Bangalore Crime: ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ

ಲಗ್ಗೆರೆ ಭಾಗದಲ್ಲಿ ರಘು ಆಟೋ ಓಡಿಸುತ್ತದ್ದ. ಕೊಲೆಯ ಹಿಂದಿನ ಉದ್ದೇಶ ಏನು ಎಂಬುದು ಇನ್ನೂ ಪೊಲೀಸರಿಗೆ ಸ್ಪಷ್ಟವಾಗಿಲ್ಲ. ನಂದಿನಿ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

news18-kannada
Updated:December 12, 2019, 8:05 AM IST
Bangalore Crime: ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ಯುವಕನ ಬರ್ಬರ  ಕೊಲೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಡಿ.12): ನಗರದಲ್ಲಿ ಮತ್ತೆ ಚಾಕು ಝಳಪಿಸಿದೆ. ರಘು ಹೆಸರಿನ 28 ವರ್ಷದ ಆಟೋ ಚಾಲಕನನ್ನು ಕೆಲ ದುಷ್ಕರ್ಮಿಗಳು ಚಾಕುವಿನಿಂದ ಇರಿದು  ಕೊಲೆ ಮಾಡಿದ್ದಾರೆ.

ನಂದಿನಿ ಲೇಔಟ್ ಬಳಿಯ ರಾಜೀವ್ ಗಾಂಧಿ ನಗರದಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ರಘು ಆಟೋದಲ್ಲಿ ಕೂತಿದ್ದ ಎನ್ನಲಾಗಿದೆ. ಈ ವೇಳೆ ಕೆಲ ದುಷ್ಕರ್ಮಿಗಳು ಚಾಕುವಿನಿಂದ ಆತನನ್ನು ಇರಿದು ಕೊಲೆ ಮಾಡಿದ್ದಾರೆ.

ಲಗ್ಗೆರೆ ಭಾಗದಲ್ಲಿ ರಘು ಆಟೋ ಓಡಿಸುತ್ತದ್ದ. ಕೊಲೆಯ ಹಿಂದಿನ ಉದ್ದೇಶ ಏನು ಎಂಬುದು ಇನ್ನೂ ಪೊಲೀಸರಿಗೆ ಸ್ಪಷ್ಟವಾಗಿಲ್ಲ. ನಂದಿನಿ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಮಗನಿಗೆ ಚಾಕು ಇರಿದ ತಂದೆ; ಉಡುಪಿಯಲ್ಲಿ ಘಟನೆ

ಕೊಲೆಯ ಹಿಂದೆ ಯಾವುದಾದರೂ ವೈಯಕ್ತಿಕ ದ್ವೇಷವಿತ್ತೇ ಅಥವಾ ದುಷ್ಕರ್ಮಿಗಳು ಪಾನಮತ್ತರಾಗಿದ್ದರೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಕೊಲೆ ಮಾಡಿದ ನಂತರ ದುಷ್ಕರ್ಮಿಗಳು ಪರಾರಿಯಾಗಿದ್ದು, ಹತ್ತಿರದ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
First published:December 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ