ದಶಕದ ಹಿಂದೆ ಪ್ರಿಯಕರನ ಮರ್ಮಾಂಗ ಕತ್ತರಿಸಿದ್ದ ಬೆಂಗಳೂರು ದಂತವೈದ್ಯೆಗೆ 10 ವರ್ಷ ಜೈಲು ಶಿಕ್ಷೆ

2008ರಲ್ಲಿ ತನ್ನ ಪ್ರಿಯಕರ ಬೇರೊಬ್ಬಳೊಂದಿಗೆ ಮದುವೆಯಾದ ವಿಷಯ ತಿಳಿಯುತ್ತಿದ್ದಂತೆ ಈ ವಿಷಯವಾಗಿ ಮಾತನಾಡಲು ಬೆಂಗಳೂರಿನ ತನ್ನ ಕ್ಲಿನಿಕ್​ಗೆ ಬರುವಂತೆ ಹೇಳಿದ್ದಳು. ಕ್ಲಿನಿಕ್​ಗೆ ಬಂದಿದ್ದ ಡಾ. ಮೀರ್ ಅರ್ಷದ್ ಅಲಿಗೆ ಅಮಲು ಬರುವ ಔಷಧಿ ಹಾಕಿದ ಜ್ಯೂಸ್​ ನೀಡಿದ್ದ ಡಾ. ಸೈದಾ ಬ್ಲೇಡ್​ನಿಂದ ಆತನ ಮರ್ಮಾಂಗವನ್ನು ಕತ್ತರಿಸಿದ್ದಳು.

news18-kannada
Updated:December 15, 2019, 2:02 PM IST
ದಶಕದ ಹಿಂದೆ ಪ್ರಿಯಕರನ ಮರ್ಮಾಂಗ ಕತ್ತರಿಸಿದ್ದ ಬೆಂಗಳೂರು ದಂತವೈದ್ಯೆಗೆ 10 ವರ್ಷ ಜೈಲು ಶಿಕ್ಷೆ
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಡಿ. 15): ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿ ಬೇರೆ ಹುಡುಗಿಯೊಂದಿಗೆ ವಿವಾಹವಾಗಿದ್ದ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳಲು ಆತನಿಗೆ ಪ್ರಜ್ಞೆ ತಪ್ಪಿಸಿ ಆತನ ಮರ್ಮಾಂಗವನ್ನೇ ಕತ್ತರಿಸಿದ್ದ ಬೆಂಗಳೂರಿನ ದಂತ ವೈದ್ಯೆಗೆ ಇದೀಗ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

2008ರ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ ಈ ಘಟನೆ ಬೆಂಗಳೂರನ್ನು ಬೆಚ್ಚಿ ಬೀಳಿಸಿತ್ತು. ಡಾ. ಸೈದಾ ಅಮೀನಾ ಎಂಬ ಡೆಂಟಿಸ್ಟ್​​ ಜೊತೆಯ ಪ್ರೀತಿಯ ನಾಟಕವಾಡಿ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದ ಡಾ. ಮೀರ್ ಅರ್ಷದ್ ಅಲಿ ಎಂಬ ವೈದ್ಯ ತಾನು ಮಾಡಿದ ತಪ್ಪಿಗೆ ಮರ್ಮಾಂಗವನ್ನೇ ಕಳೆದುಕೊಂಡಿದ್ದ. ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ 61ನೇ ಸಿಸಿಎಚ್‌ ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ ವೈದ್ಯೆ ಡಾ. ಸೈದಾ ಅಮೀನಾ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.

ಟ್ರಾಫಿಕ್ ನಿಯಮ ಉಲ್ಲಂಘಿಸಿದ ಬೆಂಗಳೂರು ತರಕಾರಿ ವ್ಯಾಪಾರಿಗೆ 15,400 ರೂ. ದಂಡ!

ಕೋರಮಂಗಲದಲ್ಲಿ ಡೆಂಟಲ್ ಕ್ಲಿನಿಕ್ ನಡೆಸುತ್ತಿದ್ದ ಡಾ. ಸೈದಾ ಮತ್ತು ಡಾ. ಮೀರ್ ಅರ್ಷದ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅವರ ಪ್ರೀತಿಗೆ ಮನೆಯವರು ಒಪ್ಪಿರಲಿಲ್ಲ. ತನಗೆ ಹೇಳದೆ ತನ್ನ ಪ್ರಿಯಕರ ಬೇರೊಬ್ಬಳೊಂದಿಗೆ ಮದುವೆಯಾದ ವಿಷಯ ತಿಳಿಯುತ್ತಿದ್ದಂತೆ ಆತನಿಗೆ ಫೋನ್ ಮಾಡಿ ಗಲಾಟೆ ಮಾಡಿದ್ದಳು. ನಂತರ ಈ ವಿಷಯವಾಗಿ ಮಾತನಾಡಲು ತನ್ನ ಕ್ಲಿನಿಕ್​ಗೆ ಬರುವಂತೆ ಹೇಳಿದ್ದಳು. ಆಕೆಯ ಮಾತಿನಂತೆ ಕ್ಲಿನಿಕ್​ಗೆ ಬಂದಿದ್ದ ಡಾ. ಮೀರ್ ಅರ್ಷದ್ ಅಲಿಗೆ ಅಮಲು ಬರುವ ಔಷಧಿ ಹಾಕಿದ ಕೂಲ್​ಡ್ರಿಂಕ್ಸ್​ ನೀಡಿದ್ದ ಡಾ. ಸೈದಾ ಬ್ಲೇಡ್​ನಿಂದ ಆತನ ಮರ್ಮಾಂಗವನ್ನು ಕತ್ತರಿಸಿದ್ದಳು.

ಬೆಂಗಳೂರಿಗರ ವೀಕೆಂಡ್​ ಸಂಭ್ರಮಕ್ಕೆ ಅಡ್ಡಿಯಾಗುತ್ತಾ ಮಳೆ?

ರಕ್ತಸ್ರಾವದಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ಸೇರಿಸಿ ಪರಾರಿಯಾಗಿದ್ದ ಆಕೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಜ್ಞೆ ಬಂದ ನಂತರ ತನ್ನ ಸ್ಥಿತಿಯನ್ನು ನೋಡಿ ಜೋರಾಗಿ ಕಿರುಚಾಡಿದ್ದ ಡಾ. ಮೀರ್ ಅರ್ಷದ್ ನನಗೆ ನನ್ನ ಮರ್ಮಾಂಗವನ್ನು ಕೊಡಿಸಿ. ಸರ್ಜರಿ ಮಾಡಿಯಾದರೂ ನಾನು ಅದನ್ನು ಜೋಡಿಸಿಕೊಳ್ಳುತ್ತೇನೆ. ಜೀವನಪೂರ್ತಿ ಈ ರೀತಿ ಬದುಕಲು ನನಗೆ ಇಷ್ಟವಿಲ್ಲ ಎಂದು ವೈದ್ಯರ ಬಳಿ ಬೇಡಿಕೊಂಡಿದ್ದ. ನಂತರ ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
First published:December 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ