HOME » NEWS » State » BANGALORE CRIME NIGERIA YOUTHS ARRESTED IN BENGALURU FOR SELLING COCAINE DRUG SCT

Bangalore Crime: ಬೆಂಗಳೂರಿನಲ್ಲಿ ಕೊಕೇನ್ ಮಾರುತ್ತಿದ್ದ ನೈಜೀರಿಯಾ ಪ್ರಜೆಗಳ ಬಂಧನ

Crime News: ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ಸೇರಿ ಹಲವು ಮಂದಿಗೆ ಆ ಇಬ್ಬರು ಆರೋಪಿಗಳು ಕೊಕೇನ್ ಮಾರಾಟ ಮಾಡುತ್ತಿದ್ದರು. ಆರೋಪಿಗಳಿದ್ದ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಲಕ್ಷಾಂತರ ಮೌಲ್ಯದ ಕೊಕೇನ್ ವಶಕ್ಕೆ ಪಡೆದಿದ್ದಾರೆ.

news18-kannada
Updated:August 11, 2020, 12:20 PM IST
Bangalore Crime: ಬೆಂಗಳೂರಿನಲ್ಲಿ ಕೊಕೇನ್ ಮಾರುತ್ತಿದ್ದ ನೈಜೀರಿಯಾ ಪ್ರಜೆಗಳ ಬಂಧನ
ನೈಜೀರಿಯಾದ ಬಂಧಿತ ಆರೋಪಿಗಳು
  • Share this:
ಬೆಂಗಳೂರು (ಆ. 11): ಬೆಂಗಳೂರಿನಲ್ಲಿ ಕೊಕೇನ್ ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯ ಪ್ರಜೆಗಳನ್ನು ಬಂಧಿಸಲಾಗಿದೆ. ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದ ಅವರು ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಸಿಸಿಬಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ನೈಜೀರಿಯದ ಕ್ರಿಸ್ಟಿಯನ್ ಒಜೋಮೆನಾ ಹಾಗೂ ಓಕ್ನೊಕೊ ಬೆಂಜಮಿನ್ ಎಂಬುವವರು ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ತಿರುಮೇನಹಳ್ಳಿ ಅಪಾರ್ಟ್​ಮೆಂಟ್​ನಲ್ಲಿ ಕೊಕೇನ್ ಮಾರಾಟ ಮಾಡುತ್ತಿದ್ದರು. ನೈಜೀರಿಯದಿಂದ ಬ್ಯುಸಿನೆಸ್ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಇಲ್ಲಿ ಕೊಕೇನ್ ಮಾರುತ್ತಿದ್ದರು. ಮಾದಕವಸ್ತುಗಳನ್ನು ಖರೀದಿಸಿ, ಬೆಂಗಳೂರಿನಲ್ಲಿ ಮಾರುತ್ತಿರುವ ವಿಷಯ ಪೊಲೀಸರಿಗೆ ಗೊತ್ತಾಗಿತ್ತು.

ಇದನ್ನೂ ಓದಿ: Karnataka Rains: ಭಾರೀ ಗಾಳಿ-ಮಳೆಗೆ ಶಿವಮೊಗ್ಗದ ಸಾಗರದಲ್ಲಿ ಅಪಾರ ಹಾನಿ; ಆರೋಡಿ, ನಂದೋಡಿ ಗ್ರಾಮದಲ್ಲಿ ಭೂಕುಸಿತ

ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ಸೇರಿ ಹಲವು ಮಂದಿಗೆ ಆ ಇಬ್ಬರು ಆರೋಪಿಗಳು ಕೊಕೇನ್ ಮಾರಾಟ ಮಾಡುತ್ತಿದ್ದರು. ಆರೋಪಿಗಳಿದ್ದ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಲಕ್ಷಾಂತರ ಮೌಲ್ಯದ ಕೊಕೇನ್ ವಶಕ್ಕೆ ಪಡೆದಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Youtube Video

ಬೆಂಗಳೂರಿನಲ್ಲಿ ಲಾಕ್​ಡೌನ್ ವೇಳೆಯಲ್ಲೂ ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ಬಂದಿರಲಿಲ್ಲ. ಕೊರೋನಾ ಹಾಟ್​ಸ್ಪಾಟ್ ಆಗಿರುವ ಬೆಂಗಳೂರಿನಲ್ಲಿ  ಈಗಲೂ ದರೋಡೆ, ಕೊಲೆ, ಮಾದಕವಸ್ತು ಮಾರಾಟದಂತಹ ಪ್ರಕರಣಗಳು ನಡೆಯುತ್ತಲೇ ಇವೆ. ನಿಷೇಧಿಸಲ್ಪಟ್ಟಿರುವ ಮಾದಕವಸ್ತುವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯ ಪ್ರಜೆಗಳು ಈಗ ಪೊಲೀಸರ ವಶದಲ್ಲಿದ್ದಾರೆ.
Published by: Sushma Chakre
First published: August 11, 2020, 12:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories