ಜಿಮ್​ಗೆ ಹೋಗುವವರೇ ಎಚ್ಚರ; ಫಿಟ್​ನೆಸ್​ಗಾಗಿ ಪುರುಷತ್ವ ಕಳೆದುಕೊಳ್ಳಬೇಕಾದೀತು!

ಪೊಲೀಸರು ದಾಳಿ ನಡೆಸಿದಾಗ ಜಿಮ್​ನಲ್ಲಿ ಹಲವು ಸ್ಟಿರಾಯ್ಡ್​ಗಳು ಪತ್ತೆಯಾಗಿವೆ. ಜೊತೆಗೆ ಕೆಲವು ಪ್ರೋಟೀನ್ ಬಾಟಲ್​ಗಳು ಕೂಡ ಪತ್ತೆಯಾಗಿವೆ. ಬ್ಯಾನ್​ ಆಗಿರುವ ಕೆಲವು ಸ್ಟಿರಾಯ್ಡ್​ಗಳನ್ನು ಗ್ರಾಹಕರಿಗೆ ನೀಡುತ್ತಿದ್ದ ಶಿವಕುಮಾರ್ ಆನ್​ಲೈನ್ ಮೂಲಕ ಅವುಗಳನ್ನು ತರಿಸಿಕೊಳ್ಳುತ್ತಿದ್ದ.

Sushma Chakre | news18-kannada
Updated:August 24, 2019, 11:12 AM IST
ಜಿಮ್​ಗೆ ಹೋಗುವವರೇ ಎಚ್ಚರ; ಫಿಟ್​ನೆಸ್​ಗಾಗಿ ಪುರುಷತ್ವ ಕಳೆದುಕೊಳ್ಳಬೇಕಾದೀತು!
ಜಿಮ್ ಟ್ರೈನರ್ ಶಿವಕುಮಾರ್
  • Share this:
ಬೆಂಗಳೂರು (ಆ. 24): ದೇಹವನ್ನು ಫಿಟ್ ಆಗಿಟ್ಟುಕೊಳ್ಳಬೇಕೆಂಬ ಬಯಕೆ ಎಲ್ಲರಿಗೂ ಇದ್ದೇ ಇರುತ್ತದೆ. ಹೀಗಾಗಿ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಬಹುತೇಕರು ಜಿಮ್ ಸೇರಿಕೊಳ್ಳುತ್ತಾರೆ. ದಪ್ಪಗಿದ್ದವರಿಗೆ ತೆಳ್ಳಗಾಗುವ ಬಯಕೆ, ತೆಳ್ಳಗಿದ್ದವರಿಗೆ ಬಾಡಿ ಬಿಲ್ಡ್​ ಮಾಡಿಕೊಂಡು ಆಕರ್ಷಕವಾಗಿ ಕಾಣುವ ಬಯಕೆ. ಈ ಬಯಕೆಗಳಿಗೆ ಉತ್ತೇಜನ ನೀಡುತ್ತಿರುವುದು ಜಿಮ್​ಗಳು. ಆದರೆ, ಜಿಮ್​ಗಳು ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಇತ್ತೀಚೆಗೆ ಹೆಚ್ಚಾಗಿ ಕಾಡಲಾರಂಭಿಸಿದೆ. 

ಬೆಂಗಳೂರಿನ ಚಾಮರಾಜಪೇಟೆಯ 4ನೇ ಮುಖ್ಯರಸ್ತೆಯಲ್ಲಿರುವ ಅಲ್ಟಿಮೇಟ್ ಫಿಟ್​ನೆಸ್​ ಜಿಮ್ ಟ್ರೈನರ್ ಸದ್ಯಕ್ಕೆ ಪೊಲೀಸರ ಅತಿಥಿಯಾಗಿದ್ದಾನೆ. ತನ್ನ ಜಿಮ್​ಗೆ ಬರುವವರಿಗೆ ದೇಹ ತೆಳ್ಳಗಾಗಲು ಮತ್ತು ದಪ್ಪಗಾಗಲು ಸ್ಟಿರಾಯ್ಡ್​ ಕೊಡುತ್ತಿದ್ದ ಟ್ರೈನರ್​ ಶಿವಕುಮಾರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಜಿಮ್ ಗ್ರಾಹಕರಿಗೆ ಹಾನಿಕಾರಕ ಔಷಧವನ್ನು ನೀಡುತ್ತಿದ್ದ ಶಿವಕುಮಾರ್ ಕುರಿತು ಮಾಹಿತಿ ಕಲೆಹಾಕಿದ ಪೊಲೀಸರು ಆ. 21ರಂದು ಜಿಮ್ ಮೇಲೆ ದಾಳಿ ನಡೆಸಿದ್ದರು.

ಎಲೆಕ್ಟ್ರಾನಿಕ್ ಸಿಟಿಯಲ್ಲೊಂದು ಭಯಾನಕ ಕೃತ್ಯ; ಹೆಂಡತಿಯ ಹೆಣವನ್ನು ಬ್ಯಾಗ್​ನಲ್ಲಿಟ್ಟು ಗಂಡ ಪರಾರಿ

ಪೊಲೀಸರು ದಾಳಿ ನಡೆಸಿದಾಗ ಜಿಮ್​ನಲ್ಲಿ ಹಲವು ಸ್ಟಿರಾಯ್ಡ್​ಗಳು ಪತ್ತೆಯಾಗಿವೆ. ಜೊತೆಗೆ ಕೆಲವು ಪ್ರೋಟೀನ್ ಬಾಟಲ್​ಗಳು ಕೂಡ ಪತ್ತೆಯಾಗಿವೆ. ಬ್ಯಾನ್​ ಆಗಿರುವ ಕೆಲವು ಸ್ಟಿರಾಯ್ಡ್​ಗಳನ್ನು ಗ್ರಾಹಕರಿಗೆ ನೀಡುತ್ತಿದ್ದ ಶಿವಕುಮಾರ್ ಆನ್​ಲೈನ್ ಮೂಲಕ ಅವುಗಳನ್ನು ತರಿಸಿಕೊಳ್ಳುತ್ತಿದ್ದ. ಆ ಔಷಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಔಷಧಗಳು ಹಾನಿಕಾರಕವಾಗಿದ್ದು, ಆರೋಗ್ಯದ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತವೆ.

ನಂದಿ ಬೆಟ್ಟ ಮಾರ್ಗ ಮಧ್ಯೆ ಕಾರು ಪಲ್ಟಿಯಾಗಿ 4 ಮಂದಿ ಸಾವು

ಪುರುಷತ್ವಕ್ಕೇ ಬರುತ್ತೆ ಕುತ್ತು!:

ಸ್ಟಿರಾಯ್ಡ್​ ಬಳಕೆಯಿಂದ ಗಂಡಸರ ಪುರುಷತ್ವಕ್ಕೇ ತೊಂದರೆ ಉಂಟಾಗುತ್ತದೆ. ಈ ಸ್ಟಿರಾಯ್ಡ್​ಗಳು ರಕ್ತಕ್ಕೆ ಸೇರುವುದರಿಂದ ವೀರ್ಯಾಣುಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಫಿಟ್​ನೆಸ್​ ಬೇಕೆಂದು ಸ್ಟಿರಾಯ್ಡ್​ ಸೇವಿಸಿದರೆ ಪುರುಷತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ.ಆರೋಪಿ ಶಿವಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 406, 420ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಪೊಲೀಸರು ಔಷಧ ನಿಯಂತ್ರಣ ಇಲಾಖೆಗೆ ಪತ್ರ ಬರೆಯಲಿದ್ದಾರೆ. ಜಪ್ತಿಯಾದ ಔಷಧಗಳ ತಪಾಸಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

(ವರದಿ: ಕಿರಣ್​ ಕೆ.ಎನ್)

First published: August 24, 2019, 10:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading