ಬೆಂಗಳೂರಿಗರೇ ಎಚ್ಚರ!; ಮನೆ ಮುಂದೆ ಕಸ ಹಾಕುವ ಮುನ್ನ ಈ ಸುದ್ದಿ ಓದಿ...

ಕೇವಲ ಒಳ್ಳೆ ಊಟ ಮಾಡಿ, ವ್ಯಾಯಾಮ ಮಾಡಿದರೆ ನಮ್ಮ ಹೃದಯ ಆರೋಗ್ಯವಾಗಿರುತ್ತದೆ ಎಂದುಕೊಂಡವರಿಗೆ ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯರು ನೀಡಿರುವ ಈ ವರದಿ ಎಚ್ಚರಿಕೆಯ ಗಂಟೆಯಾಗಿದೆ.

Sushma Chakre | news18-kannada
Updated:September 28, 2019, 3:51 PM IST
ಬೆಂಗಳೂರಿಗರೇ ಎಚ್ಚರ!; ಮನೆ ಮುಂದೆ ಕಸ ಹಾಕುವ ಮುನ್ನ ಈ ಸುದ್ದಿ ಓದಿ...
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಸೆ. 28): ಇತ್ತೀಚೆಗೆ ಹೃದಯ ಸಂಬಂಧಿತ ಸಮಸ್ಯೆಗಳು ಮಾಮೂಲಾಗಿಬಿಟ್ಟಿದೆ. ಜೀವನಶೈಲಿ ಬದಲಾದಂತೆ ಆರೋಗ್ಯದಲ್ಲೂ ಏರುಪೇರಾಗುತ್ತವೆ. ಹೃದಯಾಘಾತಕ್ಕೆ ಇಂಥದ್ದೇ ಕಾರಣವೆಂದು ಹೇಳೋಕೆ ಸಾಧ್ಯವಿಲ್ಲ. ಬಿಪಿ ಜಾಸ್ತಿ ಆದರೆ ಹಾರ್ಟ್ ಅಟ್ಯಾಕ್ ಆಗುತ್ತೆ, ಸಿಹಿ-ಜಿಡ್ಡು ಜಾಸ್ತಿ ತಿಂದು ದೇಹದಲ್ಲಿ ಕೊಬ್ಬಿನಾಂಶ ಜಾಸ್ತಿ ಆದರೂ ಹಾರ್ಟ್ ಅಟ್ಯಾಕ್ ಆಗುತ್ತೆ. ಧೂಮಪಾನ, ಮದ್ಯಪಾನದಿಂದಲೂ ಹಾರ್ಟ್ ಅಟ್ಯಾಕ್ ಆಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ, ಬೆಂಗಳೂರಿನ ಬೃಹತ್ ಸಮಸ್ಯೆಯಾಗಿರುವ ಕಸದಿಂದಲೂ ಹಾರ್ಟ್ ಅಟ್ಯಾಕ್ ಆಗುತ್ತದೆ ಅನ್ನೋದು ನಿಮಗೆ ಗೊತ್ತಾ?

ಕಸದಿಂದ ಹಾರ್ಟ್​ ಅಟ್ಯಾಕ್​ ಆಗುತ್ತಾ? ಅಂತ ಆಶ್ಚರ್ಯಪಡಬೇಡಿ. ಈ ಮಾತನ್ನು ನಾವು ಹೇಳುತ್ತಿಲ್ಲ. ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯಾದ ಜಯದೇವ ಹೃದ್ರೋಗ ಸಂಸ್ಥೆ ನಡೆಸಿರುವ ನೂತನ ಸಂಶೋಧನೆ ಈ ವಿಷಯವನ್ನು ಹೇಳಿದೆ. ತಂಬಾಕನ್ನು ಸೇದುವುದರಿಂದ, ಜಗಿಯುವುದರಿಂದ ಸಾಯುವುದಕ್ಕಿಂತ ಹೆಚ್ಚಿನ ಜನ ವಾಯುಮಾಲಿನ್ಯದಿಂದ ಸಾಯುತ್ತಿದ್ದಾರಂತೆ. ಹೃದಯಕ್ಕೆ ವಾಯುಮಾಲಿನ್ಯ ಅದೆಷ್ಟು ದೊಡ್ಡ ಹೊಡೆತ ಕೊಡುತ್ತೆ ಅಂದರೆ 5 ನಿಮಿಷ ಟ್ರಾಫಿಕ್​ನಲ್ಲಿ ಇರೋದೂ ಒಂದೇ 5 ಸಿಗರೇಟ್ ಸೇದೋದೂ ಒಂದೇ ಎನ್ನುತ್ತಾರೆ ವೈದ್ಯರು. ಹಾಗಾಗಿ 35 ವರ್ಷದೊಳಗಿನ ಅನೇಕ ಯುವಕ-ಯುವತಿಯರು ಇತ್ತೀಚೆಗೆ ಹೃದಯಾಘಾತದಿಂದ ಬಳಲುತ್ತಾ ಇದ್ದಾರೆ. ಅದರಲ್ಲೂ ಕಾರು, ಲಾರಿಗಳ ಚಾಲಕರೇ ಹೆಚ್ಚಾಗಿ ಹೃದಯಾಘಾತದಿಂದ ಬಳಲುತ್ತಾ ಇರೋದು ಕೂಡ ಈ ಅಧ್ಯಯನದಲ್ಲಿ ತಿಳಿದುಬಂದಿದೆ.

ಈ ಕಾಲೇಜಲ್ಲಿ ಹುಡುಗ-ಹುಡುಗಿ ಜೊತೆಯಾಗಿ ಓಡಾಡಿದರೆ ಏನಾಗುತ್ತೆ ಗೊತ್ತಾ?

ಕಸದಿಂದಲೂ ಹೃದಯಾಘಾತ!:

2 ವರ್ಷಗಳಿಂದ ಈ ಬಗ್ಗೆ ಜಯದೇವ ಹೃದ್ರೋಗ ಸಂಸ್ಥೆ ಅಧ್ಯಯನ ನಡೆಸಿದೆ. ಈ ಅಧ್ಯಯನ ಪ್ರಕಾರ 35 ವರ್ಷದೊಳಗಿನ ಯುವಜನರಲ್ಲೇ ಹೃದಯಾಘಾತ ಸಮಸ್ಯೆ ಹೆಚ್ಚಾಗಿದೆ. ಈ ಬಗ್ಗೆ ತಿಳಿಯಲು 2,400 ಹೃದ್ರೋಗಿಗಳನ್ನು ವೈದ್ಯರು ಅಭ್ಯಾಸ ಮಾಡಿದ್ದಾರೆ. 1 ಲಕ್ಷದಲ್ಲಿ 200 ಜನರಿಗೆ ವಾಯುಮಾಲಿನ್ಯದಿಂದ ಹಾರ್ಟ್ ಅಟ್ಯಾಕ್
ಸಂಭವಿಸುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ವಾಯುಮಾಲಿನ್ಯ ಅಂದರೆ ಕೇವಲ ವಾಹನಗಳಿಂದ ಹೊರಹೋಗೋ ಹೊಗೆ ಮಾತ್ರ ಆಗಬೇಕಾಗಿಲ್ಲ. ಬೆಂಗಳೂರಿನ ಅತೀ ದೊಡ್ಡ ಸಮಸ್ಯೆಯಾದ ಕಸದಿಂದಲೂ ಆರೋಗ್ಯಕ್ಕೆ ದೊಡ್ಡ ಹಾನಿಯೇ ಆಗುತ್ತಿದೆ ಎನ್ನುವುದು ಆತಂಕದ ವಿಚಾರ. ಈ ವಿಷಯವನ್ನು ವೈದ್ಯರು ಕೂಡ ಒಪ್ಪುತ್ತಾರೆ. ಎಲ್ಲೆಲ್ಲೂ ಬಿದ್ದಿರುವ ಕಸದ ರಾಶಿಯಿಂದ ಮಿಥೇನ್ ಅನಿಲ ಹೊರಬರುತ್ತದೆ. ಈ ಮಿಥೇನ್ ಶ್ವಾಸಕೋಶದಲ್ಲಿ ರಕ್ತದ ಹರಿವಿಗೆ ಅಡ್ಡಿ ಉಂಟುಮಾಡಿ ಆ ಮೂಲಕ ಹೃದಯಾಘಾತ ಹೆಚ್ಚಾಗುತ್ತಿದೆ.

ಶುದ್ಧಗಾಳಿ ಬೇಕೆಂದು ವಿಮಾನದ ಕಿಟಕಿ ಓಪನ್ ಮಾಡಿದ ಮಹಿಳೆ!ಹಾಗಾಗಿ, ವಾಯುಮಾಲಿನ್ಯದ ಜೊತೆಜೊತೆಗೆ ಕಸದಿಂದಲೂ ಹಾರ್ಟ್ ಅಟ್ಯಾಕ್ ಆಗುವ ವಿಚಾರ ಆತಂಕಕಾರಿಯಾಗಿದೆ. ಕಳೆದ 2 ವರ್ಷಗಳಲ್ಲಿ 2,400 ಹೃದ್ರೋಗಿಗಳ ಮೇಲೆ ಅಧ್ಯಯನ ನಡೆಸಿರುವ ಜಯದೇವ ಹೃದ್ರೋಗ ಸಂಸ್ಥೆ ಈ ರೋಗಿಗಳಿಗಾಗಿಯೇ ಪ್ರಿಮೆಚ್ಯೂರ್ ಕರೊನರಿ ಆರ್ಟರಿ ಡಿಸೀಸ್ ಕ್ಲಿನಿಕ್ ಎನ್ನುವ ವಿಶೇಷ ಘಟಕವನ್ನೇ ತೆರೆದಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.

ಕೇವಲ ಒಳ್ಳೆ ಊಟ ಮಾಡಿ, ವ್ಯಾಯಾಮ ಮಾಡಿದರೆ ನಮ್ಮ ಹೃದಯ ಆರೋಗ್ಯವಾಗಿರುತ್ತದೆ ಎಂದುಕೊಂಡವರಿಗೆ ಜಯದೇವ ಆಸ್ಪತ್ರೆಯ ವೈದ್ಯರು ನೀಡಿರುವ ಈ ವರದಿ ಎಚ್ಚರಿಕೆಯ ಗಂಟೆಯಾಗಿದೆ. ಮೊದಲೆಲ್ಲಾ ಮಕ್ಕಳು ವಯಸ್ಸಾದ ತಂದೆ ತಾಯಂದಿರನ್ನು ಹೃದ್ರೋಗದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಆದ್ರೆ ಈಗ ತಂದೆ ತಾಯಿಯೇ ಚಿಕ್ಕ ವಯಸ್ಸಿನ ತಮ್ಮ ಮಕ್ಕಳನ್ನು ಹೃದ್ರೋಗದ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಬರಬೇಕಾದ ದುಸ್ಥಿತಿ ಎದುರಾಗಿರೋದು ನಿಜಕ್ಕೂ ದುರಾದೃಷ್ಟಕರ. ಇನ್ನಾದರೂ ಕಸದ ಸಮಸ್ಯೆಯನ್ನು ನಿಯಂತ್ರಿಸಲು ಜನರು ಕ್ರಮ ಕೈಗೊಳ್ಳಬೇಕಾಗಿದೆ.

(ವರದಿ: ಸೌಮ್ಯ ಕಳಸ)

First published: September 28, 2019, 3:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading