HOME » NEWS » State » BANGALORE CRIME POLICE HEAD CONSTABLE DIED AFTER KILLER BMTC BUS HITS HIS BIKE IN BENGALURU KMTV SCT

Bangalore Crime: ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿಗೆ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಬಲಿ!

Bangalore Crime: ಈ ಬಾರಿ ಕಿಲ್ಲರ್ ಬಿಎಂಟಿಸಿಗೆ ಪ್ರಾಣ ತೆತ್ತಿರೋದು 47 ವರ್ಷದ ರಾಮಾಚಾರಿ ಎಂಬ ಪೊಲೀಸ್ ಹೆಡ್ ಕಾನ್ಸ್‌ಟೇಬಲ್. ನಿನ್ನೆ ಮಧ್ಯಾಹ್ನ ಬೈಕ್ ನಲ್ಲಿ ಮಾಗಡಿ ರಸ್ತೆಯಲ್ಲಿ ಹೋಗುವಾಗ, ಕಿಲ್ಲರ್ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಆಗ ರಾಮಾಚಾರಿ ತಲೆ ಮೇಲೆ ಬಿಎಂಟಿಸಿ ಬಸ್ ಚಕ್ರ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

news18-kannada
Updated:March 5, 2021, 7:45 AM IST
Bangalore Crime: ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿಗೆ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಬಲಿ!
ಬಿಎಂಟಿಸಿ ಸಾರಿಗೆ
  • Share this:
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಎಂದರೆ ಜನರು ಬೆಚ್ಚಿಬಿದ್ದು ಮಾರುದ್ದ ದೂರ ನಿಲ್ಲುತ್ತಾರೆ. ಕಿಲ್ಲರ್ ಅನ್ನೋ ಕುಖ್ಯಾತಿ ಪಡೆದಿರೋ ಬಿಎಂಟಿಸಿಗಳು ಯದ್ವಾತದ್ವಾ ಸಂಚರಿಸಿ ಜನರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತವೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದ್ದು ನಿನ್ನೆ ಓರ್ವ ಹೆಡ್ ಕಾನ್ಸ್ ಟೇಬಲ್ ಬಿಎಂಟಿಸಿ ಬಸ್ ಗೆ ಬಲಿಯಾಗಿದ್ದಾನೆ.

ಸಿಲಿಕಾನ್ ಸಿಟಿ‌ ಬೆಂಗಳೂರಿನಲ್ಲಿ ಓಡಾಡೋವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಅದರಲ್ಲೂ ಕಿಲ್ಲರ್ ಅನ್ನೋ ಹಣೆಪಟ್ಟಿ ಕಟ್ಟಿಕೊಂಡಿರೊ ಬಿಎಂಟಿಸಿ ಬಸ್ ಗಳು ಬರುತ್ತಿವೆ ಎಂದರೆ 100 ಪಟ್ಟು ಜಾಗೃತರಾಗಿರಲೇಬೇಕು. ಯಾಕೆಂದರೆ ಯರ್ರಾಬಿರ್ರಿಯಾಗಿ ರಸ್ತೆಯಲ್ಲಿ ಸಂಚರಿಸೋ ಬಿಎಂಟಿಸಿಗಳಿಗೆ ಹಿಂದೆ ಮುಂದೆ ಅಕ್ಕಪಕ್ಕ ಯಾರು ಹೋಗ್ತಿದ್ದಾರೆ ಅನ್ನೋದೆ ಕಾಣೋದಿಲ್ಲ. ಹೀಗೆ ನಿನ್ನೆ ಕೂಡ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಕಿಲ್ಲರ್ ಬಿಎಂಟಿಸಿ ಬಸ್ ಅಟ್ಟಹಾಸ ಮೆರೆದು ಬೈಕ್ ಗೆ ಡಿಕ್ಕಿ ಹೊಡೆದಿದೆ. ಬಿಎಂಟಿಸಿ ಬಸ್ ರೌದ್ರಾವತಾರಕ್ಕೆ ಓರ್ವ ಬೈಕ್ ಸವಾರ ಬಲಿಯಾಗಿದ್ದಾನೆ.

ಈ ಬಾರಿ ಕಿಲ್ಲರ್ ಬಿಎಂಟಿಸಿಗೆ ಪ್ರಾಣ ತೆತ್ತಿರೋದು ಪೊಲೀಸ್ ಹೆಡ್ ಕಾನ್ಸ್‌ಟೇಬಲ್. 47 ವರ್ಷದ ರಾಮಾಚಾರಿ ಎಂಬುವವರು ಬೆಂಗಳೂರಿನ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಬುಧವಾರ ರಾತ್ರಿ ಪಾಳಿ ಕರ್ತವ್ಯ ಮುಗಿಸಿದ್ದ ಹೆಡ್ ಕಾನ್ಸ್ ಟೇಬಲ್ ರಾಮಾಚಾರಿ ಬ್ಯಾಡರಹಳ್ಳಿಯಲ್ಲಿರೊ ಮನೆಗೆ ತೆರಳಿದ್ದರು. ಬಳಿಕ ನಿನ್ನೆ ಮಧ್ಯಾಹ್ನ ಬೈಕ್ ನಲ್ಲಿ ಮಾಗಡಿ ರಸ್ತೆಯಲ್ಲಿ ಹೋಗುವಾಗ, ಕಿಲ್ಲರ್ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಆಗ ಬೈಕ್ ನಿಂದ ಕೆಳಕ್ಕೆ ಬಿದ್ದ ಹೆಡ್ ಕಾನ್ಸ್ ಟೇಬಲ್ ರಾಮಾಚಾರಿ ತಲೆ ಮೇಲೆ ಬಿಎಂಟಿಸಿ ಬಸ್ ನ ಚಕ್ರ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಅಮಾನತು ಮಾಡಿದರೂ ದಿನವೂ ಸದನಕ್ಕೆ ಬಂದು ನ್ಯಾಯ ಕೇಳುತ್ತೇನೆ; ಭದ್ರಾವತಿ ಶಾಸಕ ಸಂಗಮೇಶ್ ಆಕ್ರೋಶ

ಇನ್ನು, ಬಿಎಂಟಿಸಿ ಬಸ್ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಗಡಿ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ಬಸ್ ತನ್ನ ಮುಂಭಾಗದಲ್ಲಿ ಹೋಗುತ್ತಿದ್ದ ಬೈಕ್ ಗೆ ಏಕಾಏಕಿ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಸವಾರ ನೆಲಕ್ಕೆ ಬಿದ್ದಿದ್ದು, ಬಸ್ ಆತನ ಮೇಲೆ ಹರಿದಿದೆ. ಬಸ್ ಹರಿದ ಪರಿಣಾಮ ಹೆಡ್ ಕಾನ್ಸ್‌ಟೇಬಲ್ ರಾಮಾಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಬಳಿಕ ಬ್ಯಾಡರಹಳ್ಳಿ ಪೊಲೀಸರು ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಇನ್ನೂ ಹೆಡ್ ಕಾನ್ಸ್‌ಟೇಬಲ್ ರಾಮಾಚಾರಿ ಕರ್ತವ್ಯದ ಒತ್ತಡದಿಂದ ಬಳಲಿದ್ದನಂತೆ. ಇತ್ತೀಚೆಗೆ ಫ್ರೀಡಂಪಾರ್ಕ್ ಸೇರಿ‌ ನಗರದ ಹಲವೆಡೆ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದು, ಪೊಲೀಸ್‌ ಸಿಬ್ಬಂದಿಗೆ ಒತ್ತಡ ಹೆಚ್ಚಿದೆಯಂತೆ. ಹೀಗಾಗಿ ವಿಶ್ರಾಂತಿಯಿಲ್ಲದೇ ಹೈರಾಣಾಗಿದ್ದ ರಾಮಾಚಾರಿ, ಬೈಕ್ ನಲ್ಲಿ ಹೋಗುವಾಗ ಬಿಎಂಟಿಸಿ ಬಸ್ ನ ಎಡವಟ್ಟಿಗೆ ಗಲಿಬಿಲಿಗೆ ಒಳಗಾಗಿ ಅಪಘಾತಕ್ಕೊಳಗಾಗಿದ್ದಾನೆ ಅನ್ನೋದು ಪೊಲೀಸ್ ಸಿಬ್ಬಂದಿ ಮಾತು.
ಸದ್ಯ ಈ ಬಗ್ಗೆ ಬ್ಯಾಡರಹಳ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಬಸ್ ಮತ್ತು ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Published by: Sushma Chakre
First published: March 5, 2021, 7:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories