ಬೆಂಗಳೂರಿನ ಪೆಟ್ರೋಲ್​ ಬಂಕ್​ನಲ್ಲಿ ನಡುರಾತ್ರಿ ಹೊತ್ತಿ ಉರಿದ ಬಸ್​; ತಪ್ಪಿದ ಭಾರೀ ಅನಾಹುತ

Bengaluru Accident: ಬುಧವಾರ ರಾತ್ರಿ 11 ಗಂಟೆಗೆ ಬೆಂಗಳೂರಿನ ಮಡಿವಾಳದ ಭಾರತ್ ಪೆಟ್ರೋಲ್ ಬಂಕ್​ಗೆ ಡೀಸೆಲ್ ಹಾಕಿಸಿಕೊಳ್ಳಲು ಬಂದಿದ್ದ ಚಾಲಕ ಬಸ್​​ ಸ್ಟಾರ್ಟ್​ ಮಾಡುತ್ತಿದ್ದಂತೆ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

news18-kannada
Updated:January 30, 2020, 8:21 AM IST
ಬೆಂಗಳೂರಿನ ಪೆಟ್ರೋಲ್​ ಬಂಕ್​ನಲ್ಲಿ ನಡುರಾತ್ರಿ ಹೊತ್ತಿ ಉರಿದ ಬಸ್​; ತಪ್ಪಿದ ಭಾರೀ ಅನಾಹುತ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜ. 30): ಪೆಟ್ರೋಲ್​ ಬಂಕ್​ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದ ಬಸ್​ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಘಟನೆ ಬೆಂಗಳೂರಿನ ಮಡಿವಾಳದಲ್ಲಿ ನಡೆದಿದೆ. ಬುಧವಾರ ನಡುರಾತ್ರಿ ಈ ಘಟನೆ ಸಂಭವಿಸಿದ್ದು, ಪ್ರಯಾಣಿಕರೆಲ್ಲರೂ ಆತುರಾತುರವಾಗಿ ಕೆಳಗೆ ಇಳಿದ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ.

34 ಜನರು ಪ್ರಯಾಣಿಸುತ್ತಿದ್ದ ಎಂಎಸ್​ಎಸ್​ ಎಂಬ ಖಾಸಗಿ ಬಸ್​ ಬೆಂಗಳೂರಿನಿಂದ ಕೊಯಮತ್ತೂರಿಗೆ ಹೊರಟಿತ್ತು. ಬುಧವಾರ ರಾತ್ರಿ 11 ಗಂಟೆಗೆ ಮಡಿವಾಳದ ಭಾರತ್ ಪೆಟ್ರೋಲ್ ಬಂಕ್​ಗೆ ಡೀಸೆಲ್ ಹಾಕಿಸಿಕೊಳ್ಳಲು ಬಂದಿದ್ದ ಚಾಲಕ ಬಸ್​​ ಸ್ಟಾರ್ಟ್​ ಮಾಡುತ್ತಿದ್ದಂತೆ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಬಸ್ ಚಾಲಕ ಎಲ್ಲ ಪ್ರಯಾಣಿಕರಿಗೂ ಇಳಿಯುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: 15 ಲಕ್ಷ ರೂ. ವ್ಯಯಿಸಿ ಖಾಸಗಿ ಕಾರ್ಯಕ್ರಮಕ್ಕೆ ಪ್ರತ್ಯೇಕ ಹೆಲಿಕಾಪ್ಟರ್​ಗಳಲ್ಲಿ ಬಂದ ಇಬ್ಬರು ಸಚಿವರು!

ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಬಸ್​ನಲ್ಲಿದ್ದ ಎಲ್ಲರೂ ಆತುರಾತುರವಾಗಿ ಬಸ್​ನಿಂದ ಕೆಳಗೆ ಇಳಿದಿದ್ದಾರೆ. ಬಸ್​ನಲ್ಲಿ ಒಟ್ಟು 34 ಪ್ರಯಾಣಿಕರಿದ್ದರು.ಪ್ರಯಾಣಿಕರೆಲ್ಲರೂ ಬಸ್​ನಿಂದ ಇಳಿಯುತ್ತಿದ್ದಂತೆ ಬಸ್ ಜೋರಾಗಿ ಹೊತ್ತಿ ಉರಿದಿದೆ. ಭಾರತ್ ಪೆಟ್ರೋಲ್ ಬಂಕ್ ಒಳಗೇ ಬಸ್​ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
First published: January 30, 2020, 8:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading