Bangalore Fire Accident: ಬೆಂಗಳೂರಿನ ಕೆಮಿಕಲ್ ಫ್ಯಾಕ್ಟರಿ ಗೋಡೌನ್ ಸ್ಫೋಟಕ್ಕೆ ಕಾರಣವಾಯ್ತು ಮಾಲೀಕನ ಆ ಒಂದು ತಪ್ಪು!
Bangalore Fire Accident: ಬಾಪೂಜಿನಗರದಲ್ಲಿ ದೊಡ್ಡ ಕೆಮಿಕಲ್ ಗೋಡೌನ್ ಇದ್ದರೂ ಮಾಲೀಕ ಸಜ್ಜನ್ ರಾವ್ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಕೆಮಿಕಲ್ ಅನ್ನು ಅವೈಜ್ಞಾನಿಕವಾಗಿ ಪೈಪ್ ಮೂಲಕ ಅನ್ಲೋಡ್ ಮಾಡಿಸುತ್ತಿದ್ದ ವೇಳೆ ನಿನ್ನೆ ಬೆಂಕಿ ಕಾಣಿಸಿಕೊಂಡು, ಸ್ಫೋಟವಾಗಿತ್ತು.
ಬೆಂಗಳೂರಿನ ಕೆಮಿಕಲ್ ಫ್ಯಾಕ್ಟರಿ ಗೋಡೌನ್ನಲ್ಲಿ ಬೆಂಕಿ ಅವಘಡ
ಬೆಂಗಳೂರು (ನ. 11): ಬೆಂಗಳೂರಿನ ಬಾಪೂಜಿನಗರದ ಹೊಸಗುಡ್ಡದಹಳ್ಳಿಯಲ್ಲಿರುವ ರೇಖಾ ಕೆಮಿಕಲ್ ಫ್ಯಾಕ್ಟರಿಯ ಗೋಡೌನ್ನಲ್ಲಿ ನಿನ್ನೆ ಬೆಂಕಿ ಅವಘಡ ನಡೆದಿದೆ. ಇದರಿಂದ ಅಕ್ಕಪಕ್ಕದ ಫ್ಯಾಕ್ಟರಿ, ಮನೆಗಳು ಸುಟ್ಟು ಕರಕಲಾಗಿವೆ. ಈ ದುರಂತಕ್ಕೆ ಮಾಲೀಕ ಸಜ್ಜನ್ ರಾಜ್ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಕೆಮಿಕಲ್ ಫ್ಯಾಕ್ಟರಿಯ ಗೋಡೌನ್ನಲ್ಲಿ ಯಾವುದೇ ಮುನ್ನೆಚ್ಚರಿಕಾ ಕ್ರಮಗಳು ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸದ ಕಾರಣದಿಂದ ಬೆಂಕಿ ದುರಂತ ಸಂಭವಿಸಿದೆ ಎನ್ನಲಾಗಿದೆ. ಹಾಗಿದ್ದರೆ ನಿನ್ನೆ ಆ ಫ್ಯಾಕ್ಟರಿಯಲ್ಲಿ ನಿಜಕ್ಕೂ ನಡೆದಿದ್ದಾರೂ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ...
ರೇಖಾ ಕೆಮಿಕಲ್ ಫ್ಯಾಕ್ಟರಿಯ ಮಾಲೀಕ ಸಜ್ಜನ್ ರಾಜ್ ಹಾಗೂ ಕಮಲ ಇಬ್ಬರೂ ನಾಪತ್ತೆಯಾಗಿದ್ದಾರೆ. ಹೆಂಡತಿ ಹೆಸರಿನಲ್ಲಿ ಬೊಮ್ಮಸಂದ್ರದ ರೇಖಾ ಕೆಮಿಕಲ್ ಇಂಡಸ್ಟ್ರಿ ಹೆಸರಿನಲ್ಲಿ ಪರವಾನಗಿ ಪಡೆದುಕೊಂಡಿದ್ದ ಸಜ್ಜನ್ ರಾಜ್ ಹೊಸಗುಡ್ಡದಹಳ್ಳಿಯ ಗೋದಾಮಿನಲ್ಲಿ ಕೆಮಿಕಲ್ ಸಂಗ್ರಹ ಮಾಡಲು ಅನುಮತಿ ಪಡೆಯದೆ ಅಕ್ರಮವಾಗಿ ಸಂಗ್ರಹ ಮಾಡಿದ್ದ. ನಿನ್ನೆ ಬೆಳಗ್ಗೆ ಲಾರಿಯಲ್ಲಿನ ಬ್ಯಾರಲ್ ನಿಂದ ಕೆಮಿಕಲ್ಸ್ ಅನ್ನು ಪೈಪ್ ಮೂಲಕ ನಾಲ್ವರು ಕಾರ್ಮಿಕರು ಅನ್ಲೋಡ್ ಮಾಡುತ್ತಿದ್ದಾಗ ಕಿಡಿ ಹೊತ್ತಿಕೊಂಡು ಬೆಂಕಿ ಆವರಿಸಿತ್ತು. ಸಿಗರೇಟ್ ಅಥವಾ ಬೀಡಿ ಬಿಸಾಡಿರೋ ಶಂಕೆಯಿದ್ದು ತನಿಖೆ ನಡೆಸಲಾಗುತ್ತಿದೆ. ಈ ಘಟನೆ ನಡೆಯುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮಾಲೀಕರು ಎಸ್ಕೇಪ್ ಆಗಿದ್ದಾರೆ.
ಕೆಮಿಕಲ್ ಫ್ಯಾಕ್ಟರಿ ಮಾಲೀಕ ಸಜ್ಜನ್ರಾಜ್ ತನ್ನ ಪತ್ನಿ ಕಮಲಾ ಹೆಸರಿನಲ್ಲಿ ಪರವಾನಗಿ ಪಡೆದಿದ್ದರು. ಬೊಮ್ಮಸಂದ್ರದ ರೇಖಾ ಕೆಮಿಕಲ್ ಇಂಡಸ್ಟ್ರಿ ಹೆಸರಿನಲ್ಲಿ ಪರವಾನಗಿ ಇದೆ. ಆದರೆ, ಹೊಸಗುಡ್ಡದಹಳ್ಳಿಯ ಗೋದಾಮಿನಲ್ಲಿ ಕೆಮಿಕಲ್ ಸಂಗ್ರಹ ಮಾಡಲು ಅನುಮತಿ ಪಡೆದಿರಲಿಲ್ಲ. ನಿನ್ನೆ ಬೆಳಗ್ಗೆ ಚಾಮರಾಜಪೇಟೆಯ ಉಮಾ ಟಾಕೀಸ್ ಬಳಿಯ ಗೋದಾಮಿನಿಂದ ಕೆಮಿಕಲ್ ತುಂಬಿದ್ದ ಬ್ಯಾರಲ್ ತಂದಿದ್ದರು. ಹೀಗೆ ಕೆಮಿಕಲ್ ಅನ್ನು ಹೊಸಗುಡ್ಡದಹಳ್ಳಿಯ ಗೋದಾಮಿನಲ್ಲಿ ಶೇಖರಿಸಿ ಇಡುವಾಗ ಸ್ಪೋಟ ಆಗಿತ್ತು. ಸುಮಾರು 1,000 ಬ್ಯಾರಲ್ ಗಳನ್ನು ಮುಂಜಾನೆ ತಗೊಂಡು ಹೋಗಿದ್ದರು. ಸದ್ಯ ಪೊಲೀಸರು ಕೇಸ್ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಅಷ್ಟು ದೊಡ್ಡ ಕೆಮಿಕಲ್ ಗೋಡೌನ್ ಇದ್ದರೂ ಮಾಲೀಕ ಸಜ್ಜನ್ ರಾವ್ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಯಾವುದೇ ಸೇಫ್ಟಿ ಉಪಕರಣಗಳನ್ನೂ ಇಟ್ಟುಕೊಳ್ಳದೆ ಗೋಡೌನ್ ನಡೆಸುತ್ತಿದ್ದ. ಕೆಮಿಕಲ್ ಅನ್ನು ಅವೈಜ್ಞಾನಿಕವಾಗಿ ಪೈಪ್ ಮೂಲಕ ಅನ್ ಲೋಡಿಂಗ್ ಮಾಡಿಸುತ್ತಿದ್ದ. ನಿನ್ನೆ ಅನ್ಲೋಡಿಂಗ್ ವೇಳೆ ಬೆಂಕಿಯ ಕಿಡಿ ಕಾಣಿಸಿಕೊಂಡಿತ್ತು. ಗೋಡೌನ್ನ ತಳ ಮಹಡಿಯಲ್ಲಿ ಅವಧಿ ಮುಗಿದ ಕೆಲ ಓಲ್ಡ್ ಕೆಮಿಕಲ್ ಬ್ಯಾರಲ್ಗಳನ್ನು ಇರಿಸಲಾಗಿತ್ತು. ಅವುಗಳು ಕೂಡ ನಿನ್ನೆ ಸಂಜೆಯ ವೇಳೆಗೆ ಸ್ಫೋಟಗೊಂಡಿದ್ದವು.
ಕೆಮಿಕಲ್ ಫ್ಯಾಕ್ಟರಿಯ ಗೋಡೌನ್ ಪಕ್ಕದಲ್ಲಿರುವ ಮೂರು ಮನೆಗಳಿಗೆ ಹಾನಿಯಾಗಿದೆ. 10 ಬಿಲ್ಡಿಂಗ್ ನಲ್ಲಿ ವಾಸವಿದ್ದ ಹದಿನೈದಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಪ್ರಮುಖವಾಗಿ ಗೋಡೌನ್ ಹಿಂಭಾಗದಲ್ಲಿದ್ದ ಮೂರು ಮನೆ ಸಂಪೂರ್ಣ ಹಾನಿಯಾಗಿವೆ. ಎರಡು ಮನೆಗೆ ಬೆಂಕಿಯ ತೀವ್ರತೆಗೆ ಹೊಗೆ ತಗುಲಿದ್ದು ಬಣ್ಣ ಪೂರ್ತಿ ಕಪ್ಪಾಗಿದೆ. ಹೊಸ ಗುಡ್ಡದಹಳ್ಳಿಯ ಗೋಡೌನ್ ಪ್ರದೇಶದ ಏರಿಯಾ ಅರ್ಧ ರೆಸಿಡೆನ್ಸಿಯಲ್ ಏರಿಯಾವಿದ್ದು, ರಸ್ತೆಯ ಡೆಡ್ ಎಂಡ್ ಗೆ ಕೆಮಿಕಲ್ ಫ್ಯಾಕ್ಟರಿ ಮತ್ತು ಪ್ಲಾಸ್ಟಿಕ್ ಫ್ಯಾಕ್ಟರಿ ಇದೆ. ಸದ್ಯ ಪಕ್ಕದಲ್ಲಿರೋ ಪ್ಲಾಸ್ಟಿಕ್ ಫ್ಯಾಕ್ಟರಿಯೂ ಸಂಪೂರ್ಣ ಭಸ್ಮವಾಗಿದೆ.
ಈ ಘಟನೆ ನಡೆದಾಗ ರೇಖಾ ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ಪೇಂಟಿಂಗ್ಗೆ ಬಳಸುವ 1800 ಕ್ಯಾನ್ ಇತ್ತು. ಆ ಕ್ಯಾನ್ಗಳು ಒಂದಕ್ಕೊಂದು ಸ್ಪೋಟಗೊಂಡು ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಈ ಅವಘಡದಲ್ಲಿ 8 ವಾಹನಗಳಿಗೆ ಸುಟ್ಟು ಕರಕಲಾಗಿವೆ. ಇಂದು ಬೆಳಗ್ಗೆಯಿಂದ ಮತ್ತೆ ಬೆಂಕಿ ನಂದಿಸಲು ಕಾರ್ಯಾಚರಣೆ ಶುರು ಮಾಡಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಗೋಡೌನ್ ತಳ ಭಾಗದಲ್ಲಿ ಬೆಂಕಿ ಉರಿಯುತ್ತಿದ್ದು, ನಂದಿಸುವ ಕಾರ್ಯ ನಡೆಸಲಾಗುತ್ತಿದೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ