HOME » NEWS » State » BANGALORE DRUG MAFIA CCB POLICE SEIZES DRUG WORTH RS 1 CRORE KMTV HK

Drug Mafia: ಸಿಸಿಬಿ ಪೊಲೀಸರ ಕಾರ್ಯಾಚರಣೆ ; 1 ಕೋಟಿ ಮೌಲ್ಯದ ಡ್ರಗ್ಸ್​ ವಶ, ನಾಲ್ವರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳಿಂದ ಬರೋಬ್ಬರಿ 1.15 ಕೋಟಿ ಮೌಲ್ಯದ ಹ್ಯಾಶಿಶ್ ಆಯಿಲ್ ಮತ್ತು ಗಾಂಜಾವನ್ನ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ

news18-kannada
Updated:December 16, 2020, 11:20 PM IST
Drug Mafia: ಸಿಸಿಬಿ ಪೊಲೀಸರ ಕಾರ್ಯಾಚರಣೆ ; 1 ಕೋಟಿ ಮೌಲ್ಯದ ಡ್ರಗ್ಸ್​ ವಶ, ನಾಲ್ವರು ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಡಿಸೆಂಬರ್​. 16): ಹೊಸ ವರ್ಷದ ಸಂಭ್ರಮಾಚರಣೆಗೆ ಇನ್ನೂ ಕೆಲವು ದಿನಗಳಷ್ಟೆ ಬಾಕಿ ಇದೆ. ಕೊರೋನಾ ಹಾವಳಿಯಿಂದ ಈ ಬಾರಿ ಹೊಸ ವರ್ಷ ಆಚರಣೆಗೆ ಸರ್ಕಾರ ಬ್ರೇಕ್ ಹಾಕಲು ಮುಂದಾಗಿದೆ. ಆದರೆ ಕೊರೋನಾ ಸಂಕಷ್ಟದ ನಡುವೆಯೂ ಮಾದಕವಸ್ತು ದಂಗೆಕೋರರು ನ್ಯೂ ಇಯರ್ ವೇಳೆ ನಶೆ ಏರಿಸಲು ಸಖತ್ ಸಿದ್ದತೆ ಮಾಡಿಕೊಂಡು ಈಗ ಖಾಕಿ ಬಲೆಗೆ ಬಿದ್ದಿದ್ದಾರೆ. ಹೊಸ ವರ್ಷ ಬಂತು ಅಂದ್ರೆ ಸಿಲಿಕಾನ್ ಸಿಟಿ ಮಂದಿಗೆ ಎಲ್ಲಿಲ್ಲದ ಸಂಭ್ರಮ. ಡಿಸೆಂಬರ್ 31ರ ರಾತ್ರಿ ಕುಣಿದು ಕುಪ್ಪಳಿಸಿ ಸೆಲೆಬ್ರೆಷನ್ ಮಾಡುತ್ತಾ ಮೋಜು ಮಸ್ತಿ ಮಾಡುವ ಜನರಿಗೆ ಈ ಬಾರಿ ಸರ್ಕಾರ ರೆಡ್ ಸಿಗ್ನಲ್ ಹಾಕಿ ಬ್ರೇಕ್ ಹಾಕಿದೆ. ಇತ್ತ ಮಾದಕವಸ್ತು ದಂಗೆಕೋರರು ಮಾತ್ರ ತಮಗು ಸರ್ಕಾರದ ಆದೇಶಕ್ಕೂ ಸಂಬಂಧವೇ ಇಲ್ಲ ಎನ್ನುವ ರೀತಿ ನಶೆ ಏರಿಸಲು ಮುಂದಾಗಿದ್ದಾರೆ.

ಹೊಸ ವರ್ಷಾಚರಣೆ ವೇಳೆ ಬೆಂಗಳೂರನ್ನ ಡ್ರಗ್ಸ್​​ ಸಿಟಿಯಾಗಿ ಮಾಡಲು ಹೊರಟಿದ್ದ ಗ್ಯಾಂಗ್ ವೊಂದನ್ನ ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ನಗರದ ಅಮೃತಹಳ್ಳಿಯ ಮನೆಯೊಂದರ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಸಿಸಿಬಿ ಪೊಲೀಸರು ನಾಲ್ವರು ಅಂತರರಾಜ್ಯ ಡ್ರಗ್ಸ್​​ ದಂಗೆಕೋರರನ್ನ ಬಂಧಿಸಿದ್ದಾರೆ. ಬಂಧಿತರು ಆಂಧ್ರದ ಎಂ ತಿರುಪಾಲ್ ರೆಡ್ಡಿ, ಆರ್ ಟಿ ನಗರದ ಏಜಾಜ್ ಪಾಷಾ, ತಮಿಳುನಾಡಿನ ಕಮಲೇಶನ್ ಮತ್ತು ಸತೀಶ್ ಕುಮಾರ್ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ ಬರೋಬ್ಬರಿ 1.15 ಕೋಟಿ ಮೌಲ್ಯದ ಹ್ಯಾಶಿಶ್ ಆಯಿಲ್ ಮತ್ತು ಗಾಂಜಾವನ್ನ ಜಪ್ತಿ ಮಾಡಲಾಗಿದೆ. ಆರೋಪಿಗಳು ಹೊಸ ವರ್ಷಾಚರಣೆ ಸಲುವಾಗಿ ಆಂಧ್ರದ ವಿಶಾಖಪಟ್ಟಣದಿಂದ ಕೋಟ್ಯಂತರ ಮೌಲ್ಯದ ಡ್ರಗ್ಸ್ ತರಿಸಿ ಸ್ಟಾಕ್ ಮಾಡಿದ್ದು, ತಮ್ಮದೇ ನೆಟ್ ವರ್ಕ್ ಮೂಲಕ ಚಿಕ್ಕ ಚಿಕ್ಕ ಡಬ್ಬಿಗಳಲ್ಲಿ ಹ್ಯಾಶಿಶ್ ಆಯಿಲ್ ಪ್ಯಾಕ್ ಮಾಡಿ ಮಾರಾಟ ಮಾಡಲು ಪ್ಲಾನ್ ರೂಪಿಸಿದ್ದರಂತೆ. ನ್ಯೂ ಇಯರ್ ವೇಳೆ ವಿದ್ಯಾರ್ಥಿಗಳು, ಟೆಕ್ಕಿಗಳು, ಯುವಕ ಯುವತಿಯರು ಭಾಗವಹಿಸುವ ಪಾರ್ಟಿಗಳು, ಸೆಲೆಬ್ರೆಷನ್ ಗಳಿಗೆ ಡ್ರಗ್ಸ್​​ ಪೂರೈಸಿ ಮಾದಕವಸ್ತುವಿನ ಅಮಲಿನಲ್ಲಿ ತೇಲಿಸಲು ಮುಂದಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ : ಗ್ರಾಮ ಪಂಚಾಯತ್​​ಗೆ ಹೆಂಡತಿ ಅವಿರೋಧ ಆಯ್ಕೆಯ ಬೆನ್ನಲ್ಲೇ ಗಂಡ ನೇಣಿಗೆ ಶರಣು

ಸದ್ಯ ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿ 5 ಕೆಜಿ 600ಗ್ರಾಂ ಹ್ಯಾಶಿಶ್ ಆಯಿಲ್, 3 ಕೆಜಿ 300 ಗ್ರಾಂ ಗಾಂಜಾ, ಕಾರು, ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದ್ದು ತನಿಖೆ ಮುಂದುವರೆಸಿದ್ದಾರೆ. ಅಲ್ಲದೆ ಹೊಸ ವರ್ಷಾಚರಣೆ ವೇಳೆ ನಗರದಲ್ಲಿ ಡ್ರಗ್ಸ್​​ ಸರಬರಾಜು ಆಗುವ ಬಗ್ಗೆ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಆಧರಿಸಿ ಹಲವೆಡೆ ನಿಗಾ ವಹಿಸಿದ್ದಾರೆ.
Youtube Video

ಹಲವು ಪಾರ್ಟಿ, ಸೆಲೆಬ್ರೆಷನ್ ನಲ್ಲಿ ಮಾದಕವಸ್ತು ಬಳಕೆ ಬಗ್ಗೆ ನಿಗಾ ವಹಿಸಿರುವ ಪೊಲೀಸರು ಬೆಂಗಳೂರಿಗೆ ಡ್ರಗ್ಸ್​​ ಸರಬರಾಜು ಆಗುವ ಮಾರ್ಗಗಳ ಮೇಲೂ ಕಣ್ಣಿಟ್ಟಿದ್ದು ಇದರ ಮೊದಲ ಬೇಟೆ ಅಮೃತಹಳ್ಳಿಯ ಪತ್ತೆಯಾಗಿದ್ದು ಇದೀಗ ನಗರದ ಇತರೆಡೆಗಳಲ್ಲಿ ಸಿಸಿಬಿ ಪೊಲೀಸರು ನಿಗಾ ವಹಿಸಿದ್ದಾರೆ.
Published by: G Hareeshkumar
First published: December 16, 2020, 11:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories