HOME » NEWS » State » BANGALORE DIVORCED WIFE HITS AND DAMAGES FORMER HUSBAND CAR GLASS IN COURT PREMISES AT NELAMANGALA BENGALURU RMD

ನೆಲಮಂಗಲ: ವಿಚ್ಛೇದನ ಪಡೆದ ಮರುಕ್ಷಣವೇ ವಕೀಲರ ಕಚೇರಿ​ ಆವರಣದಲ್ಲಿ ಗಂಡನ ಕಾರನ್ನು ಪುಡಿ ಪುಡಿ ಮಾಡಿದ ಹೆಂಡತಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ವಕೀಲರ ಕಚೇರಿ ಆವರಣದಲ್ಲಿ ಈ ಘಟನೆ ನಡೆದಿದ್ದು, ನೊಂದ ಪತಿರಾಯ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

news18-kannada
Updated:September 11, 2020, 8:52 AM IST
ನೆಲಮಂಗಲ: ವಿಚ್ಛೇದನ ಪಡೆದ ಮರುಕ್ಷಣವೇ ವಕೀಲರ ಕಚೇರಿ​ ಆವರಣದಲ್ಲಿ ಗಂಡನ ಕಾರನ್ನು ಪುಡಿ ಪುಡಿ ಮಾಡಿದ ಹೆಂಡತಿ
ಪುಡಿಪುಡಿಯಾದ ಕಾರು
  • Share this:
ನೆಲಮಂಗಲ (ಸೆಪ್ಟೆಂಬರ್ 8) ಸಂಸಾರದ ಸಂಗೀತ ರಾಗ ತಪ್ಪುತ್ತಿದೆ ಎಂದಾಗ ಸಾಮಾನ್ಯವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡುತ್ತಾರೆ. ವಿಚ್ಛೇದನದ ನಂತರ ಒಬ್ಬರಿಗೊಬ್ಬರು ಗೊತ್ತಿಲ್ಲದಂತೆ ಕೆಲವರು ಇದ್ದು ಬಿಟ್ಟರೆ, ಇನ್ನೂ ಕೆಲವರು ಗೆಳೆತನವನ್ನು ಮುಂದುವರಿಸುತ್ತಾರೆ. ಆದರೆ, ಬೆಂಗಳೂರಿನ ನೆಲಮಂಗಲದಲ್ಲೊಂದು ಅಚ್ಚರಿಯ ಘಟನೆ ನಡೆದಿದೆ! ವಿಚ್ಛೇದಿತ ಪತ್ನಿ ಗಂಡನ ಕಾರನ್ನು ವಕೀಲರ ಕಚೇರಿ​ ಆವರಣದಲ್ಲೇ ಪುಡಿ ಪುಡಿ ಮಾಡಿ ಹಾಕಿದ್ದಾಳೆ! ಕಳೆದ ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಟೆಕ್ಕಿಗಳ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಪತಿಯೊಂದಿಗೆ ವಿಚ್ಛೇದನ ಪಡೆದ ಪತ್ನಿ ವಕೀಲರ ಕಚೇರಿ ಎದುರೇ ಗಂಡನ ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ್ದಾಳೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ವಕೀಲರ ಕಚೇರಿ ಆವರಣದಲ್ಲಿ ಈ ಘಟನೆ ನಡೆದಿದ್ದು, ನೊಂದ ಪತಿರಾಯ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಎರಡು ವರ್ಷಗಳ ಹಿಂದೆ ತುಮಕೂರು ಜಿಲ್ಲೆ ತಿಪಟೂರು ಮೂಲದ ಶರತ್ ಎನ್ನುವ ವ್ಯಕ್ತಿ ಜೊತೆ ನೆಲಮಂಗಲದ ಸುಭಾಷ್‌ನಗರದ ಯುವತಿ ಮದುವೆಯಾಗಿದ್ದಳು.

ಇದನ್ನೂ ಓದಿ: ನಿಮ್ಮ ಕಣ್ಣಿನ ಆರೋಗ್ಯ ಉತ್ತಮಗೊಳ್ಳಬೇಕೇ? ಹಾಗಿದ್ರೆ ಹೀಗೆ ಮಾಡಿ

ಸಂಸಾರದಲ್ಲಿ ಸರಿಹೊಂದದ ಕಾರಣ ಇಬ್ಬರು ಇಚ್ಚಿಸಿ ನೆಲಮಂಗಲದ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾದ ಬಳಿಕ ಪತ್ನಿ ವಕೀಲರ ಕಚೇರಿ ಆವರಣದಲ್ಲೆ ನಿಂತಿದ್ದ ತನ್ನ ಮಾಜಿ ಪತಿಯ ಕಾರಿನ ಗಾಜನ್ನು ಪುಡಿಗೈದಿದ್ದಾಳೆ.

ಹೆಂಡತಿಯಿಂದ ಬಿಡುಗಡೆಯಾದರು ಮುಕ್ತಿ ಸಿಗಲಿಲ್ಲವಲ್ಲ ಎಂದು ನೊಂದ ಪತಿ ಪತಿ ನ್ಯಾಯಕ್ಕಾಗಿ ನೆಲಮಂಗಲ ಟೌನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ನೆಲಮಂಗಲ ಟೌನ್ ಪೊಲೀಸರು ಘಟನೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಟ್ಟಿನಿಂದ ಆಕೆ ಈ ರೀತಿ ಮಾಡಿರಬಹುದು ಎನ್ನಲಾಗುತ್ತಿದೆ.
Published by: Rajesh Duggumane
First published: September 8, 2020, 7:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading