Bangalore Fire Accident: ಬೆಂಗಳೂರು ಕೆಮಿಕಲ್ ಫ್ಯಾಕ್ಟರಿ ಗೋಡೌನ್ ಬೆಂಕಿ ಅವಘಡ; ಮಾಲೀಕ ಸಜ್ಜನ್​ ರಾಜ್ ಬಂಧನ

Bangalore Fire Accident: ಬಾಪೂಜಿನಗರದ ರೇಖಾ ಕೆಮಿಕಲ್ ಫ್ಯಾಕ್ಟರಿ ಗೋಡೌನ್​ನಲ್ಲಿ ನಡೆದ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಫ್ಯಾಕ್ಟರಿ ಮಾಲೀಕರಾದ ಸಜ್ಜನ್​ ರಾಜ್, ಅವರ ಹೆಂಡತಿ ಕಮಲಾ, ಮಗ ಅನಿಲ್​ನನ್ನು ಬಂಧಿಸಲಾಗಿದೆ.

ಸಜ್ಜನ್ ರಾಜ್, ಪತ್ನಿ ಕಮಲ

ಸಜ್ಜನ್ ರಾಜ್, ಪತ್ನಿ ಕಮಲ

  • Share this:
ಬೆಂಗಳೂರು (ನ. 12): ಬೆಂಗಳೂರಿನ ಬಾಪೂಜಿನಗರದ ಹೊಸಗುಡ್ಡದಹಳ್ಳಿಯಲ್ಲಿರುವ ರೇಖಾ ಕೆಮಿಕಲ್ ಫ್ಯಾಕ್ಟರಿ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಫ್ಯಾಕ್ಟರಿ ಮಾಲೀಕ ಸಜ್ಜನ್​ ರಾಜ್ ವಿರುದ್ಧ 2 ಎಫ್​ಐಆರ್​ ದಾಖಲಾಗಿರುವುದರಿಂದ ಫ್ಯಾಕ್ಟರಿ ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದ ಬಳಿಕ ಮೊಬೈಲ್ ಸ್ವಿಚ್​ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ ಫ್ಯಾಕ್ಟರಿ ಮಾಲೀಕ ಸಜ್ಜನ್​ ರಾಜ್ ಮತ್ತು ಪತ್ನಿ ಕಮಲಾ ಅವರನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ.

ಬೆಂಗಳೂರಿನ ಶಂಕರಪುರಂನಲ್ಲಿರುವ ಆರೋಪಿಗಳ ಮನೆಯಲ್ಲೇ ಅವರನ್ನು ಬಂಧಿಸಲಾಗಿದೆ. ಜೊತೆಗೆ ಸಜ್ಜನ್​ ರಾಜ್ ಅವರ ಮಗ ಅನಿಲ್​ನನ್ನು ಕೂಡ ಬಂಧಿಸಲಾಗಿದೆ. ಬಿಬಿಎಂಪಿ, ಫೈರ್ ಮತ್ತು ಎಮರ್ಜೆನ್ಸಿ ಸರ್ವಿಸ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಇಲ್ಲದೆ ಹಲವು ವರ್ಷಗಳಿಂದ ಗೋದಾಮು ನಡೆಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಸಜ್ಜನ್​ ರಾಜ್ ಅವರ ಮಗ ಅನಿಲ್ ಕುಮಾರ್ ಫ್ಯಾಕ್ಟರಿಯ ವ್ಯವಹಾರ ನೋಡಿಕೊಳ್ಳುತ್ತಿದ್ದ. ಹೀಗಾಗಿ, ಆತನನ್ನು ಕೂಡ ಬಂಧಿಸಲಾಗಿದೆ.



ಈ ಬೆಂಕಿ ಅವಘಡ ನಡೆಯುತ್ತಿದ್ದಂತೆ ರೇಖಾ ಕೆಮಿಕಲ್ ಫ್ಯಾಕ್ಟರಿಯ ಮಾಲೀಕ ಸಜ್ಜನ್ ರಾಜ್‌ ಹಾಗೂ ಕಮಲ ಇಬ್ಬರೂ ನಾಪತ್ತೆಯಾಗಿದ್ದರು. ಹೆಂಡತಿ ಹೆಸರಿನಲ್ಲಿ ಬೊಮ್ಮಸಂದ್ರದ ರೇಖಾ ಕೆಮಿಕಲ್ ಇಂಡಸ್ಟ್ರಿ ಹೆಸರಿನಲ್ಲಿ ಪರವಾನಗಿ‌ ಪಡೆದುಕೊಂಡಿದ್ದ ಸಜ್ಜನ್ ರಾಜ್ ಹೊಸಗುಡ್ಡದಹಳ್ಳಿಯ ಗೋದಾಮಿನಲ್ಲಿ ಕೆಮಿಕಲ್ ಸಂಗ್ರಹ ಮಾಡಲು ಅನುಮತಿ ಪಡೆಯದೆ ಅಕ್ರಮವಾಗಿ ಸಂಗ್ರಹ ಮಾಡಿದ್ದ. ನಿನ್ನೆ ಬೆಳಗ್ಗೆ ಲಾರಿಯಲ್ಲಿನ ಬ್ಯಾರಲ್ ನಿಂದ ಕೆಮಿಕಲ್ಸ್​ ಅನ್ನು ಪೈಪ್ ಮೂಲಕ ನಾಲ್ವರು ಕಾರ್ಮಿಕರು ಅನ್​ಲೋಡ್ ಮಾಡುತ್ತಿದ್ದಾಗ ಕಿಡಿ ಹೊತ್ತಿಕೊಂಡು ಬೆಂಕಿ ಆವರಿಸಿತ್ತು.

ಕೆಮಿಕಲ್ ಫ್ಯಾಕ್ಟರಿ ಮಾಲೀಕ  ಸಜ್ಜನ್‌ರಾಜ್ ತನ್ನ ಪತ್ನಿ ಕಮಲಾ ಹೆಸರಿನಲ್ಲಿ ಪರವಾನಗಿ ಪಡೆದಿದ್ದರು. ಬೊಮ್ಮಸಂದ್ರದ ರೇಖಾ ಕೆಮಿಕಲ್ ಇಂಡಸ್ಟ್ರಿ ಹೆಸರಿನಲ್ಲಿ ಪರವಾನಗಿ‌ ಇದೆ. ಆದರೆ, ಹೊಸಗುಡ್ಡದಹಳ್ಳಿಯ ಗೋದಾಮಿನಲ್ಲಿ ಕೆಮಿಕಲ್ ಸಂಗ್ರಹ ಮಾಡಲು ಅನುಮತಿ ಪಡೆದಿರಲಿಲ್ಲ. ನಿನ್ನೆ ಬೆಳಗ್ಗೆ ಚಾಮರಾಜಪೇಟೆಯ ಉಮಾ ಟಾಕೀಸ್ ಬಳಿಯ ಗೋದಾಮಿನಿಂದ ಕೆಮಿಕಲ್ ತುಂಬಿದ್ದ ಬ್ಯಾರಲ್ ತಂದಿದ್ದರು. ಹೀಗೆ ಕೆಮಿಕಲ್​ ಅನ್ನು ಹೊಸಗುಡ್ಡದಹಳ್ಳಿಯ ಗೋದಾಮಿನಲ್ಲಿ ಶೇಖರಿಸಿ ಇಡುವಾಗ ಸ್ಪೋಟ ಆಗಿತ್ತು. ಸುಮಾರು 1,000 ಬ್ಯಾರಲ್ ಗಳನ್ನು ಮುಂಜಾನೆ ತಗೊಂಡು ಹೋಗಿದ್ದರು. ಅದನ್ನು ಅನ್​ಲೋಡ್ ಮಾಡುವಾಗ ಬೆಂಕಿ ಸ್ಫೋಟಗೊಂಡಿತ್ತು.
Published by:Sushma Chakre
First published: