HOME » NEWS » State » BANGALORE CRIME RETIRED IPS OFFICER SHANKAR BIDARI E MAIL HACK NAGALAND BASED ACCUSED ARRESTED CYBER CRIME KMTV SCT

Bengaluru Crime: ನಿವೃತ್ತ ಡಿಜಿಪಿ ಶಂಕರ್ ಬಿದರಿ ಇ-ಮೇಲ್ ಹ್ಯಾಕ್ ಮಾಡಿ ಹಣ ವಸೂಲಿ; ನಾಗಾಲ್ಯಾಂಡ್ ಗ್ಯಾಂಗ್ ಬಂಧನ

Bangalore Cyber Crime: ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಅವರ ಇ-ಮೇಲ್ ಹ್ಯಾಕ್ ಮಾಡಿದ್ದ ನಾಗಾಲ್ಯಾಂಡ್​ ಮೂಲದ ಆರೋಪಿಗಳು ಹಣ ನೀಡುವಂತೆ ಶಂಕರ್ ಬಿದರಿ ಅವರ ಸ್ನೇಹಿತರಿಗೆ ಮನವಿ ಮಾಡುತ್ತಿದ್ದರು. ಈ ಮೂಲಕ ಶಂಕರ್ ಬಿದರಿ ಸ್ನೇಹಿತರಿಂದ 25 ಸಾವಿರ ರೂ. ಹಣ ಪಡೆದಿದ್ದರು.

news18-kannada
Updated:March 10, 2021, 9:18 AM IST
Bengaluru Crime: ನಿವೃತ್ತ ಡಿಜಿಪಿ ಶಂಕರ್ ಬಿದರಿ ಇ-ಮೇಲ್ ಹ್ಯಾಕ್ ಮಾಡಿ ಹಣ ವಸೂಲಿ; ನಾಗಾಲ್ಯಾಂಡ್ ಗ್ಯಾಂಗ್ ಬಂಧನ
ಶಂಕರಿ ಬಿದರಿ ಇ-ಮೇಲ್ ಹ್ಯಾಕ್ ಮಾಡಿದ್ದ ನಾಗಾಲ್ಯಾಂಡ್ ತಂಡ
  • Share this:
ಬೆಂಗಳೂರು (ಮಾ. 10): ನಿವೃತ್ತ ಡಿಜಿಪಿ ಶಂಕರ್ ಬಿದರಿ ಅವರ ಇ-ಮೇಲ್ ಹ್ಯಾಕ್ ಮಾಡಿದ ಮೂವರನ್ನು ಬಂಧಿಸಲಾಗಿದೆ. ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ನಾಗಾಲ್ಯಾಂಡ್ ಮೂಲದ ಮೂವರನ್ನು ಬಂಧನ ಮಾಡಿದ್ದಾರೆ. ನಾಗಾಲ್ಯಾಂಡ್​ ಮೂಲದ ಥಿಯಾ, ಸೇರೊಪಾ ಮತ್ತು ಇಸ್ಟರ್ ಕೊನ್ಯಾಕ್ ಅಲಿಯಾಸ್ ರುಬಿಕಾ ಎಂಬುವವರನ್ನು ಬಂಧಿಸಲಾಗಿದೆ.

ಫೆಬ್ರವರಿ 26 ರಂದು ತಮ್ಮ ಇ-ಮೇಲ್ ಹ್ಯಾಕ್ ಆಗಿರುವ ಬಗ್ಗೆ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ದೂರು ನೀಡಿದ್ದರು. ಈ ಕುರಿತು ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಇ-ಮೇಲ್ ಹ್ಯಾಕ್ ಮಾಡಿ ಸ್ನೇಹಿತರಿಗೆ ಹಣ ನೀಡುವಂತೆ ಮನವಿ ಮಾಡಲಾಗಿದೆ ಎಂದು ದೂರಿನಲ್ಲಿ ಶಂಕರ್ ಬಿದರಿ ತಿಳಿಸಿದ್ದರು. ಹಣ ನೀಡುವಂತೆ ಶಂಕರ್ ಬಿದರಿ ಅವರ ಸ್ನೇಹಿತರಿಗೆ ಮೇಲ್ ಕಳುಹಿಸಿ ಆರೋಪಿಗಳು ಮನವಿ ಮಾಡುತ್ತಿದ್ದರು. ಈ ಮೂಲಕ ಶಂಕರ್ ಬಿದರಿ ಸ್ನೇಹಿತರಿಂದ 25 ಸಾವಿರ ರೂ. ಹಣವನ್ನು ಆರೋಪಿಗಳು ಪಡೆದಿದ್ದರು.

ಹಣ ಪಡೆದ ಬ್ಯಾಂಕ್ ಖಾತೆದಾರನ ಜಾಲ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಾಗಾಲ್ಯಾಂಡ್​ನಿಂದ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಇಲ್ಲಿನ ಬ್ಯೂಟಿ ಪಾರ್ಲರ್​ನಲ್ಲಿ ಮತ್ತು ಸೇಲ್ಸ್ ಮ್ಯಾನ್​ಗಳಾಗಿ ಕೆಲಸ ಮಾಡುತ್ತಿದ್ದರು. ಕಡಿಮೆ ಸಮಯದಲ್ಲಿ ಹೆಚ್ಚಿನ ದುಡ್ಡು ಮಾಡುವ ಉದ್ದೇಶದಿಂದ ಆನ್ ಲೈನ್ ವಂಚನೆಗೆ ಇಳಿದಿದ್ದರು.

ಇದನ್ನೂ ಓದಿ: Chikmagalur Crime: ಚಿಕ್ಕಮಗಳೂರಿನಲ್ಲಿ ನಡೆದ ಸಿನಿಮೀಯ ದರೋಡೆ ಕೇಸ್​ಗೆ ಹೊಸ ಟ್ವಿಸ್ಟ್; ಮತ್ತೆ 4 ಜನರ ಬಂಧನ

ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡ ಬಳಿಕ ಅವರ ಸ್ನೇಹಿತರ ಬಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಸಾರ್ವಜನಿಕರ ಬಳಿ ಹಣ ಪಡೆಯೋ ಸಲುವಾಗಿ 60ಕ್ಕೂ ಹೆಚ್ಚು ಬ್ಯಾಂಕ್ ಖಾತೆಯನ್ನು ಈ ಗ್ಯಾಂಗ್ ತೆರೆದಿತ್ತು. ನಾಗಾಲ್ಯಾಂಡ್ ಮೂಲದ ನಿರುದ್ಯೋಗಿ ಯುವಕ ಯುವತಿಯರ ಆಧಾರ್ ಕಾರ್ಡ್, ಬಾಡಿಗೆ ಕರಾರು ಪತ್ರ, ಪ್ಯಾನ್ ಕಾರ್ಡ್ ಪಡೆದು ಬ್ಯಾಂಕ್ ಖಾತೆ ಓಪನ್ ಮಾಡಲಾಗುತ್ತಿತ್ತು.

ಆರೋಪಿಗಳು ನವೆಂಬರ್​ನಿಂದ ಈವರೆಗೆ ಸುಮಾರು 60 ಬ್ಯಾಂಕ್ ಖಾತೆ ತೆರೆದಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ ಕೆಲವು ಆರೋಪಿಗಳು ಕಣ್ಮರೆಯಾಗಿದ್ದಾರೆ. ಆಗ್ನೇಯ ವಿಭಾಗ ಸಿಇಎನ್ ಪೊಲೀಸರಿಂದ ಅವರಿಗಾಗಿ ಶೋಧ ಮುಂದುವರೆದಿದ್ದು, ಸದ್ಯಕ್ಕೆ ಮೂವರನ್ನು ಬಂಧಿಸಲಾಗಿದೆ.
Published by: Sushma Chakre
First published: March 10, 2021, 8:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories