ಅಮೂಲ್ಯ ಲಿಯೋನಾಗೆ 14 ದಿನ ನ್ಯಾಯಾಂಗ ಬಂಧನ; ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ಮನೆ ಮೇಲೆ ದಾಳಿ

ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾರ ಪ್ರತಿಭಟನೆ ಆಯೋಜಿಸಿತ್ತು. ಈ ಪ್ರತಿಭಟನಾ ಸಭೆಯ ವೇದಿಕೆ ಮೇಲೆ ಬಂದ ಅಮೂಲ್ಯ ಎಂಬ ಯುವತಿ ಇದ್ದಕ್ಕಿದ್ದ ಹಾಗೆ ‘ಪಾಕಿಸ್ತಾನ ಜಿಂದಾಬಾದ್’ ಎಂದು ಎರಡು ಬಾರಿ ಘೋಷಣೆ ಕೂಗಿದ್ದಳು. ಇವಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

news18-kannada
Updated:February 21, 2020, 8:20 AM IST
ಅಮೂಲ್ಯ ಲಿಯೋನಾಗೆ 14 ದಿನ ನ್ಯಾಯಾಂಗ ಬಂಧನ; ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ಮನೆ ಮೇಲೆ ದಾಳಿ
ವೇದಿಕೆಯ ಮೇಲೆ ಅಮೂಲ್ಯ
  • Share this:
ಬೆಂಗಳೂರು (ಫೆ.21): ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಟಿಪ್ಪು ಸುಲ್ತಾನ್‌ ಯುನೈಟೆಡ್‌ ಫ್ರಂಟ್‌ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಆಯೋಜಿಸಿದ್ದ ಪ್ರತಿಭಟನೆ ವೇಳೆ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ ಅಮೂಲ್ಯ ಲಿಯೋನಾಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.  ಇತ್ತ, ಚಿಕ್ಕಮಗಳೂರಿನಲ್ಲಿರುವ ಅಮೂಲ್ಯ ಮನೆಯ ಮೇಲೆ ಗುರುವಾರ ರಾತ್ರಿ ಉದ್ರಿಕ್ತ ಗುಂಪೊಂದು ದಾಳಿ ನಡೆಸಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾರ ಪ್ರತಿಭಟನೆ ಆಯೋಜಿಸಿತ್ತು. ಈ ಪ್ರತಿಭಟನಾ ಸಭೆಯಲ್ಲಿ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪಾಲ್ಗೊಂಡಿದ್ದರು. ಪ್ರತಿಭಟನೆ ಆರಂಭವಾಗುತ್ತಿದ್ದಂತೆ ವೇದಿಕೆ ಮೇಲೆ ಬಂದ ಅಮೂಲ್ಯ ಎಂಬ ಯುವತಿ ಇದ್ದಕ್ಕಿದ್ದ ಹಾಗೆ ‘ಪಾಕಿಸ್ತಾನ ಜಿಂದಾಬಾದ್’ ಎಂದು ಎರಡು ಬಾರಿ ಘೋಷಣೆ ಕೂಗಿದ್ದಳು. ತಕ್ಷಣ ಆಕೆಯನ್ನು ವೇದಿಕೆಯಿಂದ ಕೆಳಗಿಳಿಸಿದ ಆಯೋಜಕರು ಪೊಲೀಸರ ವಶಕ್ಕೆ ಒಪ್ಪಿಸಿದ್ದರು.  ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದ ಪೊಲೀಸರು ಆಕೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಾದ ನಂತರ ರಾತ್ರೋರಾತ್ರಿ ಕೋರಮಂಗ‌ಲದ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿರುವ 5 ನೇ ಎಸಿಎಂಎಂ ನ್ಯಾಯಾಧೀಶೆ ಮುಂದೆ ಅಮೂಲ್ಯಳನ್ನು ಹಾಜರುಪಡಿಸಲಾಯಿತು. ನ್ಯಾಯಾಧೀಶೆ ಶಿರಿನ್ ಜೆ ಅನ್ಸಾರಿ, ಅಮೂಲ್ಯಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದರು.

ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್​​ ಎಂದ ಅಮೂಲ್ಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು: ಗೃಹ ಸಚಿವ ಬಸವರಾಜ್​​ ಬೊಮ್ಮಾಯಿ

ಜೈಲಿನವರೆಗೆ ಬಂದ ಅಮೂಲ್ಯ ಬೆಂಬಲಿಗರು!:

ಅಮೂಲ್ಯಳನ್ನು ತಡರಾತ್ರಿ ಜೈಲಿಗೆ ಕರೆದೊಯ್ಯಲಾಯಿತು. ಅವಳನ್ನು ಜೈಲಿಗೆ ಬಿಟ್ಟು ಬರುವ ಸಂದರ್ಭದಲ್ಲಿ ಪೊಲೀಸ್​ ಬೆಂಗಾವಲು ಪಡೆ ಹಿಂದೆ ಬಂದ ಅಮೂಲ್ಯ ಬೆಂಬಲಿಗರು ‘ಹಮ್ ತುಮ್ಹಾರೆ ಸಾಥ್ ಮೇ’ ಎಂದು ಘೋಷಣೆ ಕೂಗುತ್ತ ಬಂದರು.

ಶಿವಪುರದಲ್ಲಿನ ಅಮೂಲ್ಯ ಮನೆ ಮೇಲೆ ದಾಳಿ:ಅಮೂಲ್ಯ ಮೂಲತಃ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಶಿವಪುರದವಳು. ಇವಳು ಪಾಕ್​ ಪರ ಘೋಷಣೆ ಕೂಗಿದ ಬೆನ್ನಲ್ಲೇ ಅವಳ ಮನೆ ಮೇಲೆ ಗುಂಪೊಂದು ರಾತ್ರಿ ದಾಳಿ ನಡೆಸಿದೆ. ಮನೆಯ ಕಿಟಕಿ, ಗ್ಲಾಸುಗಳ ಮೇಲೆ ಹೂ ಕುಂಡ ಎಸೆದು ಧ್ವಂಸ ಮಾಡಲಾಗಿದೆ. ದಾಳಿ ಹಿನ್ನೆಲೆಯಲ್ಲಿ ಮನೆಗೆ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಮುನ್ನೆಚ್ಚರಿಕೆಯಿಂದ ಅಮೂಲ್ಯ ಪಾಲಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ತಮ್ಮ ಮನೆ ಮೇಲೆ ರಾತ್ರೀ ರಾತ್ರಿ ದಾಳಿ ನಡೆದಿದ್ದರಿಂದ ಅಮೂಲ್ಯಳ ಅಪ್ಪ ವಾಜಿ ಕೊಪ್ಪ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
First published: February 21, 2020, 8:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading