ಗಾಂಜಾ ಪೆಡ್ಲರ್ ಮೇಲೆ ಅತ್ತಿಬೆಲೆ ಪೊಲೀಸರಿಂದ ಫೈರಿಂಗ್; 7 ಕೆ.ಜಿ ಗಾಂಜಾ ಜಪ್ತಿ

ಎಚ್ಚರಿಕೆಗೂ ಜಗ್ಗದೆ ಹಲ್ಲೆಗೆ ಮುಂದಾದಾಗ ಕಾಲಿಗೆ ಗುಂಡು ಹೊಡೆದು ಆರೋಪಿಯನ್ನು ಬಂಧಿಸಲಾಗಿದ್ದು, 7 ಕೆ ಜಿ ಗಾಂಜಾ ಜಫ್ತಿ ಮಾಡಲಾಗಿದೆ.

news18-kannada
Updated:September 16, 2020, 8:06 AM IST
ಗಾಂಜಾ ಪೆಡ್ಲರ್ ಮೇಲೆ ಅತ್ತಿಬೆಲೆ ಪೊಲೀಸರಿಂದ ಫೈರಿಂಗ್; 7 ಕೆ.ಜಿ ಗಾಂಜಾ ಜಪ್ತಿ
ಅತ್ತಿಬೆಲೆ ಪೊಲೀಸರು
  • Share this:
ಬೆಂಗಳೂರು(ಸೆ.16): ಆತ ಕುಖ್ಯಾತ ಗಾಂಜಾ ಪೆಡ್ಲರ್. ಆನೇಕ ಬಾರಿ ಆತನ ಮೇಲೆ ಪೊಲೀಸರು ದಾಳಿ ನಡೆಸಿದ್ದರೂ ಯಶಸ್ವಿಯಾಗಿರಲಿಲ್ಲ. ಅದೇಗೋ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ.‌ ಆದರೆ ಮಂಗಳವಾರ ಆತನ ಗ್ರಹಚಾರ ಕೆಟ್ಟಿತ್ತು. ಪೊಲೀಸ್ ಗನ್ ಸದ್ದು ಮಾಡಿದ್ದು, ಕಾಲಿಗೆ ಗುಂಡು ಹೊಡೆದು ಕಡೆಗೂ ಕುಖ್ಯಾತ ಗಾಂಜಾ ಪೆಡ್ಲರ್​​​ನನ್ನು ಬಂಧಿಸಿ ಗಾಂಜಾ ಜಫ್ತಿ ಮಾಡಿದ್ದಾರೆ. ಅಷ್ಟಕ್ಕೂ ಪೊಲೀಸರ ಕೈಗೆ ಸೆರೆ ಸಿಕ್ಕ ಕುಖ್ಯಾತ ಗಾಂಜಾ ಪೆಡ್ಲರ್ ಯಾರೂ ಅಂತೀರಾ ಈ ಸ್ಟೋರಿ ಓದಿ. ಆತ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅಡಿಗಾರ ಕಲ್ಲಹಳ್ಳಿ ವಾಸಿ ಅಯೂಬ್ ಖಾನ್ ಅಲಿಯಾಸ್ ಇಸ್ಮಾಯಿಲ್. ಮಾಲೂರು ಹೊಸಕೋಟೆ, ಹೊಸೂರು ಹೀಗೆ ಅಂತರ ರಾಜ್ಯ ಗಡಿಯಲ್ಲಿ ಗಾಂಜಾ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿದ್ದ ಈತ ಕರ್ನಾಟಕ-ತಮಿಳುನಾಡು ರಾಜ್ಯದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಗಾಂಜಾ ಸಪ್ಲೆ ಮಾಡುತ್ತಿದ್ದ. ಹಲವು ಬಾರಿ ಪೊಲೀಸರ ದಾಳಿ ವೇಳೆ ಕೂದಲೆಳೆ ಅಂತರದಿಂದ ಎಸ್ಕೇಪ್ ಆಗುತ್ತಿದ್ದ. ಆದ್ರೆ ಇಂದು ಆಯೂಬ್ ಖಾನ್ ನಸೀಬು ಕೆಟ್ಟಿತ್ತು. ಪೊಲೀಸರಿಂದ ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದಾನೆ.

ಭಾರತ-ಚೀನಾ ಗಡಿ ಸಂಘರ್ಷ: ‘ಶಾಂತಿಗೆ ಬದ್ಧ, ಸಮರಕ್ಕೂ ಸಿದ್ಧ‘ ಎಂದ ಕೇಂದ್ರ ಸಚಿವ ರಾಜನಾಥ್​​ ಸಿಂಗ್​​

ಬಂಧಿತ ಆರೋಪಿ ಮಾಲೂರಿನಿಂದ ಆನೇಕಲ್ ಕಡೆ ಗಾಂಜಾ ಸಾಗಿಸುತ್ತಿರುವ ಬಗ್ಗೆ ಬಾತ್ಮೀದಾರರೊಬ್ಬರಿಂದ ಅತ್ತಿಬೆಲೆ ಪೊಲೀಸರಿಗೆ ಖಚಿತ ಮಾಹಿತಿ ದೊರೆಯುತ್ತದೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ ಇನ್ಸ್ಪೆಕ್ಟರ್ ಸತೀಶ್ ಪಿಎಸ್ಐ ಹರೀಶ್ ರೆಡ್ಡಿ ಮತ್ತು ಮುರುಳಿ ಜೊತೆ ಕಾರ್ಯಾಚರಣೆಗಿಳಿಯುತ್ತಾರೆ. ಮಾಲೂರುನಿಂದ ಸರ್ಜಾಪುರ ಮಾರ್ಗವಾಗಿ ಬಿದರಗುಪ್ಪೆ ಬಳಿ ಅತ್ತಿಬೆಲೆ ಕಡೆ ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಯೂಬ್ ಖಾನ್ ಮೇಲೆ ದಾಳಿ ನಡೆಸುತ್ತಾರೆ.

ಈ ವೇಳೆ ಅಯೂಬ್ ಖಾನ್ ತಪ್ಪಿಸಿಕೊಳ್ಳಲು ಸರ್ಜಾಪುರ ಪಿಎಸ್ಐ ಹರೀಶ್ ರೆಡ್ಡಿ ಮತ್ತು ಹೆಡ್ ಕಾನ್ಸ್‌ಟೇಬಲ್ ರವಿ ಕುಮಾರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸುತ್ತಾನೆ. ಶರಣಾಗುವಂತೆ ಇನ್ಸ್ಪೆಕ್ಟರ್ ಸತೀಶ್ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಎಚ್ಚರಿಕೆಗೂ ಜಗ್ಗದೆ ಹಲ್ಲೆಗೆ ಮುಂದಾದಾಗ ಕಾಲಿಗೆ ಗುಂಡು ಹೊಡೆದು ಆರೋಪಿಯನ್ನು ಬಂಧಿಸಲಾಗಿದ್ದು, 7 ಕೆ ಜಿ ಗಾಂಜಾ ಜಫ್ತಿ ಮಾಡಲಾಗಿದೆ. ಗುಂಡೇಟಿನಿಂದ ಗಾಯಗೊಂಡ ಆಯೂಬ್ ಖಾನ್ ಮತ್ತು ಗಾಯಾಳು ಪಿಎಸ್ಐ ಹರೀಶ್ ರೆಡ್ಡಿ, ಹೆಡ್ ಕಾನ್ಸ್‌ಟೇಬಲ್ ರವಿ ಕುಮಾರ್ ಗೆ ಆನೇಕಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಸದ್ಯ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪೊಲೀಸ್ ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಅಯೂಬ್ ಖಾನ್ ಸಹಚರರ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.
Published by: Latha CG
First published: September 16, 2020, 8:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading