news18-kannada Updated:November 11, 2020, 2:26 PM IST
ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್
ಬೆಂಗಳೂರು (ನ. 11): ಬಾಪೂಜಿನಗರದ ರೇಖಾ ಕೆಮಿಕಲ್ ಗೋಡೌನ್ ಅಗ್ನಿ ಅವಘಡ ಪ್ರಕರಣದಲ್ಲಿ ಬಿಬಿಎಂಪಿ ವೈಫಲ್ಯಯೂ ಇದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಒಪ್ಪಿಕೊಂಡಿದ್ದಾರೆ. ಬೆಸ್ಕಾಂ, ಮಾಲಿನ್ಯ ಮಂಡಳಿ, ಹೆಲ್ತ್ ಡಿಪಾರ್ಟ್ ಮೆಂಟ್ ಲೋಪವೂ ಇದೆ ಎಂದು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ಎರಡು ದಿನಗಳಲ್ಲಿ ಜಂಟಿ ಸರ್ವೆ ಮಾಡಿ ಇಂತಹ ಕ್ರಮಕ್ಕೆ ಬ್ರೇಕ್ ಹಾಕಲಾಗುತ್ತದೆ. ರೆಸಿಡೆನ್ಷಿಯಲ್ ಏರಿಯಾದಲ್ಲಿ ಇಂತಹ ಫ್ಯಾಕ್ಟರಿ ಇದ್ದರೆ ಅದನ್ನು ತೆರವು ಮಾಡಿಸುತ್ತೇವೆ. ನಷ್ಟ ಅನುಭವಿಸಿರುವ ಮನೆಗಳಿಗೆ ಫ್ಯಾಕ್ಟರಿ ಮಾಲೀಕರಿಂದಲೇ ಪರಿಹಾರ ಕೊಡಿಸಲಾಗುತ್ತದೆ. ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲೂ ಪರಿಹಾರ ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇಲ್ಲಿ ಪೆಟ್ರೋಲಿಯಂ ಪ್ರಾಡಕ್ಟ್ ಸ್ಟೋರೇಜ್ ಮಾಡಲು ಅನುಮತಿ ಇಲ್ಲ. ಬೊಮ್ಮಸಂದ್ರದಲ್ಲಿನ ಕೆಮಿಕಲ್ ಫ್ಯಾಕ್ಟರಿಗೆ ಮಾತ್ರ ಸರ್ಕಾರದಿಂದ ಅನುಮತಿ ನೀಡಲಾಗಿದೆ. ಬಾಪೂಜಿನಗರದಲ್ಲಿ ಸ್ಟೋರೇಜ್ ಮಾಡಲು ಅನುಮತಿಯೇ ಇರಲಿಲ್ಲ. ಯಾವುದೇ ಅನುಮತಿಯನ್ನು ರೆಸಿಡೆನ್ಶಿಯಲ್ ಏರಿಯಾದಲ್ಲಿ ಕೊಡಲಾಗುವುದಿಲ್ಲ. ಇದು ಸಂಪೂರ್ಣ ಅಕ್ರಮವಾಗಿದೆ. ಯಾವುದೇ ಅನುಮತಿ ಇಲ್ಲದೆ ಬಾಪೂಜಿನಗರದಲ್ಲಿ ಕೆಮಿಕಲ್ ಸಂಗ್ರಹ ಮಾಡಿದ್ದರು. ಫ್ಯಾಕ್ಟರಿಯ ಮಾಲೀಕರ ಮೇಲೆ ಈಗಾಗಲೇ ಕ್ರಿಮಿನಲ್ ಕೇಸ್ ಬುಕ್ ಮಾಡಿದ್ದೇವೆ. ರೆಸಿಡೆನ್ಷಿಯಲ್ ಏರಿಯಾದಲ್ಲಿ ಇಂತಹ ಚಟುವಟಿಕೆಗೆ ಅವಕಾಶ ಇರುವುದಿಲ್ಲ. ಇಂತಹ ಇಂಡಸ್ಟ್ರಿ ವಿರುದ್ಧ ಬೆಸ್ಕಾಂನಿಂದಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಕೆಮಿಕಲ್ ಫ್ಯಾಕ್ಟರಿ ಅಗ್ನಿ ಅವಘಡದ ಸಮಗ್ರ ತನಿಖೆ; ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆದೇಶ
ಇಂತಹ ಕೆಮಿಕಲ್ ಫ್ಯಾಕ್ಟರಿಗಳ ಪವರ್ ಡಿಸ್ಕನೆಕ್ಟ್ ಮಾಡಲಾಗುತ್ತದೆ. ರೆಸಿಡೆನ್ಷಿಯಲ್ ಏರಿಯಾದಲ್ಲಿ ಇಂತಹ ಫ್ಯಾಕ್ಟರಿಗೆ ಕಟ್ಟಡ ಬಾಡಿಗೆ ಕೊಡೋ ಮಾಲೀಕರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ. ಒಂದುವೇಳೆ ಬಿಬಿಎಂಪಿ ಅಧಿಕಾರಿಗಳ ವೈಫಲ್ಯ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನ ಬಾಪೂಜಿನಗರ ಹೊಸಗುಡ್ಡದಹಳ್ಳಿಯ ಕೆಮಿಕಲ್ ಫ್ಯಾಕ್ಟರಿಯ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಇಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫ್ಯಾಕ್ಟರಿ ನಿರ್ಮಿಸಲು ಬಿಬಿಎಂಪಿ, ಫೈರ್ ಡಿಪಾರ್ಟ್ಮೆಂಟ್ ಹಾಗೂ ಇತರೆ ಇಲಾಖೆಯಿಂದ ಅನುಮತಿ ತೆಗೆದುಕೊಂಡಿದ್ದರಾ? ಎಂಬಿತ್ಯಾದಿ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದೇನೆ. ಒಂದುವೇಳೆ ಅಧಿಕಾರಿಗಳು ಲೋಪ ಮಾಡಿದ್ದಾರೆ ಎಂದು ಗೊತ್ತಾದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇನೆ. ಯಾವುದೇ ಅಧಿಕಾರಿ ಲಾಭಕ್ಕಾಗಿ ಅನುಮತಿ ನೀಡಿದ್ದರೆ ಅಂತಹ ಅಧಿಕಾರಿ ವಿರುದ್ಧವೂ ಕ್ರಮ ಕೈಗೊಳ್ಳುತ್ತೇನೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
Published by:
Sushma Chakre
First published:
November 11, 2020, 2:25 PM IST