HOME » NEWS » State » BANGALORE FIRE OUTBREAK HOME MINISTER BASAVARAJA BOMMAI ADVISED TO TAKE APPROPRIATE ACTION AGAINST THE GUILTY MAK

Bangalore Fire Accident: ಕಾರ್ಖಾನೆಯಲ್ಲಿ ಅಗ್ನಿ ಅವಘಡ ಪ್ರಕರಣ; ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಿದ ಬಸವರಾಜ ಬೊಮ್ಮಾಯಿ

ಈ ಪ್ರಕರಣದಲ್ಲಿ ತಪ್ಪು ಮಾಡಿದ್ದಲ್ಲಿ ಬಿಬಿಎಂಪಿ ಅಧಿಕಾರಿಗಳ ಮೇಲೂ ಕ್ರ‌ಮ ಜರುಗಿಸಲಿದ್ದೇವೆ. ಈ ರೀತಿಯಾದ ಘಟನೆ ಇನ್ನು ನಗರದಲ್ಲಿ ನಡೆಯಬಾರದು. ಈ ರೀತಿಯಾದ ಕಾರ್ಖಾನೆಗಳು ನಗರದ ಬೇರೆ ಎಲ್ಲೆಲ್ಲಿದೆ ಅವೆಲ್ಲವನ್ನೂ ಮುಚ್ಚಿಸಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

news18-kannada
Updated:November 11, 2020, 4:56 PM IST
Bangalore Fire Accident: ಕಾರ್ಖಾನೆಯಲ್ಲಿ ಅಗ್ನಿ ಅವಘಡ ಪ್ರಕರಣ; ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಿದ ಬಸವರಾಜ ಬೊಮ್ಮಾಯಿ
ಬಾಪೂಜಿ ನಗರದ ಬೆಂಕಿ ಅವಘಡ.
  • Share this:
ಬೆಂಗಳೂರು (ನವೆಂಬರ್​11); ನಗರದ ಬಾಪೂಜಿ ನಗರದ ಬಳಿ ಇರುವ ಹೊಸಗುಡ್ಡದ ಹಳ್ಳಿಯ ರೇಖಾ ಕೆಮಿಕಲ್ ಫ್ಯಾಕ್ಟರಿಯಲ್ಲಿ ಮಂಗಳವಾರ ಮಧ್ಯಾಹ್ನ ಭಾರೀ ಬೆಂಕಿ ದುರಂತ ಸಂಭವಿಸಿತ್ತು. ಸ್ಥಳೀಯವಾಗಿ ಸ್ಯಾನಿಟೈಸರ್ ಮತ್ತು ಪೇಂಟ್ ರಿಮೂವ್ ಮಾಡುವ ಕೆಮಿಕಲ್ ತಯಾರಿಸುತ್ತಿದ್ದ ಫ್ಯಾಕ್ಟರಿಯಲ್ಲಿ ಸಿಲಿಂಡರ್​ ಸಿಡಿದು ಕಾಣಿಸಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆ ಇಡೀ ಏರಿಯಾವನ್ನು ವ್ಯಾಪಿಸಿತ್ತು. ಅಲ್ಲದೆ, ಅಕ್ಕಪಕ್ಕದ ಮನೆಗಳನ್ನು ವ್ಯಾಪಿಸಿತ್ತು. ಘಟನೆ ನಡೆದು 24 ಗಂಟೆಗಳಾದರೂ ಸಹ ಇನ್ನೂ ಬೆಂಕಿಯನ್ನು ಆರಿಸಲಾಗಿಲ್ಲ. ಈ ನಡುವೆ ಇಂದು ಸ್ಥಳಕ್ಕೆ ಭೇಟಿ ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, "ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ತನಿಖೆ ನಡೆಯುತ್ತಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ"ಎಂದು ಆಶ್ವಾಸನೆ ನೀಡಿದ್ದಾರೆ. ಅಲ್ಲದೆ, ಅಧಿಕಾರಿಗಳೂ ಸೂಚನೆ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಈ ಕುರಿತು ಮಾತನಾಡಿರುವ ಬಸವರಾಜ ಬೊಮ್ಮಾಯಿ, "ರಾಸಾಯನಿಕ ಕಾರ್ಖಾನೆ ಅಗ್ನಿ ಅವಘಡ ಸಂಭವಿಸಿದೆ. ಸುಲಭವಾಗಿ ಬೆಂಕಿ ಹತ್ತುವ ರಾಸಾಯನಿಕಗಳು ಒಳಗೆ ಇದ್ದ ಕಾರಣ ಬೆಂಕಿ ಕಾಣಿಸಿಕೊಂಡಿದೆ. ಈ ಕಾರ್ಖಾನೆಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಘಟನೆಯಲ್ಲಿ ಬೆಂಕಿಯನ್ನು ಆರಿಸುವಾಗ 11 ಜನ ಅಗ್ನಿ ಶಾಮಕ ಸಿಬ್ಬಂದಿಗಳಿಗೂ ಗಾಯಗಳಾಗಿವೆ

ಮನೆಗಳು ಹೆಚ್ಚಿರುವ ಜನನಿಬಿಡ ಪ್ರದೇಶದಲ್ಲಿ ಇಂಥಾ ಕಾರ್ಖಾನೆ ಇರಕೂಡದು. ಈ ರೇಖಾ ಗೋದಾಮನ್ನು ಸಂಪೂರ್ಣವಾಗಿ ಮುಚ್ಚಿಸಲಾಗುತ್ತೆ. ಫ್ಯಾಕ್ಟರಿಯ ಮಾಲಕರದ್ದು ದೊಡ್ಡ ತಪ್ಪಿದೆ. ಅವರ ಪರವಾನಗೆ ಇರುವುದು ಬೇರೆ ಕಡೆ. ಆದರೆ, ಇಲ್ಲಿನ‌ ಗೋದಾಮಿಗೆ ಯಾವುದೇ ಪರಾವನಗಿ ಇಲ್ಲ. ಹೀಗಾಗಿ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮೂರು ಜನರ ಮೇಲೆ ದೂರು‌ ದಾಖಲಿಸಿಕೊಳ್ಳಲಾಗಿದೆ. ಸಜ್ಜನ್ ರಾಜ್, ಪತ್ನಿ ಕಮಲ ಹಾಗೂ ಮಗ ಅನಿಲ್ ಕುಮಾರ್ ನ ಮೇಲೆ ಎಫ್ ಐಆರ್ ದಾಖಲಿಸಕೊಳ್ಳಲಾಗಿದೆ. ಎಕ್ಸೋಪ್ಲಿಸಿವ್ ಆ್ಯಕ್ಟ್ ನಲ್ಲಿ ದೂರು ದಾಖಲಿಸಿಕೊಳ್ಳಾಗಿದ್ದು ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Bangalore Fire Accident: ಬೆಂಗಳೂರಿನ ಕೆಮಿಕಲ್ ಫ್ಯಾಕ್ಟರಿ ಸ್ಫೋಟ; 20 ಗಂಟೆಯಾದರೂ ಗೋಡೌನ್​ನಲ್ಲಿ ಆರಿಲ್ಲ ಬೆಂಕಿ

ಅಲ್ಲದೆ, "ಈ ಪ್ರಕರಣದಲ್ಲಿ ತಪ್ಪು ಮಾಡಿದ್ದಲ್ಲಿ ಬಿಬಿಎಂಪಿ ಅಧಿಕಾರಿಗಳ ಮೇಲೂ ಕ್ರ‌ಮ ಜರುಗಿಸಲಿದ್ದೇವೆ. ಈ ರೀತಿಯಾದ ಘಟನೆ ಇನ್ನು ನಗರದಲ್ಲಿ ನಡೆಯಬಾರದು. ಈ ರೀತಿಯಾದ ಕಾರ್ಖಾನೆಗಳು ನಗರದ ಬೇರೆ ಎಲ್ಲೆಲ್ಲಿದೆ ಅವೆಲ್ಲವನ್ನೂ ಮುಚ್ಚಿಸಲು ಸೂಚಿಸಲಾಗಿದೆ. ಪೀಣ್ಯ, ಕಾಮಾಕ್ಷಿಪಾಳ್ಯ, ಬೊಮ್ಮಸಂಧ್ರ ಮುಂದಾದ ಕಡೆಯೂ ಈ ರೀತಿಯಾದ ಕಾರ್ಖಾನೆ ಇರುವುದು ಗಮನಕ್ಕೆ ಬಂದಿದೆ ಅದರ ಬಗ್ಗೆ ವಿಚಾರಿಸಿ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅಲ್ಲದೆ, ಇದೇ ಸಂದರ್ಭದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳ ಕಾರ್ಯ ವೈಖರಿಗೂ ಮೆಚ್ಚುಗೆ ಸೂಚಿಸಿದ್ದಾರೆ.
Youtube Video

ಲೋಕಲ್ ಆಗಿ ಸ್ಯಾನಿಟೈಸರ್ ಹಾಗೂ ಪೈಂಟ್ ರಿಮೂವಲ್ ಕೆಮಿಕಲ್ ಅನ್ನು ತಯಾರಿಸುತ್ತಿದ್ದ ಕಂಪನಿ ಇದಾಗಿದ್ದು, ಈ ಘಟನೆ ನಡೆಯುತ್ತಿದ್ದಂತೆ ಮಾಲೀಕ ನಾಪತ್ತೆಯಾಗಿದ್ದಾರೆ. ಸ್ಯಾನಿಟೈಸರ್ ಮತ್ತು ಹ್ಯಾಂಡ್ ವಾಶ್ ಗೆ ಬಳಸುವ ಕೆಮಿಕಲ್ ಬ್ಯಾರಲ್ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ. ಈ ಘಟನೆ ನಡೆದಾಗ ರೇಖಾ ಕೆಮಿಕಲ್ಸ್​ ಫ್ಯಾಕ್ಟರಿಯಲ್ಲಿ ಪೇಂಟಿಂಗ್​ಗೆ ಬಳಸುವ 1800 ಕ್ಯಾನ್ ಇತ್ತು. ಆ ಕ್ಯಾನ್​ಗಳು ಒಂದಕ್ಕೊಂದು ಸ್ಪೋಟಗೊಂಡು ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
Published by: MAshok Kumar
First published: November 11, 2020, 4:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories