ಬೆಂಗಳೂರಿನಲ್ಲಿ ಡ್ರಗ್ಸ್​ ಸೇವಿಸಿ ವರದಕ್ಷಿಣೆ ಕಿರುಕುಳ; ಗಂಡನ ವಿರುದ್ಧ ದೂರು ನೀಡಿದ ಹೆಂಡತಿ

ಇನ್ನು, ಗಂಡನ ಕಿರುಕುಳದ ವಿರುದ್ದ ಪತ್ನಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾಂರ್ಭಿಕ ಚಿತ್ರ

ಸಾಂರ್ಭಿಕ ಚಿತ್ರ

 • Share this:
  ಬೆಂಗಳೂರು(ಅ.22): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ವರದಕ್ಷಿಣೆ ಕಿರುಕುಳ ಪ್ರಕರಣಗಳು  ಹೆಚ್ಚಾಗಿ ಕಂಡುಬರುತ್ತಿವೆ. ಬೆಂಗಳೂರಿನಲ್ಲಿ ಇನ್ನೂ ಸಹ ವರದಕ್ಷಿಣೆ ಕಿರುಕುಳ ಜೀವಂತವಾಗಿದೆಯಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಹಣ ತರುವಂತೆ ಪೀಡಿಸಿ ಹೆಂಡತಿಗೆ ಚಿತ್ರಹಿಂಸೆ ನೀಡುವ ಮತ್ತು ಕೊಲೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಕೋರಮಂಗಲದಲ್ಲಿ ಐಟಿ ಕಂಪನಿ ಉದ್ಯೋಗಿಯೊಬ್ಬ ವರದಕ್ಷಿಣೆಗಾಗಿ ತನ್ನ ಹೆಂಡತಿಗೆ ಕಿರುಕುಳ ನೀಡಿದ್ದಾನೆ. ಅದೂ ಸಹ ಮದ್ಯದ ಜೊತೆಗೆ ಡ್ರಗ್ಸ್​ ಸೇವಿಸಿ. ಹೌದು, ತನ್ನ ಪತ್ನಿ ಎದುರಲ್ಲೇ ಮಾದಕವಸ್ತು ಸೇವನೆ ಮಾಡಿ ವರದಕ್ಷಿಣೆ ತರುವಂತೆ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ತನ್ನ ಡ್ರಗ್​ ಚಟವನ್ನು ಹೆಂಡತಿಗೆ ವಿಡಿಯೋ ಮಾಡುವಂತೆ ಹೇಳಿ ವಿಕೃತಿಯನ್ನೂ ಮೆರೆದಿದ್ದಾನೆ. ಗಂಡನ ಮಾತಿಗೆ ಹೆದರಿದ ಹೆಂಡತಿ ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದಾಳೆ.  ಟೆಕ್ಕಿ ತನ್ನ ಮೊಬೈಲ್​ ಮೇಲೆ ಡ್ರಗ್ಸ್​​ ಹಾಕಿಕೊಂಡು ಸೇವಿಸುತ್ತಿದ್ದ ದೃಶ್ಯ ಹೆಂಡತಿಯ ಮೊಬೈಲ್​ನಲ್ಲಿ ಸೆರೆಯಾಗಿದೆ.

  ಕೋರಮಂಗಲದ ಲೋಹಿತ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಈತ ಐಟಿ ಕಂಪನಿಯ ಉದ್ಯೋಗಿ ಎಂದು ತಿಳಿದು ಬಂದಿದೆ.  ಡ್ರಗ್ಸ್​ ಸೇವನೆ ಜೊತೆಗೆ ಆತ ತನ್ನ ಹೆಂಡತಿಗೆ ಮಾದಕ ವಸ್ತುವಿನ ಬಗ್ಗೆ ವಿವರಣೆ ಕೊಡುತ್ತಿದ್ದ ಎನ್ನಲಾಗಿದೆ. ಆರೋಪಿ ಲೋಹಿತ್ ಥಣಿಸಂದ್ರ ಬಳಿ ಕೊಕೈನ್​​ನ್ನು ತರುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

  ಇನ್ನು, ಗಂಡನ ಕಿರುಕುಳದ ವಿರುದ್ದ ಪತ್ನಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

  ಪ್ರಕರಣ ಸಂಬಂಧ ಮಾತನಾಡಿರುವ ಸಂತ್ರಸ್ತೆ, ಮದುವೆಯಾಗಿ ಎರಡು ವರ್ಷಗಳಾಗಿವೆ. ಹುಡುಗ ಮದುವೆಗೂ ಮುನ್ನವೇ ಡ್ರಗ್ಸ್ ಸೇವಿಸುತ್ತಿದ್ದ. ಈ ವಿಚಾರ ಅವರ ಮನೆಯವರಿಗೂ ಗೊತ್ತಿತ್ತು. ಆದರೆ ಇಷ್ಟು ದಿನ ಅದನ್ನ ಮುಚ್ಚಿಟ್ಟಿದ್ರು.  ಅಲ್ಲದೇ ವರದಕ್ಷಿಣೆಗಾಗಿ ಪದೇ ಪದೇ ಕಿರುಕುಳ ಕೊಡ್ತಿದ್ದ. ನನ್ನ ಮೇಲೂ ಅನುಮಾನ ಪಡ್ತಿದ್ದ. ಡ್ರಗ್ಸ್ ಸೇವಿಸುವಂತೆ ನನಗೂ ಒತ್ತಾಯ ಮಾಡ್ತಿದ್ದ. ಅದನ್ನ ಒಮ್ಮೆ ವಿಡಿಯೋ ಮಾಡಿದ್ದೆ. ಅದು ಇತ್ತೀಚೆಗೆ ನನಗೆ ಸಿಕ್ಕಿತ್ತು. ವರದಕ್ಷಿಣೆ ಕಿರುಕುಳದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೇನೆ. ಪೂರ್ವ ವಿಭಾಗ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹುಡುಗನನ್ನ ಒಮ್ಮೆ ಕರೆಯಿಸಿ ವಿಚಾರಣೆ ಮಾಡಿದ್ದಾರೆ ಎಂದು ನ್ಯೂಸ್ 18  ಕನ್ನಡಕ್ಕೆ ಹೇಳಿದ್ದಾರೆ.
  Published by:Latha CG
  First published: