Bengaluru Crime: ರೌಡೀಶೀಟರ್​​ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ; ಹತ್ಯೆ ಪ್ರಕರಣಕ್ಕೆ ಸಿಕ್ತು ಹೊಸ ಟ್ವಿಸ್ಟ್

ಪ್ರಕರಣದ ಪ್ರಮುಖ ಆರೋಪಿಗಳಾದ ಫೈಸಲ್ ಪಾಶಾ, ಫುರ್ಖಾನ್, ನಯಾಜ್ ಪಾಶಾ, ತೌಸೀಫ್ ಪಾಶಾ,ಶೋಯಬ್ ಪಾಶಾ ಹಾಗೂ ಆದಿಲ್ ಖಾನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಅವರು ನಿಜ ವಿಚಾರ ಬಾಯಬ್ಬಿಟ್ಟಿದ್ದಾರೆ.

news18-kannada
Updated:August 11, 2020, 8:54 AM IST
Bengaluru Crime: ರೌಡೀಶೀಟರ್​​ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ; ಹತ್ಯೆ ಪ್ರಕರಣಕ್ಕೆ ಸಿಕ್ತು ಹೊಸ ಟ್ವಿಸ್ಟ್
ಬೆಂಗಳೂರು ಪೊಲೀಸ್
  • Share this:
ಬೆಂಗಳೂರು (ಆ.11): ಕೊಲೆ, ದರೋಡೆ ಪ್ರಕರಣ ಬೆಂಗಳೂರಿಗೆ ಹೊಸದಲ್ಲ. ಕೊಲೆ ಮಾಡಿದ ನಂತರದಲ್ಲಿ ಬಹುತೇಕರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಬಹುತೇಕ ಪ್ರಕರಣದಲ್ಲಿ ಕೊಲೆಗೆ ಹಳೆಯ ದ್ವೇಷ, ಹಣದಾಸೆಯೇ ಪ್ರಮುಖ ಕಾರಣವಾಗಿರುತ್ತದೆ. ಬೆಂಗಳೂರಿನಲ್ಲೂ ಇತ್ತೀಚೆಗೆ ರೌಡಿ ಶೀಟರ್​ ಒಬ್ಬನ ಕೊಲೆ ಆಗಿತ್ತು. ಈ ಕೊಲೆಗೆ ಹಣದ ವಿಚಾರವೇ ಪ್ರಮುಖ ಕಾರಣವಂತೆ. ಸದ್ಯ, ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

ಶನಿವಾರ ರಾತ್ರಿ ಬಾಪೂಜಿನಗರದ ಹೀರಾ ಮಸೀದಿ ಬಳಿ ಹತ್ಯೆ ನಡೆದಿತ್ತು. ವ್ಯಕ್ಯಿಯೋರ್ವನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ವೇಳೆ ಕೊಲೆಯಾದ ವ್ಯಕ್ತಿ ರೌಡಿ ಶೀಟರ್​ ಇಸ್ಲಾಂ ಖಾನ್ (36) ಎನ್ನುವ ವಿಚಾರ ಬಯಲಾಗಿತ್ತು. ಅಷ್ಟಕ್ಕೂ ಈ ಕೊಲೆ ನಡೆದಿದ್ದೇಕೆ? ಈ ಕೊಲೆ ಹಿಂದಿನ ರಹಸ್ಯವೇನು ಎಂಬುದರ ಹಿಂದಿನ ಉದ್ದೇಶವನ್ನು ಪೊಲೀಸರು ಬೆನ್ನು ಹತ್ತಿದ್ದರು. ಈ ವೇಳೆ ನಿಜವಾದ ವಿಚಾರ ಬಯಲಾಗಿತ್ತು.

ಪ್ರಕರಣದ ಪ್ರಮುಖ ಆರೋಪಿಗಳಾದ ಫೈಸಲ್ ಪಾಶಾ, ಫುರ್ಖಾನ್, ನಯಾಜ್ ಪಾಶಾ, ತೌಸೀಫ್ ಪಾಶಾ,ಶೋಯಬ್ ಪಾಶಾ ಹಾಗೂ ಆದಿಲ್ ಖಾನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಅವರು ನಿಜ ವಿಚಾರ ಬಾಯಬ್ಬಿಟ್ಟಿದ್ದಾರೆ.

ಇದನ್ನೂ ಓದಿ: ಸುಖಾಂತ್ಯ ಕಂಡ ರಾಜಸ್ಥಾನ ರಾಜಕೀಯ ಹೈಡ್ರಾಮಾ; ಸಚಿನ್ ಪೈಲಟ್ ಮನವೊಲಿಸಿದ ರಾಹುಲ್, ಪ್ರಿಯಾಂಕಾ

ಇಸ್ಲಾಂ ಖಾನ್ ವಿರುದ್ಧ ಕೊಲೆ ಹಾಗೂ ಕೊಲೆಯತ್ನ ಪ್ರಕರಣಗಳು ದಾಖಲಾಗಿದ್ದವು. ಈತ ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ. ಕೊಲೆ ಮಾಡಿದ ಆರೋಪಿಗಳಿಗೆ ಬಳಿ ಹಣಕ್ಕಾಗಿ ಇಸ್ಲಾಂ ಖಾನ್ ಪೀಡಿಸುತ್ತಿದ್ದ. ಇಸ್ಲಾಂನ ಕಾಟ ತಾಳಲಾರದೇ ಆರೋಪಿಗಳು ಆತನ ಹತ್ಯೆಗೆ ಸಂಚು ರೂಪಿಸಿದ್ದರು. ಸ್ಕೆಚ್ ಹಾಕಿದ ರೀತಿಯಲ್ಲೇ ಹತ್ಯೆ ನಡೆದಿದೆ.

ಸದ್ಯ ಬ್ಯಾಟರಾಯನಪುರ ಪೊಲೀಸರು 6 ಜನ ಆರೋಪಿಗಳ‌ನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಾಗಿ ಹುಡುಕಾಟ ನಡೆದಿದೆ.
Published by: Rajesh Duggumane
First published: August 11, 2020, 8:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading