Fire at HAL: ಬೆಂಗಳೂರಿನ ಎಚ್ಎಎಲ್​ನಲ್ಲಿ ಬೆಂಕಿ ಅವಘಡ, ಆಂತರಿಕ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

Bangalore Fire: ಸ್ಕ್ರ್ಯಾಪ್ ಸೆಕ್ಷನ್​ನಲ್ಲಿ ಬೆಂಕಿ ಹೊತ್ತುಕೊಂಡಿತ್ತು. ಹೆಚ್​ಎಎಲ್​ನ ಅಗ್ನಿಶಾಮಕ ಮತ್ತು ಭದ್ರತಾ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ.

news18
Updated:April 29, 2020, 3:57 PM IST
Fire at HAL: ಬೆಂಗಳೂರಿನ ಎಚ್ಎಎಲ್​ನಲ್ಲಿ ಬೆಂಕಿ ಅವಘಡ, ಆಂತರಿಕ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ
ಹೆಚ್​ಎಎಲ್​ನಲ್ಲಿ ಅಗ್ನಿ ಅವಘಡ
  • News18
  • Last Updated: April 29, 2020, 3:57 PM IST
  • Share this:
ಬೆಂಗಳೂರು(ಏ. 29): ಲಾಕ್ ಡೌನ್ ಮಧ್ಯೆ ನಿನ್ನೆಯಿಂದ ಪುನಾರಂಭಗೊಂಡಿದ್ದ ಹೆಚ್​ಎಎಲ್ ಕಾರ್ಖಾನೆಯಲ್ಲಿ ಇವತ್ತು ಬೆಂಕಿ ಅವಘಡ ಸಂಭವಿಸಿದೆ. ಓಲ್ಡ್ ಏರ್​ಪೋರ್ಟ್ ರಸ್ತೆಯಲ್ಲಿರುವ ಹೆಚ್​ಎಎಲ್​ನ ಫೌಂಡ್ರಿ ಮತ್ತು ಫೋರ್ಜ್ ವಿಭಾಗದಲ್ಲಿ ಬೆಂಕಿಜ್ವಾಲೆ ಹರಡಿತೆನ್ನಲಾಗಿದೆ. ಇವತ್ತು ಬೆಳಗ್ಗೆ 9:30ಕ್ಕೆ ಸಂಭವಿಸಿದ ಈ ದುರಂತದಲ್ಲಿ ಅದೃಷ್ಯಕ್ಕೆ ಯಾವುದೇ ಪ್ರಾಣಾಪಾಯವಾಗಿಲ್ಲ. ಬೆಂಕಿ ತಗುಲಲು ಕಾರಣ ಇನ್ನೂ ಗೊತ್ತಾಗಿಲ್ಲ.

ಸ್ಕ್ರ್ಯಾಪ್ ಸೆಕ್ಷನ್​ನಲ್ಲಿ ಬೆಂಕಿ ಹೊತ್ತುಕೊಂಡಿತ್ತು. ಹೆಚ್​ಎಎಲ್​ನ ಅಗ್ನಿಶಾಮಕ ಮತ್ತು ಭದ್ರತಾ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಅವಘಡ ಸಂಭವಿಸಿದಾಗ ಕಾರ್ಖಾನೆಯಲ್ಲಿ ಯಾವ ಸಿಬ್ಬಂದಿಯೂ ಇರಲಿಲ್ಲ ಎಂದು ಹೆಚ್​ಎಎಲ್ ಸಂಸ್ಥೆ ಹೇಳಿದೆ.

ಇದನ್ನೂ ಓದಿ: ಭಾರತದ ರಾಷ್ಟ್ರಪತಿ, ಪಿಎಂಓ ಮತ್ತು ಮೋದಿಯನ್ನು ಅನ್ ಫಾಲೋ ಮಾಡಿದ ಶ್ವೇತಭವನ

ಹೆಚ್​ಎಎಲ್​ನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದ ದೃಶ್ಯ ಕಂಡು ಸುತ್ತಮುತ್ತಲ ಪ್ರದೇಶದ ಜನರು ಬೆಚ್ಚಿಬಿದ್ದಿದ್ದಾರೆ. ತಮಗೆ ನಾಲ್ಕೈದು ಸ್ಫೋಟಗಳ ಸದ್ದು ಕೇಳಿಸಿತು. ಆ ಬಳಿಕ ಹೆಚ್​ಎಎಲ್​ನಲ್ಲಿ ಅಗ್ನಿಜ್ವಾಲೆ ಬೃಹತ್ತಾಗಿ ಕಾಣಿಸಿತು. ಬೆಂಕಿಯು ದಟ್ಟ ಹೊಗೆಯ ಕಾರ್ಮೋಡವನ್ನೇ ಸೃಷ್ಟಿಸಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಭಾರತೀಯ ರಕ್ಷಣಾ ಪಡೆಗೆ ಉಪಕರಣಗಳನ್ನ ಉತ್ಪಾದಿಸಿ ಸರಬರಾಜು ಮಾಡುವ ಹೆಚ್​ಎಎಲ್, ಬಿಇಎಲ್ ಮತ್ತು ಬೆಮೆಲ್ ಸಂಸ್ಥೆಗಳು ನಿನ್ನೆಯಿಂದ ಕಾರ್ಯಾಚರಣೆ ಮರುಪ್ರಾರಂಭಿಸಿದ್ದರು. ಮಾರ್ಚ್ 24ರಿಂದ ಸ್ಥಗಿತಗೊಂಡಿದ್ದ ಈ ಮೂರು ಸಂಸ್ಥೆಗಳು ಬೆಂಗಳೂರಿನಲ್ಲೇ ಇವೆ.

First published: April 29, 2020, 2:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading