news18-kannada Updated:September 17, 2020, 1:35 PM IST
ಪ್ರಾತಿನಿಧಿಕ ಚಿತ್ರ
ಬೆಂಗಳೂರು(ಸೆ.17): ಸಿಲಿಕಾನ್ ಸಿಟಿಯಲ್ಲಿ ಮಾದಕ ಜಾಲದ ಬೇಟೆಯನ್ನ ಪೊಲೀಸರು ಮತ್ತೆ ಮುಂದುವರೆಸಿದ್ದಾರೆ. ಸಿಸಿಬಿ ಮತ್ತು ಆಗ್ನೇಯ ವಿಭಾಗ ಪೊಲೀಸರು ಸುಮಾರು ಒಂದು ಕೋಟಿಗೂ ಅಧಿಕ ಮೌಲ್ಯದ ಗಾಂಜಾವನ್ನ ನಗರದಲ್ಲಿ ಜಪ್ತಿ ಮಾಡಿ 14 ಜನರನ್ನು ಬಂಧಿಸಿದ್ದಾರೆ. ನಗರದ ಕಾಡುಗೋಡಿಯ ದೊಡ್ಡಬನಹಳ್ಳಿಯ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಅಜಾಂಪಾಷಾ ಎಂಬಾತನ ಪ್ಲಾಟ್ ನಲ್ಲಿ ಸುಮಾರು 50 ಲಕ್ಷ ಮೌಲ್ಯದ 90 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಮೂವರು ಅಸಾಮಿಗಳು ಗಾಂಜಾವನ್ನ ನಗರಕ್ಕೆ ಸಾಗಾಟ ಮಾಡುತ್ತಿದ್ದರಂತೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಅಜಾಂಪಾಷಾ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಅಜಾಂಪಾಷಾ ತನ್ನ ಸ್ನೇಹಿತರಾದ ಮಸ್ತಾನ್ ವಾಲಿ ಮತ್ತು ಮಹಮ್ಮದ್ ಅಬ್ಬಾಸ್ ಜೊತೆಗೂಡಿ ಆಂಧ್ರಪ್ರದೇಶದ ಪ್ರವೀಣ್ ಎಂಬಾತನಿಂದ ಗಾಂಜಾ ಖರೀದಿ ಮಾಡಿ ಬೆಂಗಳೂರಿಗೆ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.
ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು, ಮತ್ತು ಗಣ್ಯ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದರಂತೆ. ಸದ್ಯ ಈ ಬಗ್ಗೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿಬಿ ಪೊಲೀಸರು ಮೂವರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.
Bangalore Crime: ಬಾರ್ ಬಳಿ ಕುಡಿದು ಯುವಕರ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು
ಅದೇ ರೀತಿ ನಗರದ ಆಗ್ನೇಯ ವಿಭಾಗದ ಎಲೆಕ್ಟ್ರಾನಿಕ್ ಸಿಟಿ ಮತ್ತು ತಿಲಕ್ ನಗರ ಪೊಲೀಸರು 11 ಜನ ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದಾರೆ. ಆರೋಪಿಗಳು ಲಾಕ್ ಡೌನ್ ಸಡಿಲಿಕೆ ಬಳಿಕ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ಗಾಂಜಾ ಸಾಗಾಣಿಕೆ ಮಾಡುತ್ತಿದ್ದರು ಎನ್ನಲಾಗಿದೆ.
ನಗರದ ಎಲೆಕ್ಟ್ರಾನಿಕ್ ಸಿಟಿ, ತಿಲಕ್ ನಗರ, ಜಯನಗರ ಸೇರಿ ಹಲವೆಡೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳಿಂದ 117 ಕೆಜಿ ಗಾಂಜಾ ಹಾಗೂ 9 ಮೊಬೈಲ್, ಒಂದು ಕಾರು ಹಾಗೂ ಒಂದು ಬೈಕ್ ಪೊಲೀಸರು ಜಪ್ತಿ ಮಾಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಾಲರಾಜು, ಗೋಪಿನಾಥ, ವಿನೋದ್, ಸಿ.ಮನೋಹರ, ಕೆ.ಪಾಲ್ಪಾಂಡಿ, ವೈಕಾಟು ಬಿನ್ನು, ಮದನ್ ಕುಮಾರ್, ಕೆ ಬಾಲಗುರು, ಸೆಲ್ವಂ, ಬಂಧಿಸಿದ್ದಾರೆ. ತಿಲಕ್ನಗರ ಪೊಲೀಸರಿಂದ ಮಹಮ್ಮದ್ ಪಾರೋಕ್, ಮಹಮ್ಮದ್, ಬಂಧನವಾಗಿದ್ದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
Published by:
Latha CG
First published:
September 17, 2020, 1:35 PM IST