ಹಾಡಹಗಲೇ ಮನೆ ಮಾಲೀಕಳ ಕಗ್ಗೊಲೆ; ವೃದ್ಧೆಯ ಕತ್ತು ಸೀಳಿ ಹತ್ಯೆ ಮಾಡಿದ್ದ ದಂಪತಿ ಬಂಧನ

Bengaluru Murder: ರಾಯಚೂರು ಮೂಲದ ವೀರೇಶ್​ ಮತ್ತು ಚೈತ್ರಾ ಬೆಂಗಳೂರಿನಲ್ಲಿ ತಾವು ಬಾಡಿಗೆಗೆ ಇದ್ದ ಮನೆಯ ಮಾಲೀಕಳಾದ ಅಜ್ಜಿಯನ್ನು ಹಗಲು ಹೊತ್ತಿನಲ್ಲೇ ಕತ್ತು ಸೀಳಿ ಕೊಲೆ ಮಾಡಿ, ಹಣ, ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದರು.

news18-kannada
Updated:August 26, 2020, 8:36 AM IST
ಹಾಡಹಗಲೇ ಮನೆ ಮಾಲೀಕಳ ಕಗ್ಗೊಲೆ; ವೃದ್ಧೆಯ ಕತ್ತು ಸೀಳಿ ಹತ್ಯೆ ಮಾಡಿದ್ದ ದಂಪತಿ ಬಂಧನ
ಕೊಲೆಯಾದ ವೃದ್ಧೆ ಜಯಮ್ಮ
  • Share this:
ಬೆಂಗಳೂರು (ಆ. 26): ಬೆಂಗಳೂರಿನಲ್ಲಿ ವೃದ್ದೆಯ ಕತ್ತು ಸೀಳಿ ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಯಚೂರು ಮೂಲದ ವೀರೇಶ್, ಆತನ ಪತ್ನಿ ಚೈತ್ರಾ ಮತ್ತು ಪ್ರಶಾಂತ್ ಬಂಧಿತ ಆರೋಪಿಗಳು.

ಬೆಂಗಳೂರಿನ ಕಾಡುಗೋಡಿಯ ಚನ್ನಸಂದ್ರದಲ್ಲಿ ವೃದ್ದ ಮಹಿಳೆಯ ಭೀಕರ ಕೊಲೆ ನಡೆದಿತ್ತು. ಹಾಡಹಗಲೇ ವೃದ್ದೆಯ ಕೊಲೆ ಮಾಡಿ, ಮನೆ ದರೋಡೆ ಮಾಡಲಾಗಿತ್ತು. ಆಗಸ್ಟ್ 12ರಂದು ಬೆಳಗ್ಗೆ 10.30ರ ಸುಮಾರಿಗೆ ಈ ಘಟನೆ ನಡೆದಿತ್ತು. ಹಗಲು ಹೊತ್ತಿನಲ್ಲೇ ನಡೆದ ಈ ಘಟನೆ ಸುತ್ತಮುತ್ತಲಿನ ಜನರಲ್ಲಿ ಆತಂಕ ಮೂಡಿಸಿತ್ತು. 65 ವರ್ಷದ ಜಯಮ್ಮ ಅವರನ್ನು ಕೊಲೆ ಮಾಡಿ, ಮನೆಯಲ್ಲಿದ್ದ 45 ಲಕ್ಷ ರೂ. ಹಣ, 88 ಗ್ರಾಂ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದರು.

ಇದೀಗ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿದ್ದು, ಕೊಲೆ ಮಾಡಿರುವ ದಂಪತಿ ಕಳೆದ ಎರಡು ವರ್ಷಗಳಿಂದ ವೃದ್ಧೆಯ ಮನೆಯಲ್ಲಿ ಬಾಡಿಗೆಗೆ ಇದ್ದರು. ವೀರೇಶ್​ ಮತ್ತು ಚೈತ್ರಾ ತಾವು ಬಾಡಿಗೆಗೆ ಇರುವ ಅಜ್ಜಿಯನ್ನೇ ಕೊಲೆ ಮಾಡಿ, ಹಣ, ಚಿನ್ನಾಭರಣ ದೋಚಿದ್ದಾರೆ. ಲಾಕ್​ಡೌನ್​ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದಂಪತಿ ಕಳ್ಳತನ ಮಾಡಲು ನಿರ್ಧರಿಸಿದ್ದರು.

ಇದನ್ನೂ ಓದಿ: ನೆಲಮಂಗಲದಲ್ಲಿ ಭೀಕರ ಸರಣಿ ಅಪಘಾತ: ಕೂದಲೆಳೆ‌ ಅಂತರದಲ್ಲಿ 7 ಜನ ಪಾರು

ವೀರೇಶ್ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಆತನ ಪತ್ನಿ ಚೈತ್ರಾ ಕಂಪ್ಯೂಟರ್ ಆಪರೇಟರ್ ಆಗಿದ್ದಳು. ಆದರೆ, ಕೊರೊನಾ ಲಾಕ್​ಡೌನ್​ನಿಂದ ತೀವ್ರ ತೊಂದರೆಗೆ ಒಳಗಾಗಿದ್ದ ದಂಪತಿ ತಮ್ಮ ಊರಿನಿಂದ ಪ್ರಶಾಂತ್ ಎಂಬುವವನನ್ನು ಕರೆಸಿಕೊಂಡು ವೃದ್ಧೆಯ ಹತ್ಯೆ ಮಾಡಿದ್ದರು. ಮನೆಯಲ್ಲಿ ವೃದ್ದೆ ಜಯಮ್ಮ ಹಾಗೂ ಅವರ ಪತಿ ಅಪ್ಪಯ್ಯಣ್ಣ ವಾಸವಾಗಿದ್ದರು. ಆಗಸ್ಟ್ 12ರಂದು ಬೆಳಗ್ಗೆ ಅಪ್ಪಯ್ಯಣ್ಣ ಕರೆಂಟ್ ಬಿಲ್ ಕಟ್ಟಲು ಹೊರಹೋಗಿದ್ದರು.

ಈ ವೇಳೆ ಜಯಮ್ಮ ಒಂಟಿಯಾಗಿದ್ದನ್ನು ತಿಳಿದ ಮೂವರು ಆಕೆಯ ಮನೆಗೆ ನುಗ್ಗಿ, ಕತ್ತು ಸೀಳಿ ಕೊಲೆ ಮಾಡಿದ್ದರು. ಈ ಬಗ್ಗೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು‌. ದಂಪತಿಗಳನ್ನು ಬಂಧಿಸಿರುವ ಕಾಡುಗೋಡಿ ಪೊಲೀಸರು, ಕೊಲೆ ಬಳಿಕ ಕದ್ದ ಹಣ, ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.
Published by: Sushma Chakre
First published: August 26, 2020, 8:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading