ಕಾಲಿನ ಮೇಲೆ ಹರಿದಿದೆ.
ಇದನ್ನೂ ಓದಿ: Bengaluru: ಕಿಲ್ಲರ್ ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ; ಚಾಲಕನ ನಿಯಂತ್ರಣ ತಪ್ಪಿ ಸರಣಿ ಅಪಘಾತ, ಮೂವರಿಗೆ ಗಾಯ
ಶಾಸಕ ಹರತಾಳು ಹಾಲಪ್ಪ ಪಾಸ್ ಪತ್ತೆ
ಘಟನೆ ನಡೆದ ಬಳಿಕ ಗಾಬರಿಗೆ ಒಳಗಾದ ಕಾರು ಚಾಲಕ ಕಾರನ್ನು ಸ್ಥಳದಿಂದ ಸ್ವಲ್ಪ ದೂರ ತೆಗೆದುಕೊಂಡು ಹೋಗಿ ನಿಲ್ಲಿಸಿದ್ದಾನೆ. ಬಳಿಕ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗಾಯಗೊಂಡಿರುವ ವ್ಯಕ್ತಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ಯಲಹಂಕ ಆರ್ ಟಿಓ ನೋಂದಣಿ ಕಾರಿನ ಮೇಲೆ ಶಾಸಕ ಹರತಾಳು ಹಾಲಪ್ಪ ಪಾಸ್ ಪತ್ತೆಯಾಗಿದ್ದು, ಅಪಘಾತ ಸಂಭವಿದ ಕೂಡಲೇ ಚಾಲಕ ಪಾಸ್ಅನ್ನು ತೆಗೆದು ರಸ್ತೆ ಪಕ್ಕಕ್ಕೆ ಎಸೆದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಮೃತ ವ್ಯಕ್ತಿಯನ್ನು ಮಾಜೀದ್ ಖಾನ್ (39) ಎಂದು ಗುರುತಿಸಲಾಗಿದೆ. ಎಚ್ಬಿಆರ್ ಲೇಔಟ್ ನಿವಾಸಿಯಾಗಿದ್ದ ಮಾಜೀದ್ ಖಾನ್ ಆಟೋ ಮೊಬೈಲ್ಸ್ ಅಂಗಡಿ ಇಟ್ಟುಕೊಂಡಿದ್ದರು. ಮತ್ತೊಬ್ಬ ಗಾಯಾಳು ರಿಯಾಜ್ ಕಾಲು ಪ್ರಾಕ್ಚರ್ ಆಗಿದ್ದು, ತಲೆಗೆ ಗಾಯವಾಗಿದೆ. ರಿಯಾಜ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮಾರಕಾಸ್ತ್ರಗಳನ್ನು ಹಿಡಿದು ಹಲ್ಲೆಗೆ ಮುಂದಾಗಿದ್ದ ಆರೋಪಿ ಕಾಲಿಗೆ ಗುಂಡೇಟು
ಮಾರಕಾಸ್ತ್ರಗಳನ್ನು ಹಿಡಿದ ಜನನಿಬಿಡ ಪ್ರದೇಶಕ್ಕೆ ಬಂದ ಪುಂಡನೊಬ್ಬ ಜನರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಈ ಬಗ್ಗೆ ಮಾಹಿತಿ ತಿಳಿದ ಚೌಕ್ ಠಾಣೆ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಪಿಎಸ್ಐ ವಹೀದ್ ಕೊತ್ವಾಲ್, ಆರೋಪಿ ಬಳಿ ಶರಣಾಗುವಂತೆ ಹೇಳಿದ್ದಾರೆ. ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ, ಕಾಲಿಗೆ 3 ಬಾರಿ ಗುಂಡು ಹಾರಿಸಿ ಅಬ್ದುಲ್ ಜಾಫರ್ನನ್ನ ಬಂಧಿಸಲಾಗಿದೆ. ಗಂಡೇಟು ತಿಂದ ಆರೋಪಿಯನ್ನ ಪೊಲೀಸರು ಜಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ